ಬೆಂಗಳೂರು: ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಂತ ಹಿಂದುಸ್ತಾನ್ ಜನತಾ ಪಾರ್ಟಿ ಭಾನುವಾರ ಅಧಿಕೃತವಾಗಿ ಉದ್ಘಾಟನೆಗೊಂಡಿತು. 21 ಜಿಲ್ಲೆಯ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆಮಾಡಲಾಯಿತು. ಹಾಗೂ ಒಂಬತ್ತು ಜನ ರಾಜ್ಯದ ಪದಾಧಿಕಾರಿಗಳಾಗಿ ಪಕ್ಷದ ಶಾಲು ಹೊದಿಸಿ ಅಧಿಕಾರ ಸ್ವೀಕರಿಸಿದರು.
ಮೊದಲಿಗೆ ಪಕ್ಷದ ಹೆಸರುಳ್ಳ ಲೋಗೋ ಬಿಡುಗಡೆ ಮಾಡಲಾಯಿತು. ರಾಜ್ಯಾದ್ಯಂತ ಹಲವು ಭಾಗಗಳಿಂದ ಹಿಂದುತ್ವದ ಹಿನ್ನೆಲೆ ಇರುವಂತಹ ಹಿಂದೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಜೊತೆಗೆ ನಾವು ನಿಮ್ಮ ಜೊತೆಗೆ ಬರುತ್ತೇವೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗಳಲ್ಲಿ ನಾವು ಪದಾಧಿಕಾರಿಗಳಾಗಿ ಪಕ್ಷದ ಸಿದ್ಧಾಂತದಲ್ಲಿ ಪಕ್ಷದ ಸಂಘಟನೆ ಮಾಡುತ್ತೇವೆ ಎಂದು ಹಲವಾರು ಫೋನ್ ಮುಖಾಂತರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಣೇಶ್ ಕದಂ ಮಾತನಾಡುತ್ತ ತಿಳಿಸಿದರು.
ಪಕ್ಷದ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಎಂ ಎಸ್ ಹರೀಶ್ ತವರು ಮಾತನಾಡುತ್ತಾ, ಜೆ ಸಿ ಬಿ ಪಕ್ಷಗಳಿಗೆ ರಾಜ್ಯದ್ಯಂತ ತೀವ್ರವಾದ ಹೊಡೆತ ನೀಡಲು ನಾವು ತಯಾರಾಗಿದ್ದೇವೆ ಏಕೆಂದರೆ ಬಿಜೆಪಿ ಹಿಂದುತ್ವದ ಹೆಸರಲ್ಲಿ ರಾಜಕೀಯ ಪ್ರವೇಶ ಮಾಡಿ ಅದಿಕಾರವನ್ನು ಅನುಭವಿಸುತ್ತಾ ಹಿಂದುತ್ವದ ಸಿದ್ಧಾಂತವನ್ನೇ ಮರೆತಿದ್ದಾರೆ ಇದಕ್ಕೆ ಹಿಂದೂ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆಗಳು ತೀವ್ರ ಬೇಸರ ಪಡಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲಾ ಹಿಂದೂ ಸಂಘಟನೆಗಳ ಅಭಿಲಾಷೆಯಂತೆ ಹಿಂದೂಸ್ತಾನ್ ಜನತಾಪಕ್ಷವನ್ನು ಪ್ರಾರಂಭ ಮಾಡಿದ್ದೇವೆ.
ಹಿಂದೂ ಕಾರ್ಯಕರ್ತರ ಕೊಲೆ ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿಕೆಯಂತೆ ಎಸ್ ಡಿ ಪಿ ಐ ಹಾಗೂ ಪಿಎಫ್ ಐ ನಿಷೇಧ ಮಾಡೋದಕ್ಕೆ ಆಗದೆ ಕೈಕಟ್ಟಿ ಕುಳಿತಿರುವ ಬಿಜೆಪಿ ಪಕ್ಷಕ್ಕೆ, *ಒಂದು ಕಡೆಯಾದರೆ ಒಂದು ಸಮುದಾಯವನ್ನು ಓಲೈಕೆ ಮಾಡುತ್ತಾ ಒಂದು ಸಮುದಾಯವನ್ನು ಕಾಪಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಇನ್ನೊಂದು ಕಡೆ ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲು ಇಂದು ರಾಜ್ಯದಲ್ಲಿ ಹಿಂದುಸ್ತಾನ್ ಜನತಾ ಪಾರ್ಟಿ ಅಧಿಕೃತವಾಗಿ ಉದ್ಘಾಟನೆಯಾಗಿದೆ ಎಂದು ಹರೀಶ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅವರು ಮುಂದುವರೆದು ರಾಜ್ಯ ಯುವ ಮೋರ್ಚಾ, ಪಕ್ಷದ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ ಹಲವಾರು ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ನೀಡುವ ಮೂಲಕ ಚುನಾವಣೆಗೆ ಸಿದ್ಧತೆಗೊಳ್ಳುತ್ತಿದೆ, ಬಿಬಿಎಂಪಿ ಚುನಾವಣೆಯಲ್ಲಿ ಕೂಡ ನಮ್ಮ ಪಾರ್ಟಿ ಪಾರ್ಟಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತದೆ ಎಂಬ ಹರೀಶ್ ರವರು ಸಂದೇಶ ನೀಡಿದರು.
ರಾಜ್ಯಾಧ್ಯಕ್ಷರಾದ ವಿನಯ್ ಮೊದಲ ರವರು ಮಾತನಾಡುತ್ತಾ ಇಂದು ನಡೆದಂತ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು ಆಗಮಿಸಿದ್ದಾರೆ ಇಂದು ಕಾರ್ಯಕ್ರಮ ಬಹುತೇಕ ಯಶಸ್ಸು ಕಂಡಿದೆ, ಒಂದು ರಾಷ್ಟ್ರೀಯ ಪಕ್ಷಗಳು ನಮ್ಮ ಪಕ್ಷಕ್ಕೆ ಈಗಾಗಲೇ ಅಡ್ಡಿ ಮಾಡುತ್ತಿದೆ, ಅದೇನೆ ಆಗಲಿ ಮುಂದೊಂದು ದಿನ ನಾವು ರಾಜ್ಯದಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ತಿಳಿಸಿದರು.
ಹಿಂದೂ ರಾಷ್ಟ್ರ ಕಟ್ಟುವುದು ನಮ್ಮ ಕಲ್ಪನೆ, ಎಸ್ ಡಿ ಪಿ ಐ ಹಾಗೂ ಪಿ ಎಫ್ ನಾವು ಬ್ಯಾನ್ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಇಂದಿನ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಆಗಮಿಸಬೇಕಾಗಿತ್ತು, ಭಾಜಪ ಪಕ್ಷದವರು ಅವರನ್ನು ತಡೆಯಲು ಸಫಲರಾಗಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ನಾವು ಚುನಾವಣೆಯನ್ನು ಎದುರಿಸಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ತನಕ ಕೆಲಸಗಳನ್ನು ಮಾಡುತ್ತೇವೆ ಎಂದು ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗ ತಾನೆ ಕಣ್ಣು ಬಿಡುತ್ತಿರುವ ಪಾರ್ಟಿ, ಈಗಾಗಲೇ ಹಿಂದೂ ಹೋರಾಟಗಾರರ ಪಕ್ಷದ ಕಡೆ ತಿರುಗಿ ನೋಡುವಂತೆ ಮಾಡಲು ಯಶಸ್ವಿಯಾಗಿದೆ, ಈ ಪಾರ್ಟಿ ಕೆಲವು ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತೀರ್ಣ ಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಬಹಳ ವಿಶ್ವಾಸದಿಂದ ರಾಜಾಧ್ಯಕ್ಷರು ನುಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ