75ರ ಸ್ವಾತಂತ್ರ್ಯ: ಮುಳಿಯ ಜ್ಯುವೆಲ್ಸ್‌ನಿಂದ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ

Upayuktha
0



ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪುತ್ತೂರಿನ ಮುಳಿಯ ಜ್ಯುವೆಲ್ಸ್‌ ಸಂಸ್ಥೆ 3ರಿಂದ 12 ವರ್ಷದ ಮಕ್ಕಳಿಗಾಗಿ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಿದೆ.


ಸ್ಪರ್ಧೆಯು ಆಗಸ್ಟ್ 14ರಂದು ಬೆಳಗ್ಗೆ 10:30ರಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಝೂಮ್‌ ಆಪ್ ಮೂಲಕ ನಡೆಯುವ ಸ್ಪರ್ಧೆಯನ್ನು ಫೇಸ್‌ಬುಕ್‌ ಲೈವ್ ಮೂಲಕ ಪ್ರಸಾರ ಮಾಡಲಾಗುವುದು.


ಸ್ಪರ್ಧಿಗಳು ತಮ್ಮ ಮನೆಯಿಂದಲೇ ವೇಷ ಭೂಷಣಗಳನ್ನು ಧರಿಸಿ, ಮುಳಿಯ ಜ್ಯುವೆಲ್ಸ್‌ನ ಝೂಮ್ ಆಪ್ ಲಿಂಕ್‌ ಒತ್ತಿ ಭಾಗವಹಿಸಬಹುದು. ನೋಂದಾಯಿತ ಸ್ಪರ್ಧಿಗಳಿಗೆ ಝೂಮ್ ಆಪ್‌ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ನೀಡಲಾಗುವುದು.


ಭಾಗವಹಿಸುವವರು ಆಗಸ್ಟ್ 12ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಿಜೇತ ಸ್ಪರ್ಧಿಗಳಿಗೆ ಬಹುಮಾನ ಹಾಗೂ ಭಾಗವಹಿಸಿ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.


ನೋಂದಾವಣೆಗಾಗಿ: 9353030916,  8494915916 ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
To Top