|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನ. 6ರಂದು ನಿವಿಯಸ್ ಮಂಗಳೂರು ಮ್ಯಾರಥಾನ್: ಆಸಕ್ತರ ನೋಂದಣಿಗೆ ಮುಕ್ತ ಅವಕಾಶ

ನ. 6ರಂದು ನಿವಿಯಸ್ ಮಂಗಳೂರು ಮ್ಯಾರಥಾನ್: ಆಸಕ್ತರ ನೋಂದಣಿಗೆ ಮುಕ್ತ ಅವಕಾಶ



ಮಂಗಳೂರು:  ಮಂಗಳೂರಿಗರ ಆರೋಗ್ಯಕರ ಜೀವನಶೈಲಿ ಮತ್ತು ಫಿಟ್‌ನೆಸ್‌ ಅನ್ನು ಸುಧಾರಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ 'ಮಂಗಳೂರು ಮ್ಯಾರಥಾನ್ 2022' ನವೆಂಬರ್‌ 6ರಂದು ನಡೆಯಲಿದೆ.  ಮಂಗಳೂರು ರನ್ನರ್ಸ್ ಕ್ಲಬ್ ಮಂಗಳೂರು ಮ್ಯಾರಥಾನ್‌ನ ಮೊದಲ ಆವೃತ್ತಿಯನ್ನು ಘೋಷಿಸಿದ್ದು, ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಭಾರತ್ ಮಾಲ್‌ನ ಡೆಕಾಥ್ಲಾನ್‌ನಲ್ಲಿ ಜುಲೈ 31 ರ ಭಾನುವಾರ ಬೆಳಿಗ್ಗೆ 7:15 ಕ್ಕೆ ನಡೆಯಿತು.


ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಅಕ್ಷಯ್‌ ಶ್ರೀಧರ್, ಐಎಎಸ್ ಮತ್ತು ಮೆಸ್ಕಾಂ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಗೌರವಾನ್ವಿತ ಓಟಗಾರರಾದ ನಿವೀಯಸ್ ಮಂಗಳೂರು ಮ್ಯಾರಥಾನ್ 2022 ರ ಲೋಗೋವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದ ಅಧಿಕೃತ ವೆಬ್‌ಸೈಟ್ www.mangaloremarathon.com ಉದ್ಘಾಟಿಸಲಾಯಿತು.


ಅಕ್ಷಯ್‌ ಮತ್ತು ಪ್ರಶಾಂತ್ ಅವರು ಹಾಫ್ ಮ್ಯಾರಥಾನ್ ವಿಭಾಗದಲ್ಲಿ ಮುಂಬರುವ ಮ್ಯಾರಥಾನ್‌ಗೆ ಎಲ್ಲರಿಗಿಂತ ಮೊದಲು ನೋಂದಾಯಿಸಿಕೊಂಡರು. ಬಳಿಕ ಮಾತನಾಡಿದ ಅಕ್ಷಯ್‌ ಶ್ರೀಧರ್,  ಓಟವು ಅತ್ಯಂತ ಸುಲಭವಾಗಿ ಎಲ್ಲರೂ ಅಭ್ಯಾಸ ಮಾಡಬಹುದಾದ ಕ್ರೀಡೆಗಳಲ್ಲಿ ಒಂದಾಗಿದೆ; ಇದು ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ ಎಂದರು. ಓಟವನ್ನು ಎಲ್ಲಿಯಾದರೂ, ವರ್ಷದ ಯಾವುದೇ ಸಮಯದಲ್ಲಿ ಮಾಡಬಹುದು ಮತ್ತು ಯಾವುದೇ ನಿರ್ದಿಷ್ಟ ಸಲಕರಣೆಗಳ ಅಗತ್ಯವಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಉದ್ಯೋಗದಷ್ಟೇ ಮಹತ್ವವನ್ನು ಕ್ರೀಡೆಗೂ ನೀಡಬೇಕು ಎಂದು ಒತ್ತಿ ಹೇಳಿದರು.


ಸುಯೋಗ್ ಶೆಟ್ಟಿ, ಸಿಇಒ ನಿವೀಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಡೆಕಾಥ್ಲಾನ್ ಸ್ಟೋರ್ ಮ್ಯಾನೇಜರ್ ಜಿತೇಶ್ ರೈ, ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷ ಅಜಿತ್ ಎ ಮತ್ತು ನಿವೀಸ್ ಮಂಗಳೂರು ಮ್ಯಾರಥಾನ್ 2022 ರ ರೇಸ್ ನಿರ್ದೇಶಕ ಅಭಿಲಾಷ್ ಡೊಮಿನಿಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಮಿತಾ ಡಿಸೋಜಾ ನಿರೂಪಿಸಿದರು.


ನಿವೀಯಸ್ ಮಂಗಳೂರು ಮ್ಯಾರಥಾನ್ 2022 ಎಂಬ ಹೆಸರಿನ ಮ್ಯಾರಥಾನ್‌ನ ಮೊದಲ ಆವೃತ್ತಿಯು ನವೆಂಬರ್ 6, 2022 ರಂದು ಮಂಗಳಾ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ದೀರ್ಘಾವಧಿಯ ಸಮುದಾಯ-ಕೇಂದ್ರಿತ ಓಟದ ಈವೆಂಟ್ ಅನ್ನು ನಡೆಸುವ ಗುರಿಯನ್ನು ಹೊಂದಿದೆ, ಇದು ಎಲ್ಲಾ ಹಂತದ ಕ್ರೀಡಾಪಟುಗಳನ್ನು ಓಡಲು, ಆರೋಗ್ಯಕರ ಜೀವನವನ್ನು ನಡೆಸಲು ಮತ್ತು ಅವರ ವೈಯಕ್ತಿಕ ಫಿಟ್ನೆಸ್ ಅನ್ನು ಸುಧಾರಿಸಲು ಪ್ರೋತ್ಸಾಹಿಸುತ್ತದೆ. ನಿವೀಯಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಈವೆಂಟ್‌ನ ಶೀರ್ಷಿಕೆ ಪ್ರಾಯೋಜಕರಾಗಿದ್ದಾರೆ, ಡೆಕಾಥ್ಲಾನ್ ಸಹ ಪ್ರಾಯೋಜಕರಾಗಿದ್ದಾರೆ. ಈ ಓಟವು ರಮಣೀಯವಾದ ತಣ್ಣೀರುಬಾವಿ ಬೀಚ್ ರಸ್ತೆಯನ್ನು ಒಳಗೊಂಡಿರುತ್ತದೆ, ಇದು ಸುಂದರ ಪ್ರಕೃತಿಯ ವೀಕ್ಷಣೆಯೊಂದಿಗೆ ನಗರ ಹೆದ್ದಾರಿಗಳಲ್ಲಿ ಈ ಮ್ಯಾರಥಾನ್ ಸಾಗುತ್ತದೆ.


ಈವೆಂಟ್ ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ - ಹಾಫ್ ಮ್ಯಾರಥಾನ್ (21.1K), 10K,5K & 2K ಗ್ಯಾಮತ್ ಓಟ/ನಡಿಗೆ ಆರಂಭಿಕರಿಂದ ಹಿಡಿದು ಅನುಭವಿ ಅಥ್ಲೀಟ್‌ಗಳವರೆಗೆ ಎಲ್ಲಾ ಹಂತದ ಓಟಗಾರರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ. ಮೂರು ವಯಸ್ಸಿನ ವಿಭಾಗಗಳಲ್ಲಿ ಅಗ್ರ ಮೂರು ಪುರುಷ ಮತ್ತು ಮಹಿಳಾ ಓಟಗಾರರಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.


ಜೀವನವನ್ನು ಸುಧಾರಿಸುವ ಮತ್ತು ಅತ್ಯಂತ ಕಡಿಮೆ ವೆಚ್ಚದ ಕ್ರೀಡೆಯೇ ಓಟ. ಇದನ್ನು ಪ್ರಾರಂಭಿಸಲು ನಿಮಗೆ ಬೇಕಾಗಿರುವುದು ಒಂದು ಜೋಡಿ ಶೂಗಳು ಮತ್ತು ರಸ್ತೆ ಅಥವಾ ದಾರಿ ಮಾತ್ರ!  ಮಂಗಳೂರು ರನ್ನರ್ಸ್ ಕ್ಲಬ್ ಪ್ರತಿ ಭಾನುವಾರ ಬೆಳಗ್ಗೆ ಗ್ರೂಪ್ ಓಟಗಳನ್ನು ಆಯೋಜಿಸಲಿದ್ದು, ಅನನುಭವಿ ಓಟಗಾರರಿಗೆ ಮಾರ್ಗದರ್ಶನ ನೀಡಲಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು. ರನ್ನರ್ಸ್ ಇನ್‌ಸ್ಟಾಗ್ರಾಮ್ ಖಾತೆಗೆ ಭೇಟಿ ನೀಡಿ ಅಥವಾ ವಾಟ್ಸಾಪ್ 9448284202.


ಮಂಗಳೂರು ರನ್ನರ್ಸ್ ಕ್ಲಬ್ ಬಗ್ಗೆ:

ಮಂಗಳೂರು ರನ್ನರ್ಸ್ ಕ್ಲಬ್ ಮಂಗಳೂರಿನ ವಿವಿಧ ಕ್ಷೇತ್ರಗಳ ಎಲ್ಲಾ ವಯಸ್ಸಿನ ಮತ್ತು ಸಾಮರ್ಥ್ಯದ ಓಟಗಾರರ ವೈವಿಧ್ಯಮಯ ಗುಂಪು. ಓಟದಲ್ಲಿ ಆಸಕ್ತಿಯುಳ್ಳ ಸಮಾನ ಮನಸ್ಕ ಆರು ಜನರ ಗುಂಪಿನಿಂದ ಇದನ್ನು ಸ್ಥಾಪಿಸಲಾಯಿತು. ಒಟ್ಟಿಗೆ ಫಿಟ್ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬದುಕಲು ಬಯಸುವ ಎಲ್ಲಾ ಪಟ್ಟಣದ ಓಟಗಾರರನ್ನು ಒಟ್ಟುಗೂಡಿಸುವುದು ಗುಂಪಿನ ಗುರಿಯಾಗಿದೆ. ಕೇವಲ ಒಂದು ವರ್ಷದಲ್ಲಿ, ಈ ಕ್ಲಬ್ 150 ಸದಸ್ಯರಿಗೆ ಬೆಳೆದಿದೆ. ಕ್ಲಬ್‌ನ ಓಟಗಾರರು ಟಾಟಾ ಮುಂಬೈ ಮ್ಯಾರಥಾನ್, ಊಟಿ ಅಲ್ಟ್ರಾ ಮ್ಯಾರಥಾನ್, ಬೆಂಗಳೂರು ಮ್ಯಾರಥಾನ್ ಮತ್ತು ದಾಂಡೇಲಿ ಅಲ್ಟ್ರಾ ಮ್ಯಾರಥಾನ್ ಸೇರಿದಂತೆ ಹಲವಾರು ಪ್ರಸಿದ್ಧ ಮ್ಯಾರಥಾನ್‌ಗಳಲ್ಲಿ ಸ್ಪರ್ಧಿಸಿದ್ದಾರೆ. MRC ಯ ಸದಸ್ಯರೊಬ್ಬರು ಸತತವಾಗಿ 100 ಹಾಫ್ ಮ್ಯಾರಥಾನ್‌ಗಳಲ್ಲಿ ಓಡಿದ್ದಾರೆ.  MRC ಹಲವಾರು ವರ್ಷಗಳಿಂದ ಹಂಡ್ರೆಡ್ ಡೇಸ್ ಆಫ್ ರನ್ನಿಂಗ್ ಚಾಲೆಂಜ್ ನಲ್ಲಿ ಭಾಗವಹಿಸಿದೆ. ಇದರ ಜೊತೆಗೆ 2016 ರಲ್ಲಿ ಮಂಗಳೂರಿನ ಮೊದಲ ಮ್ಯಾರಥಾನ್ ದಿ ಬಿಗ್ ಬಲಿಪು, 2020 ರಲ್ಲಿ ಬಿಗ್ ಬಲಿಪು ವರ್ಚುವಲ್ ಮ್ಯಾರಥಾನ್ ಮತ್ತು ಮಂಗಳೂರಿನಲ್ಲಿ TCS 10k ವರ್ಚುವಲ್ ಓಟದ ಆಯೋಜನೆಯಲ್ಲಿ ನಮ್ಮ ತಂಡವು ಸಹಾಯ ಮಾಡಿದೆ. ಪ್ರತಿ ಭಾನುವಾರ, ಗುಂಪು ಓಟವನ್ನು ಆಯೋಜಿಸುತ್ತದೆ, ಹೊಸ ಓಟಗಾರರಿಗೆ ತರಬೇತಿ ನೀಡುತ್ತದೆ, ಮಾಸಿಕ ತರಬೇತಿ ಯೋಜನೆಗಳನ್ನು ಒದಗಿಸುತ್ತದೆ ಮತ್ತು ದೇಶಾದ್ಯಂತ ಈವೆಂಟ್‌ಗಳನ್ನು ಆಯೋಜಿಸುತ್ತದೆ ಮತ್ತು ಭಾಗವಹಿಸುತ್ತದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم