ಆಳ್ವಾಸ್ ಕಾಲೇಜು : ಆದ್ಯಂತ - 2022 ಕಾಮರ್ಸ್ ಫೆಸ್ಟ್

Upayuktha
0

 

ಮೂಡುಬಿದಿರೆ: ಯಶಸ್ಸಿನ ಮೊದಲ ಹಂತ ಅಡಕವಾಗಿರುವುದು ಭಾಗವಹಿಸುವಿಕೆಯಲ್ಲಿ. ನಿರಂತರ ಪ್ರಯತ್ನದ ಮೂಲಕ ಯಶಸ್ಸು ಗಳಿಸಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.


ಆಳ್ವಾಸ್ ಕಾಲೇಜಿನ ಪದವಿ ವಾಣಿಜ್ಯ ವಿಭಾಗದ ವತಿಯಿಂದ ನಡೆದ 'ಆದ್ಯಂತ 2022' ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಕೇವಲ ಪದವಿ ತರಗತಿಗಳ ಮುಂದುವರಿದ ಭಾಗವಾಗಿ ಕಾಣುತ್ತಾರೆ. ಈ ಕಲಿಕೆಯಲ್ಲಿ ವಿದ್ಯಾರ್ಥಿಗಳಲ್ಲಿ ಯಾವುದೇ ಉದ್ದೇಶಗಳಿರುವುದಿಲ್ಲ. ವಿದ್ಯಾರ್ಥಿಗಳು ಮನಸ್ಸನ್ನು ಗುರಿಯತ್ತ ಕೇಂದ್ರೀಕೃತಗೊಳಿಸಿದಾಗ ಮಾತ್ರ ಉದ್ದೇಶಗಳು ಸಾಕಾರಗೊಳ್ಳುತ್ತದೆ. ತಮ್ಮನ್ನು ತಾವು ಅರಿತುಕೊಂಡು ಅಹಂಕಾರವನ್ನು ತೊರೆದು, ಒಗ್ಗಟ್ಟಿನಿಂದ ನಿರಂತರವಾಗಿ ಕಾರ್ಯಪ್ರವೃತ್ತರಾದಾಗ ಯಶಸ್ಸು ಲಭಿಸುತ್ತದೆ ಎಂದರು.


ವಿಶೇಷ ಅತಿಥಿಯಾಗಿ ಭಾಗವಹಿಸಿದ ಇವೈಜಿಡಿಎಸ್ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಹಾಗೂ ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಅವಿಲ್ ಜಾನ್ ಮೋನಿಸ್ ಮಾತನಾಡಿ, ಶಿಸ್ತು ಮತ್ತು ಸಮಯ ಪ್ರಜ್ಞೆ ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಕಳೆದುಹೋದ ಸಮಯವನ್ನು ಮರು ಸೃಷ್ಟಿಸುವುದು ಅಸಾಧ್ಯ ಆದ್ದರಿಂದ ದೊರೆತ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅಗತ್ಯ. ವಿಷಯಗಳ ಕುರಿತು ಅಧ್ಯಯನ ಮಾಡಿದಾಗ ಮಾತ್ರ ನಮ್ಮ ಇಚ್ಛೆಯ ಕ್ಷೇತ್ರವನ್ನು ಆರಿಸಿ ಮುಂದುವರಿಯಲು ಸಾಧ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಕೇವಲ ತರಗತಿಗಳಲ್ಲಿ ಮಾಡುವ ಪಾಠಗಳಿಂದ ವಿದ್ಯಾರ್ಥಿಗಳು ಸಕ್ರಿಯರಾಗಲು ಸಾಧ್ಯವಿಲ್ಲ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉನ್ನತವಾದುದನ್ನು ಸಾಧಿಸಬಹುದು. ಮುಂದಿಡುವ ಹೆಜ್ಜೆಯ ಬಗ್ಗೆ ಅತಿಯಾಗಿ ಚಿಂತಿಸದೆ ಪ್ರಾಮಾಣಿಕ ಪ್ರಯತ್ನ ಮಾಡುವುದು ಒಳಿತು ಎಂದರು.


ಸಮಾರೋಪ ಸಮಾರಂಭದಲ್ಲಿ ಫ್ರೀಲ್ಯಾನ್ಸ್ ಇನ್ವೆಸ್ಟ್ಮೆಂಟ್ ಸರ್ವಿಸರ್ ಗ್ಯಾವಿನ್ ಆ್ಯಬ್ನರ್ ಪಿಂಟೊ ಬಹುಮನ ವಿತರಿಸಿದರು. ದ್ವಿತೀಯ ಬಿ.ಕಾಂ ಎ ಸಮಗ್ರ ಪ್ರಶಸ್ತಿ ಪಡೆದರೆ, ದ್ವಿತೀಯ ಬಿ.ಕಾಂ ಬಿ ರನ್ನರ್ ಅಪ್ ಸ್ಥಾನ ಪಡೆಯಿತು.


ಕಾಲೇಜಿನ ಹಿರಿಯ ವಿದ್ಯಾರ್ಥಿ ಗೌತಮ್, ಪದವಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್, ಮಾಜಿ ಉಪನ್ಯಾಸಕಿ ರೆನಿಟಾ ವೇಗಸ್, ಉಪನ್ಯಾಸಕ ರಮಾನಂದ ನಾಯಕ್, ವಿದ್ಯಾರ್ಥಿ ಸಂಯೋಜಕ ಕಾರ್ತಿಕ್ ಪ್ರಭು, ಅರುಣ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪರಾಡ್ಕರ್ ಸ್ವಾಗತಿಸಿ, ಶ್ರೀಶಕ್ತಿ ಕಾರ್ಯಕ್ರಮ ನಿರೂಪಿಸಿ, ಶೆರಿನ್ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top