ಆ.11-12 ರಂದು 'ಕಡಲ ತಡಿಯಲ್ಲಿ ಸ್ವಾತಂತ್ರ್ಯದ ತೆರೆ: ಮಂಗಳೂರು ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Upayuktha
0



ಮಂಗಳಗಂಗೋತ್ರಿ: ಆ.11 ಮತ್ತು12 ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ 'ಕಡಲತಡಿಯಲ್ಲಿ ಸ್ವಾತಂತ್ರ್ಯದ ತೆರೆ' ಎಂಬ ಸ್ವಾತಂತ್ರ್ಯ ಚಳುವಳಿಗೆ ಕರಾವಳಿಯ ಸ್ಪಂದನ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಮಂಗಳಗಂಗೋತ್ರಿಯ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆಯಲಿದೆ.

ವಿಚಾರ ಸಂಕಿರಣದ ಉದ್ಘಾಟನೆಯನ್ನು ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ನೆರವೇರಿಸಲಿದ್ದಾರೆ. ಮಂಗಳೂರು ವಿವಿ ಇತಿಹಾಸ ಪ್ರಾಧ್ಯಾಪಕ ಪ್ರೊ.ಕೆ. ಎಂ ಲೋಕೇಶ್ ಆಶಯ ಭಾಷಣ ಮಾಡಲಿದ್ದಾರೆ. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.


ವಿಚಾರ ಗೋಷ್ಠಿಯಲ್ಲಿ ಕರಾವಳಿ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಕುರಿತು ಡಾ.ಬಿ ಜನಾರ್ದನ ಭಟ್ ಬೆಳ್ಮಣ್ಣು, ಡಾ.ರಾಜಶೇಖರ ಹಳೆಮನೆ ಉಜಿರೆ, ಡಾ. ಮೀನಾಕ್ಷಿ ರಾಮಚಂದ್ರ, ಮಂಗಳೂರು, ಐ ಕೆ ಬೊಳುವಾರ್ ಪುತ್ತೂರು ಇವರು ಕ್ರಮವಾಗಿ ಸಣ್ಣಕತೆ, ಕಾವ್ಯ, ಕಾದಂಬರಿ ಮತ್ತು ನಾಟಕಗಳಲ್ಲಿ ಸ್ವಾತಂತ್ರ್ಯದ ಸ್ಪಂದನದ ಕುರಿತು ಮಾತನಾಡಲಿದ್ದಾರೆ.


ಆ.12 ರಂದು ಹೋರಾಟದ ಅಂಗಳದಲ್ಲಿ ವ್ಯಕ್ತಿ ವಿಶೇಷ ಗೋಷ್ಠಿಯಲ್ಲಿ ರಾಣಿ ಅಬ್ಬಕ್ಕ ಕುರಿತು ಡಾ.ಗಣೇಶ್ ಅಮೀನ್ ಸಂಕಮಾರ್, ಕಾರ್ನಾಡು ಸದಾಶಿವರಾಯರ ಕುರಿತು ಅರವಿಂದ ಚೊಕ್ಕಾಡಿ, ಕಮಲಾದೇವಿ ಚಟ್ಟೋಪಾಧ್ಯಾಯ ಕುರಿತು ಪ್ರೊ.ಉಷಾರಾಣಿ ಶರ್ಮ ಹೊಸಪೇಟೆ, ಕುದ್ಮಲ್ ರಂಗರಾಯರ ಕುರಿತು ಡಾ.ವಾಸುದೇವ ಬೆಳ್ಳೆ, ಅಮ್ಮೆಂಬಳ ಬಾಳಪ್ಪರ ಕುರಿತು ಡಾ. ತುಕಾರಾಮ ಪೂಜಾರಿ ಮಾತನಾಡಲಿದ್ದಾರೆ.


ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಪಿ.ಎಲ್ ಧರ್ಮ ಸಮಾರೋಪ ಭಾಷಣ ಮಾಡಲಿದ್ದಾರೆ. ಕನ್ನಡ ವಿಭಾಗದ ಪ್ರೊ.ಸೋಮಣ್ಣ ಹೊಂಗಳ್ಳಿ, ಪ್ರೊ.ಅಭಯಕುಮಾರ್, ಡಾ.ನಾಗಪ್ಪ ಗೌಡ, ಡಾ.ಯಶುಕುಮಾರ್, ವಿಚಾರಸಂಕಿರಣದ ಸಂಚಾಲಕ ಡಾ. ಧನಂಜಯ ಕುಂಬ್ಳೆ ಉಪಸ್ಥಿತರಿರುವರು. ಆಸಕ್ತರು ಭಾಗವಹಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top