ಮಂಗಳೂರು: ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಮಹಿಳಾ ಮಂಡಳಿಯರಿಂದ ಸಂಯೋಜಿಸಲ್ಪಡುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ರಜತ ಸಂಭ್ರಮ, 25ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆಗಸ್ಟ್ 5 ಶುಕ್ರವಾರ ಜರಗಲಿದೆ.
ಅಂದು ಬೆಳಿಗ್ಗೆ 10.30 ಕ್ಕೆ ಕಲಶ ಸ್ಥಾಪನೆ, 12.30 ಕ್ಕೆ ಮಹಾಪೂಜೆ, ನಂತರ ಸೌಭಾಗ್ಯ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ಕಥಾ ಶ್ರವಣ, ಸೌಭಾಗ್ಯ ವಿತರಣೆ ಜರಗಲಿದೆ.
ಅಂದು ಸ್ವರ್ಣ ಕಿರೀಟ ಧಾರಿಣಿ ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಸರ್ವಾಲಂಕಾರ ಪೂಜೆಯೂ ನಡೆಯಲಿದೆ.
ಕ್ಷೇತ್ರದ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಬೋಳಾರ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ