ವಿವಿ ಸಂಧ್ಯಾ ಕಾಲೇಜು: 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Upayuktha
0


ಮಂಗಳೂರು: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಂಗಣದಲ್ಲಿ 76ನೇ ದಿನಾಚರಣೆಯನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.


ಧ್ವಜಾರೋಹಣದ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ದಾಮೋದರ್ ಎಸ್, ನಮ್ಮ ಸ್ವಾತಂತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ, ನಾವು ನಮ್ಮ ಭಾರತ ಮಾತೆಗೆ ಮತ್ತು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಚಿರಋಣಿಯಾಗಿರಬೇಕು, ಎಂದರು. 


ಪ್ರದಾನ ಭಾಷಣಕಾರ, ನೌಕರರ ಭವಿಷ್ಯ ನಿಧಿ ಕಛೇರಿಯ ನಿವೃತ್ತ ಅಕೌಂಟೆAಟ್ ಚಂದ್ರಹಾಸ್ ಕಣಂತೂರು, ‘ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಚಳುವಳಿಗಳುʼಎಂಬ ವಿಷಯದ ಬಗ್ಗೆ ಮಾತನಾಡಿ, ಅಮರ ಸುಳ್ಯ ಚಳವಳಿ ಮತ್ತು ಮಂಗಳೂರಿನ ಭೀಕರ ರಣಕಟ್ಟೆಯ ಮಹತ್ವವನ್ನು ವಿವರಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಮುಕ್ತ ಭಾರತವನ್ನು ರಕ್ಷಿಸಿಕೊಳ್ಳುವ ಜಾಗೃತಿಗಾಗಿ ಸ್ವಾತಂತ್ರ್ಯ ದಿನಾಚರಣೆ ಬೇಕು. ಈ ದಿನ ದ್ವೇಷ, ಅಸೂಯೆ, ದಾಸ್ಯತ್ವ, ಸ್ವಾರ್ಥ, ಶೋಷಣೆಗಳಿಂದ ಸ್ವತಂತ್ರರಾಗುವ ಸಂಕೇತ, ಎಂದು ಅಭಿಪ್ರಾಯಪಟ್ಟರು.


ಸ್ನಾತಕೋತ್ತರ ತುಳು ಸಂಯೋಜಕ ಡಾ. ಮಾಧವ ಎಂ ಕೆ ಮತ್ತು ಎಂಕಾA ಮತ್ತು ಎಂಬಿಎ (ಐಬಿ) ಸಂಯೋಜಕ ಡಾ ಜಗದೀಶ್ ಸ್ವಾತಂತ್ರ್ಯ ಮಹತ್ವದ ಕುರಿತು ಮಾತನಾಡಿದರು. ಎಂ.ಎ ಕೊಂಕಣಿ ಸಂಯೋಜಕ ಡಾ. ದೇವದಾಸ್ ಪೈ ಮತ್ತು ಜಿಎಸ್ಟಿಯ ಸಂಯೋಜಕ ಡಾ. ಯತೀಶ್ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ರತಿ ವಂದಿಸಿದರು. ಕನ್ನಡ ಉಪನ್ಯಾಸಕಿ ಆಶಾಲತಾ ಕಾರ್ಯಕ್ರಮ ಸಂಯೋಜಿಸಿದರು. ಎಂ.ಎ ತುಳು ಉಪನ್ಯಾಸಕಿ ಪ್ರಶಾಂತಿ ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕಿ ಮಧುಶ್ರೀ ಜೆ ಶ್ರಿಯಾನ್ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು. 


ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top