ಮಂಗಳೂರು: ವಿಶ್ವವಿದ್ಯಾನಿಲಯವು ಎಪ್ರಿಲ್/ಮೇ 2022 ರಲ್ಲಿ ನಡೆಸಿದ ಪ್ರಥಮ, ತೃತೀಯ ಮತ್ತು ಪಂಚಮ ಸೆಮಿಸ್ಟರ್‌ನ ಆವರ್ತಿತ ಹಾಗೂ ಪುನರಾವರ್ತಿತ (ಆಯ್ಕೆ ಆಧಾರಿತ ಸೆಮಿಸ್ಟರ್ ಸ್ಕೀಂ) ಸ್ನಾತಕ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಮಂಗಳೂರು ವಿವಿಯ ವೆಬ್‌ಸೈಟ್‌ನಲ್ಲಿ ನಲ್ಲಿ ಪ್ರಕಟಿಸಲಾಗಿರುತ್ತದೆ. ವೀಕ್ಷಿಸಲು ಈ ಕೆಳಗಿನ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ.
1. http://results1.mangaloreuniversity.in/Main/
2. http://results2.mangaloreuniversity.in
ಈ ಬಾರಿ ಮೌಲ್ಯಮಾಪನವನ್ನು ಎಲ್ಲಾ ಗೌಪ್ಯತಾ ಕ್ರಮಗಳೊಂದಿಗೆ ವ್ಯವಸ್ಥಿತವಾಗಿ ನಡೆಸಿದ್ದು, ಮೌಲ್ಯಮಾಪನ ಕೇಂದ್ರದಲ್ಲಿಯೇ ಅಂಕತ:ಖ್ತೀಕರಣ ದಾಖಲಿಸುವ ಪ್ರಕ್ರಿಯೆನ್ನು ವಿವಿ ಸ್ವಯಂ ನಿರ್ವಹಣೆ ಸಾಫ್ಟ್‌ವೇರ್ ಎಂ.ಯು.ಲಿಂಕ್ಸ್ ಆನ್‌ಲೈನ್ ವ್ಯವಸ್ಥೆ ಮೂಲಕ ಸಂಪೂರ್ಣವಾಗಿ ಗಣಕೀಕರಣಗೊಳಿಸಿತ್ತು. ಈ ಕಾರಣದಿಂದಾಗಿ ಕ್ಷಿಪ್ರವಾಗಿ ಹಾಗೂ ದೋಷರಹಿತವಾಗಿ ಫಲಿತಾಂಶಗಳನ್ನು ಕೊನೆಯ ಅಂಕತ:ಖ್ತೀಕರಣ ದಾಖಲಿಸುವ ಪ್ರಕ್ರಿಯೆ ಕೊನೆಗೊಂಡ ಮೂರು ದಿನದಲ್ಲಿ ವಿವಿ ಜಾಲತಾಣದಲ್ಲಿ ಪ್ರಕಟಿಸಲು ಸಾಧ್ಯವಾಗಿದೆ. ಫಲಿತಾಂಶ, ಉತ್ತರ ಪತ್ರಿಕೆಗಳ ವೈಯುಕ್ತಿಕ ವೀಕ್ಷಣೆ ಹಾಗೂ ಮರುಮೌಲ್ಯಮಾಪನದ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.