ಆರಕ್ಷಕರಿಗೆ ಶುಭಕೋರಿದ ನೆಲ್ಲಿಕಟ್ಟೆಯ ಅಂಬಿಕಾ ವಿದ್ಯಾಸಂಸ್ಥೆ

Upayuktha
0

ಪುತ್ತೂರು: ದೇಶದ ರಕ್ಷಣೆಯ ಜವಾಬ್ದಾರಿ ಹೊತ್ತು ಅವಿರತವಾಗಿ ಸಮಾಜದ ಹಿತರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಆರಕ್ಷಕರನ್ನು ಗೌರವಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿ ನಾಯಕರು, ಪದಾಧಿಕಾರಿಗಳು, ಪ್ರಾಚಾರ್ಯರು ಪುತ್ತೂರಿನ ನಗರ ಆರಕ್ಷಕ ಠಾಣೆ, ಮಹಿಳಾ ಆರಕ್ಷಕ ಠಾಣೆ, ಸಂಚಾರಿ ಆರಕ್ಷಕ ಠಾಣೆಗೆ ಭೇಟಿ ನೀಡಿ ಸಿಹಿ ಹಂಚಿ ಶುಭ ಹಾರೈಸಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಖಜಾಂಜಿ ರಾಜಶ್ರೀ ಎಸ್ ನಟ್ಟೋಜ, ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ವಿದ್ಯಾರ್ಥಿ ನಾಯಕರಾದ ಆಕಾಶ್ ಜೆ ರಾವ್, ಯಶು ಬಿ ಜಿ, ಮಾನ್ಯ ಐ ಎನ್, ಉತ್ಸವಿ ಎಸ್ ರೈ ಇವರು ಆರಕ್ಷಕ ಠಾಣೆ, ಶಾಸಕರ ಕಛೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಗೂ ಸಿಹಿ ಹಂಚಿ ಶುಭ ಕೋರಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top