ಪೌರಕಾರ್ಮಿಕರ ಪಾಲಿಗೆ ಆಶ್ರಯದಾತನಾದ ನಂಜನಗೂಡು ಶಾಸಕ
ನಂಜನಗೂಡು: ಆಶ್ರಯಕ್ಕೆ ತುಂಡು ಭೂಮಿಯೂ ಇಲ್ಲದೆ ಬಹುಕಾಲದಿಂದ ಅತಂತ್ರ ಸ್ಥಿತಿಯಲ್ಲಿ ಬದುಕಿದ್ದ ಪೌರಕಾರ್ಮಿಕರಿಗೆ ನೆಲೆ ಕಲ್ಪಿಸುವಲ್ಲಿ ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಯಶಸ್ವಿಯಾಗಿದ್ದು, ಶಾಸಕರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ಸುಮಾರು 40 ವಷ೯ಗಳಿಂದಲೂ ವಾಸವಿರುವ ಪೌರಕಾಮಿ೯ಕರಿಗೆ ವಾಸಿಸಲು ಮನೆಗಳಿಲ್ಲ. ಕಾಲೋನಿಯಲ್ಲಿರುವ ಅವರ ಗುಡಿಸಲುಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದವು. ಇದನ್ನರಿತ ಶಾಸಕ ಹರ್ಷವರ್ಧನ್ ಪಟ್ಟು ಬಿಡದೆ, ಪೌರಕಾರ್ಮಿಕರಿಗೆ ಭೂಮಿಯ ಹಕ್ಕುಪತ್ರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಂಜನಗೂಡು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಕಾಯ೯ಕ್ರಮದಲ್ಲಿ ಸಂಸತ್ ಸದಸ್ಯ ವಿ.ಶ್ರೀನಿವಾಸ ಪ್ರಸಾದ್ ಅವರ ಹಸ್ತದಿಂದ ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಣೆಯಾಯಿತು. ಶಾಸಕ ಬಿ.ಹಷ೯ವಧ೯ನ್ ಅವರು ಅಧ್ಯಕ್ಷತೆ ವಹಿಸಿದ್ದರು.
ಹರ್ಷವರ್ಧನ್ ಅವರ ತಾತ ಬಿ.ಬಸವಲಿಂಗಪ್ಪ 50 ವರ್ಷಗಳ ಹಿಂದೆ ಪೌರಾಡಳಿತ ಸಚಿವರಾಗಿದ್ದಾಗ ತಲೆಯ ಮೇಲೆ ಮಲಹೊರುವ ಪದ್ದತಿಯನ್ನು ನಿಷೇಧಿಸಿದ್ದರು. 2022 ರ ಜುಲೈ 26ಕ್ಕೆ 50 ವಷ೯ ತುಂಬಿದ ಸಲುವಾಗಿ ಹುಲ್ಲಹಳ್ಳಿಯ ಪೌರಕಾಮಿ೯ಕರಿಗೆ ಅಂದು ಸಾಂಕೇತಿಕವಾಗಿ ಹಕ್ಕುಪತ್ರಗಳನ್ನ ವಿತರಣೆ ಮಾಡಲಾಗಿತ್ತು. ಐದೇ ದಿನಗಳಲ್ಲಿ 31-07-2022 ರಂದೇ ಎಲ್ಲಾ ಆಡಳಿತಾತ್ಮಕ ಕೆಲಸ ಮುಗಿಸಿ ಹಕ್ಕುಪತ್ರ ಸಿದ್ದಪಡಿಸಿ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಅವರ ಜನ್ಮದಿನ ಆಗಸ್ಟ್ 6 ರಂದು ವಿತರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಉಪರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಶ್ರೀನಿವಾಸ ಪ್ರಸಾದ ಅವರು ದೆಹಲಿಯಲ್ಲಿದ್ದರು. ಹಾಗಾಗಿ ಅದು ಸಾಧ್ಯವಾಗಲಿಲ್ಲ. 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಯ೯ಕ್ರಮದಲ್ಲಿ ವಿತರಿಸಲು ಯೋಜನೆ ಸಿದ್ದಗೊಂಡಿತ್ತು. ಅಷ್ಟರಲ್ಲಿ ಕೆಲವು ಗೊಂದಲಗಳು ಸೃಷ್ಟಿಯಾಗಿದ್ದವು. ಇದೀಗ ಗೊಂದಲಗಳೆಲ್ಲ ಇತ್ಯರ್ಥವಾಗಿ ಹಕ್ಕುಪತ್ರಗಳನ್ನು ಪೌರಕಾರ್ಮಿಕರ ಕೈಸೇರಿಸುವಲ್ಲಿ ಹರ್ಷವರ್ಧನ್ ಅವರಿಗೆ ಯಶಸ್ಸು ಸಿಕ್ಕಿತು.
ಅಂದು ಡಿ.ದೇವರಾಜು ಅರಸು ಅವರ ಮಂತ್ರಿಮಂಡಲದಲ್ಲಿ ಬಿ.ಬಸವಲಿಂಗಪ್ಪ ಪೌರಾಡಳಿತ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ತಲೆಯ ಮೇಲೆ ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿದ್ದರು. ಇಂದು ಡಿ.ದೇವರಾಜು ಅರಸು ಅವರ ಜನ್ಮದಿನದಂದೇ ಬಿ.ಬಸವಲಿಂಗಪ್ಪನವರ ಮೊಮ್ಮಗ ಶಾಸಕ ಬಿ. ಹರ್ಷವರ್ಧನ್ ಅವರು, ಸಾಮಾಜಿಕ ಸಾಮರಸ್ಯದ ಹರಿಕಾರ ವಿ. ಶ್ರೀನಿವಾಸ ಪ್ರಸಾದ್ ರ ಅಮೃತ ಹಸ್ತದ ಮೂಲಕ ಹುಲ್ಲಹಳ್ಳಿಯ ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಿದ್ದಾರೆ. ಇದು ಶಾಸಕರ ಮಹತ್ವಕಾಂಕ್ಷೆಯ ಯೋಜನೆ ಕೂಡ ಆಗಿತ್ತು.
ಇಡೀ ರಾಜ್ಯದಲ್ಲಿ ಎಲ್ಲೂ ಕೂಡ ಪೌರಕಾರ್ಮಿಕರಿಗೆ ನಿವೇಶನ ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತಿಲ್ಲ. ಆದರೆ ನಂಜನಗೂಡು ಕ್ಷೇತ್ರದಲ್ಲಿ ಮಾತ್ರ ಹಕ್ಕುಪತ್ರ ವಿತರಣೆ ಮಾಡಿರುವುದು ವಿಶೇಷ. ಇದಕ್ಕಾಗಿ ಶಾಸಕರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.
ಅಂದು ತಾತ 'ಪೌರಕಾಮಿ೯ಕರು' ಎಂದು ಹೆಸರಿಟ್ಟರು; ಇಂದು ಮೊಮ್ಮಗ 'ಶಾಶ್ವತ ಸೂರು' ಕಲ್ಪಿಸಿದರು.
ಮೂರ್ನಾಲ್ಕು ತಲೆಮಾರುಗಳಿಂದಲೂ ಇದೇ ಪ್ರದೇಶದಲ್ಲಿ ವಾಸಿಸುತ್ತಿರುವ ಪೌರಕಾಮಿ೯ಕರು ಸ್ಥಳೀಯ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾಯ೯ ನಿವ೯ಹಿಸುತ್ತಿದ್ದಾರೆ. ತಮ್ಮ ಸಮಸ್ಯೆ ಬಗೆಹರಿಸುವಂತೆ ರಾಷ್ಟ್ರೀಯ ಸಫಾಯಿ ಕಮ೯ಚಾರಿ, ರಾಜ್ಯ ಸಫಾಯಿ ಕಮ೯ಚಾರಿ ಹಾಗೂ ಹಿಂದಿನ ಸಕಾ೯ರದ ಮುಖ್ಯಮಂತ್ರಿ ಅವರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದಕ್ಕಾಗಿ ಪೌರಕಾಮಿ೯ಕರು ದಲಿತ ಸಂಘಟನೆಗಳ ಆಶ್ರಯದಲ್ಲಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದರು ಇದಕ್ಕೂ ಸಹ ಯಾರೂ ಕಿವಿಗೊಟ್ಟಿರಲಿಲ್ಲ.
ಗ್ರಾಮದ ಹೊರವಲಯದ ತಗ್ಗು ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದ ಸುಮಾರು 28 ಕುಟುಂಬಗಳು ವಾಸಿಸುವ ಪ್ರದೇಶ ಕಳೆದ ಬಾರಿ ಕಪಿಲ ನದಿಯ ಪ್ರವಾಹದಿಂದ ಮುಳುಗಡೆಯಾಗಿತ್ತು. ಮಾಹಿತಿ ತಿಳಿದ ಶಾಸಕ 'ಬಿ. ಹರ್ಷವರ್ಧನ್' ಇವರನ್ನೆಲ್ಲಾ ಸೂಕ್ತ ಸ್ಥಳಕ್ಕೆ ವಗಾ೯ಯಿಸಿ ಆಶ್ರಯ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ತಾಲೂಕು ಆಳಿತವು ತಾತ್ಕಲಿಕ ಪುನವ೯ಸತಿ ಕಲ್ಪಿಸಿತ್ತು. ಹಲವು ದಿನಗಳ ನಂತರ ಶಾಸಕರು ಅಧಿಕಾರಿಗಳ ಜೊತೆ ಕಾಲೋನಿಗೆ ಭೇಟಿ ನೀಡಿದ್ದರು. ಈ ಸಂದಭ೯ದಲ್ಲಿ, ಪೌರಕಾಮಿ೯ಕರು ವಾಸಿಸುತ್ತಿರುವ ಜಾಗ ಸರಕಾರಿ ಓಣಿ ಎಂದು ದಾಖಲೆಗಳಲ್ಲಿ ನಮೂದಾಗಿರುವುದರಿಂದ ಈ ಪ್ರದೇಶದಲ್ಲಿ ಸಕಾ೯ರದ ವಸತಿ ಯೋಜನೆ ಮೂಲಕ ಮನೆಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದನ್ನ ಆಲಿಸಿದ ಶಾಸಕರು ಗ್ರಾಮದಲ್ಲಿರುವ ಖಾಲಿ ಇರುವ ಸಕಾ೯ರಿ ಜಾಗವನ್ನು ಗುರುತಿಸಿ ತಮ್ಮ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಅದರಂತೆ ತಹಸೀಲ್ದಾರರು ಗ್ರಾಮದ ಹಳೆ ನಾಡಕಛೇರಿ ಇದ್ದ ಜಾಗದಲ್ಲಿ ಪೌರಕಾಮಿ೯ಕ ಕುಟುಂಬಗಳಿಗೆ ಶಾಶ್ವಾತ ಪುನವ೯ಸತಿ ಕಲ್ಪಿಸಲು ಮುಂದಾಗಿದ್ದರು. ಆದರೆ ಜಾಗ ಒಂದು ಎಕರೆ ಗಿಂತ ಕಡಿಮೆ ಇದ್ದು ಲೇಔಟ್ ಮಾಡಲು ಸಾಧ್ಯವಾಗದ ಕಾರಣ ಕೈ ಚೆಲ್ಲಿದ್ದರು. ನಂತರ ಶಾಸಕರು ಪಟ್ಟುಬಿಡದೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ಬಿಸಿಎಂ ಹಾಸ್ಟೆಲ್ ಹತ್ತಿರ ಇರುವ 2 ಎಕರೆ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಸೂಚಿಸಿದರು. ಅಷ್ಟರಲ್ಲಾಗಲೇ ಕೊರೋನಾ ಸಂಕಷ್ಟ ಎದುರಾಯಿತು. ಮತ್ತು ಗ್ರಾಮಪಂಚಾಯಿತಿಯ ಅವಧಿಯೂ ಸಹ ಮುಗಿದಿತ್ತು. ಪಂಚಾಯಿತಿ ರಚನೆ ತಡವಾಗಿದ್ದರಿಂದ ಅಲ್ಲಿನ ಆಡಳಿತಾಧಿಕಾರಿಯ ಮೂಲಕವೇ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಜಾಗದ ಕುರಿತು ದಾಖಲೆ ನೀಡಿ ಬಡಾವಣೆ ಮಾಡಲು ಶಾಸಕರು ಕೋರಿದ್ದರು.
ಕಳೆದ ಬಾರಿ ಪೌರಕಾರ್ಮಿಕರು ವಾಸವಿರುವ ಕಾಲೋನಿಗೆ ಭೇಟಿ ನೀಡಿದ್ಧ ಶಾಸಕ ಬಿ.ಹರ್ಷವರ್ಧನ್ ಅವರು ಶಾಶ್ವತ ನೆಲೆ ಕಲ್ಪಿಸುವ ಭರವಸೆ ನೀಡಿದ್ದರು.
'ಯಾವುದೋ ಜಾಗ ತೋರಿಸಿ ಗುಡಿಸಲು ಕಟ್ಟಿಕೊಳ್ಳಿ ಎಂದು ನಾನು ನಿಮಗೆ ಹೇಳುವುದಿಲ್ಲ; ಆ ರೀತಿ ಮಾಡುವುದರಿಂದ ಮತ್ತೆ ಕೆಲವು ದಿನಗಳ ನಂತರ ನಿಮ್ಮನ್ನು ಅಲ್ಲಿಂದ ಒಕ್ಕಲೆಬ್ಬಿಸಬಹುದು ಹಾಗಾಗಿ ಶಾಶ್ವತವಾಗಿ ನೆಲೆಸಿಗುವಂತೆ ಜಿಲ್ಲಾಧಿಕಾರಿಗಳ ಮೂಲಕ ಬಡಾವಣೆ ನಿರ್ಮಾಣವಾಗಿ ಬಂದ ನಂತರ ನಿಮಗೆ ಹಕ್ಕುಪತ್ರಗಳನ್ನ ವಿತರಿಸಿ, ರಸ್ತೆ, ಚರಂಡಿಗೆ ಸ್ಥಳ ನಿಗದಿ ಮಾಡಿ ಮೂಲಭೂತ ಸೌಕಯ೯ ಒದಗಿಸುವ ನಿಟ್ಟಿನಲ್ಲಿ ನಾನು ಕ್ರಮವಹಿಸುತ್ತೇನೆ' ಎಂದಿದ್ದರು.
"ನಿಮಗೆ 'ಪೌರಕಾಮಿ೯ಕರು' ಎಂದು ಹೆಸರುಕೊಟ್ಟವರೇ ನಮ್ಮ ತಾತ 'ಬಿ.ಬಸವಲಿಂಗಪ್ಪ'. ಅವರ ಮೊಮ್ಮಗನಾಗಿ ನಾನು ನಿಮ್ಮ ಕೈ ಬಿಡುವ ಪ್ರಶ್ನೆಯೇ ಇಲ್ಲ " ಎಂದು ಅಭಯ ನೀಡಿದ್ದರು. ಅದರಂತೆ ಹಠ ಹಿಡಿದು ಸಕಾ೯ರದ ಗಮನ ಸೆಳೆದು ಈಗ ಸುಮಾರು 1.1 ಎಕರೆ ಜಾಗ ಮಂಜೂರಾತಿ, ಹಕ್ಕುಪತ್ರ ವಿತರಣೆಗೆ ಸಕಾ೯ರದಿಂದ ಮಂಜೂರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಡಾವಣೆಗೆ 'ಬಿ.ಬಸವಲಿಂಗಪ್ಪ ಬಡಾವಣೆ' ಎಂದು ಹೆಸರಿಸಿ ಅನಾವರಣ ಮಾಡಿದ್ದಾರೆ.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಶುಭ ಸಂದಭ೯ದಲ್ಲಿ ಪೌರಕಾಮಿ೯ಕರನ್ನು ಮುಖ್ಯವಾಹಿನಿಗೆ ತರಲು ಶಾಸಕ ಹಷ೯ವಧ೯ನ್ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆ ದಿಸೆಯಲ್ಲಿ ತಾಲೂಕಿನ ಮಹದೇವನಗರದಲ್ಲೂ ಸಹ ಪೌರಕಾಮಿ೯ರಿಗಾಗಿ ಮತ್ತೊಂದು ಬಡಾವಣೆ ನಿಮಾ೯ಣ ಮಾಡಬೇಕೆಂಬ ಇಚ್ಛೆಯನ್ನು ಶಾಸಕರು ಹೊಂದಿದ್ದಾರೆ.