|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಮಹಾವಿದ್ಯಾಲಯದಲ್ಲಿ 'ಮೀಡಿಯಾ ವಿವೇಚನ್' ರಾಜ್ಯ ಮಟ್ಟದ ಮಾಧ್ಯಮ ಸಮ್ಮೇಳನ

ವಿವೇಕಾನಂದ ಮಹಾವಿದ್ಯಾಲಯದಲ್ಲಿ 'ಮೀಡಿಯಾ ವಿವೇಚನ್' ರಾಜ್ಯ ಮಟ್ಟದ ಮಾಧ್ಯಮ ಸಮ್ಮೇಳನ

ಪುತ್ತೂರು ಆ.5: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಮತ್ತು ಪದವಿ ಪತ್ರಿಕೋದ್ಯಮ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ರಾಜ್ಯ ಮಟ್ಟದ ಮಾಧ್ಯಮ ಸಮ್ಮೇಳನ ‘ಮೀಡಿಯಾ ವಿವೇಚನ್’ ಆಗಸ್ಟ್ 8ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬೆಂಗಳೂರಿನ ಏಷಿಯಾನೆಟ್ ಸುವರ್ಣ ಸುದ್ದಿವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್‌ ಉದ್ಘಾಟಿಸಲಿದ್ದಾರೆ.


ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ ಪ್ರಭಾಕರ ಭಟ್ ವಹಿಸಲಿದ್ದಾರೆ.ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಟ, ಹಿನ್ನೆಲೆ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್, ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್, ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ತಾರಾ ಕರುಣ್ ಉಪಸ್ಥಿತರಿರುತ್ತಾರೆ.


ಈ ಸಂದರ್ಭ ಐದು ಗೋಷ್ಠಿಗಳು ನಡೆಯಲ್ಲಿದ್ದು, ಪೂರ್ವಾಹ್ನದ ಮೊದಲ ಗೋಷ್ಠಿಯಲ್ಲಿ ಏಷಿಯಾನೆಟ್ ಸುವರ್ಣಸುದ್ದಿ ವಾಹಿನಿಯ ಸಂಪಾದಕ ಅಜಿತ್ ಹನಮಕ್ಕನವರ್, ‘ಪತ್ರಿಕೋದ್ಯಮದೊಳಗೆ ನೇರ ದಿಟ್ಟ ನಿರಂತರ’ ಎಂಬ ವಿಷಯದ ಕುರಿತು ಸಂವಾದ ನಡೆಸಲಿದ್ದಾರೆ. ಎರಡನೇ ಗೋಷ್ಟಿಯಲ್ಲಿ ರಂಗಕರ್ಮಿ ಹಾಗೂ ಹಿನ್ನಲೆ ಧ್ವನಿ ಕಲಾವಿದ ದೇವರಾಜ್ ಬಿ. ವಿ, ‘ಹಿನ್ನಲೆ ಧ್ವನಿಯ ಮುಂದಾಳು ಆಗುವುದು ಹೇಗೆ?’, ಮೂರನೇ ಗೋಷ್ಠಿಯಲ್ಲಿ ಮಂಗಳೂರಿನ ಆಕಾಶವಾಣಿಯ ಪ್ರಸರಣ ಅಧಿಕಾರಿ ಲತೀಶ್ ಪಾಲ್ದಾಣೆ ‘ಬಾನುಲಿಯ ಬಾನಂಗಳ’ ಎನ್ನುವುದರ ಕುರಿತು ಮಾತನಾಡಲಿದ್ದಾರೆ.


ಅಪರಾಹ್ನದ ಮೊದಲನೇ ಗೋಷ್ಠಿಯಲ್ಲಿ ಗ್ಲಾನ್ಸ್ಡಿಜಿಟಲ್ ಮೀಡಿಯಾದ ಕನ್ನಡ ವಿಭಾಗದ ಮುಖ್ಯಸ್ಥ ರಾಜೀವ್ ಹೆಗಡೆ ‘ನವಮಾಧ್ಯಮದ ಅವಕಾಶ’ ಹಾಗೂ ಎರಡನೇ ಗೋಷ್ಠಿಯಲ್ಲಿ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ ಕಾರಂತ ಪೆರಾಜೆ, ‘ಅಂಕಣ ಸಾಹಿತ್ಯದ ನಂಟು’ ಎಂಬ ವಿಷಯದ ಕುರಿತು ಗೋಷ್ಠಿ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ 30 ನಿಮಿಷ 60 ಪ್ರಶ್ನೆ ಎಂಬ ರಸಪ್ರಶ್ನೆ ಸ್ಪರ್ಧೆ ನಡೆಯಲಿದ್ದು ವಿಜೇತರಿಗೆ ಪ್ರಥಮ 3000, ದ್ವಿತೀಯ 2000 ಹಾಗೂ ತೃತೀಯ 1000 ನಗದು ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم