ಮುಜಂಟಿ ಜೇನು ಸಂಗ್ರಹಣೆ: ಸರಿಯಾದ ವಿಧಾನ ಹೀಗೆ

Upayuktha
0


ಮುಜಂಟಿ ಪೆಟ್ಟಿಗೆಯನ್ನು ತೆರೆದಾಗ... ಅದರಲ್ಲಿ ಮೊಟ್ಟೆಗಳು, ಪರಾಗದ ಉಂಡೆಗಳು ಹಾಗೂ ಜೇನು ತುಪ್ಪದ ಗೋಳಗಳು ಎಂಬುದಾಗಿ ಮೂರು ವಿಧದಲ್ಲಿ ಕಾಣಸಿಗುತ್ತದೆ. ಇದರಲ್ಲಿ ಸಣ್ಣ ಸಣ್ಣದಾಗಿದ್ದು, ಗೊಂಚಲು ತರ ಇರುವುದೇ ಇವುಗಳ ಮೊಟ್ಟೆ, ಇದಕ್ಕಿಂತ ದೊಡ್ಡದಾಗಿ ಕಡಲೆ ಗಾತ್ರದಲ್ಲಿ ಹಾಗೂ ಹಳದಿ ಬಣ್ಣದಿಂದ ಇರುವುದೇ ಪರಾಗ. ದ್ರಾಕ್ಷಿ ಗೊಂಚಲು ತರಹ ಕಂಡು ಬರುವುದೇ ಜೇನುತುಪ್ಪದ ನಿಕ್ಷೇಪ! ಇದರ ಜೇನುತುಪ್ಪದ ಗೋಳಗಳನ್ನು ಹಿಂಡುವುದರಿಂದ ಅದರಲ್ಲಿರುವ ಮರಿನೊಣಗಳು, ಪರಾಗದ ಕಣಗಳು... ಇನ್ನಿತರೆ ಬೇಡದ ವಸ್ತುಗಳು ಜೇನುತುಪ್ಪಕ್ಕೆ ಸೇರಬಹುದು!!


ಈ ರೀತಿಯಲ್ಲಿ ಕೈಯಿಂದ ಹಿಂಡಿದ ಜೇನುತುಪ್ಪವು ಒಂದು ತಿಂಗಳಿನಲ್ಲಿ ತುಂಬಿಸಿ ಇಟ್ಟ ಬಾಟಲಿ ತುಂಬಾ ಗ್ಯಾಸ್ ತುಂಬುತ್ತದೆ ಹಾಗೂ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ. ಐದಾರು ತಿಂಗಳಲ್ಲಿ ಇಂತಹ ಜೇನುತುಪ್ಪವು ಕಪ್ಪಾಗಿ ಉಪಯೋಗ ಶೂನ್ಯ ವಾಗುತ್ತದೆ. ಇದರ ಬದಲಾಗಿ ಶುದ್ಧವಾದ, ಒಣಗಿದ ಪಾತ್ರೆಯ ಮೇಲ್ಬಾಗದಲ್ಲಿ ಶುದ್ಧವಾದ ಬಟ್ಟೆ ಅಥವಾ ಸಣ್ಣ ಕಣ್ಣಿನ ಜಾಲರಿ (ಬಲೆ) ಯನ್ನಿಟ್ಟು ಅದರ ಮೇಲೆ ದ್ರಾಕ್ಷಿ ಗೊಂಚಲು ತರಹ ಇರುವ ಜೇನುತುಪ್ಪ ತುಂಬಿದ ಗೋಳಗಳನ್ನು ಹಾಕಬೇಕು. ಇದನ್ನು ಹಾಗೆಯೇ ಬಿಸಿಲಿಗೆ ಇಟ್ಟರೆ, ಬಿಸಿಲಿನ ತಾಪಕ್ಕೆ ಮೇಣ ಕರಗಿ ಗೋಳದಲ್ಲಿರುವ ಜೇನುತುಪ್ಪವು ಜಾಲರಿಯ ಮೂಲಕ ಸೋಸಿ ಕೆಳಗಿನ ಪಾತ್ರೆಯಲ್ಲಿ ಸಂಗ್ರಹವಾಗುತ್ತದೆ. ಇದು ಪರಿಶುದ್ಧವಾದ ಮುಜಂಟಿ ಜೇನುತುಪ್ಪ!!  


ಕೆಲವೊಮ್ಮೆ ಬಿಸಿಲಿನ ಹೊಡೆತಕ್ಕೆ ಜೇನಿನ ಜೊತೆಗೆ ಮೇಣವು ಕರಗಿ ಕೆಳಗಿನ ಪಾತ್ರೆಯಲ್ಲಿ ಸಂಗ್ರಹವಾದರೂ ಮೇಣವು ಜೇನುತುಪ್ಪದ ಮೇಲೆ ತೇಲುತ್ತಿರುತ್ತದೆ, ಇದನ್ನು ಮಗದೊಮ್ಮೆ ಸೋಸುವುದರ ಮೂಲಕ ಶುದ್ಧವಾದ ಜೇನನ್ನು ಮಾತ್ರ ಸಂಗ್ರಹಿಸಬಹುದು. ಈ ರೀತಿಯಲ್ಲಿ ಸಂಗ್ರಹಿಸುವ ಜೇನುತುಪ್ಪವು ಶುದ್ದವಾಗಿ ಇರುತ್ತದೆ  ಹಾಗೂ ವರ್ಷಾನುಗಟ್ಟಲೆ ಬಾಳಿಕೆ ಬರುತ್ತದೆ. ಜೇನು ತುಪ್ಪ ತೆಗೆದ ನಂತರ ಉಳಿಯುವ ಮೇಣವನ್ನೂ ಇದೇ ರೀತಿಯಲ್ಲಿ ಬಿಸಿಲಿಗೆ ಇಟ್ಟು ಸೋಸಿದರೆ ಶುದ್ಧ ಮುಜಂಟಿ ಮೇಣ ಸಿಗುತ್ತದೆ, ಇದು ಸೆರೆಗೂಡಿ ಲೇಪಿಸಲು ಉಪಯೋಗವಾಗುತ್ತದೆ. ಮುಜಂಟಿ ಜೆನುತುಪ್ಪವು ಹುಳಿ ಮಿಶ್ರಿತ ಸಿಹಿ ರುಚಿಯಿಂದ ಕೂಡಿರುತ್ತದೆ.

-ರಾಮಚಂದ್ರ ಪುದ್ಯೋಡು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top