ಏಕಾಂಗಿ ಬೈಕ್ ರೈಡರ್ ಅಮೃತಾ ಜೋಷಿಗೆ ಆ.10ರಂದು ಕೆನರಾ ಹೈಸ್ಕೂಲಿನಲ್ಲಿ ಅಭಿನಂದನೆ

Upayuktha
0

ಏಕಾಂಗಿಯಾಗಿ 22,000 ಕಿ.ಮೀ ಯಾತ್ರೆ ಮುಗಿಸಿ ಬಂದ ಕಾಸರಗೋಡಿನ ಕುವರಿ


ಮಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸವಿನೆನಪಿನಲ್ಲಿ ಕಾಸರಗೋಡು ಮೂಲದ, ಮಂಗಳೂರಿನ ಕೆನರಾ ಗರ್ಲ್ಸ್ ಹೈಸ್ಕೂಲ್ ನ ಹಳೆ ವಿದ್ಯಾರ್ಥಿನಿ ಅಮೃತಾ ಜೋಷಿ ಇದೇ ಅಗಸ್ಟ್ 10 ರಂದು ಬೆಳಿಗ್ಗೆ 10.30 ಗಂಟೆಗೆ ಡೊಂಗರಕೇರಿ ಕೆನರಾ ಹೈಸ್ಕೂಲಿಗೆ ಭೇಟಿ ನೀಡಲಿದ್ದು, ಕೆನರಾ ಅಸೋಸಿಯೇಶನ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಗುವುದು.


ಅಮೃತಾ ಜೋಷಿಯವರು ತಿರಂಗಾ ಯಾತ್ರಾ ಅಭಿಯಾನದ ಅಂಗವಾಗಿ ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶವ್ಯಾಪಿ 22,000 ಕಿ.ಮೀ ಸಂಚರಿಸಿದ್ದಾರೆ. ಬರ್ಮಾ, ಬಾಂಗ್ಲಾ, ನೇಪಾಳದ ಗಡಿಯಲ್ಲಿಯೂ ಸಂಚರಿಸಿ ಅಲ್ಲಿ ನಮ್ಮ ಭಾರತೀಯ ಸೈನಿಕರ ಸವಾಲಿನ ಪರಿಸ್ಥಿತಿಯನ್ನು ಕೂಡ ಕಣ್ಣಾರೆ ಕಂಡು ಬಂದಿದ್ದಾರೆ. 

ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಅಮೃತಾ ಜೋಷಿಯವರನ್ನು ಸ್ವಾಗತಿಸಿ, ಅಭಿನಂದಿಸಲಾಗುವುದು ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
To Top