ಲಕ್ಷ್ಮೀ ವಿ ಭಟ್ ಅವರ ಕವನ ಸಂಕಲನದ ಲೋಕಾರ್ಪಣೆ, ಭಗವದ್ಗೀತಾ ಅಭಿಯಾನದ ಉದ್ಘಾಟನೆ

Upayuktha
0


ಮಂಜೇಶ್ವರ: ಕಲಾಕುಂಚ ಗಡಿನಾಡ ಘಟಕ ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀಮತಿ ಲಕ್ಷ್ಮೀ ವಿ  ಭಟ್ ಅವರ ಎರಡು ಕವನ ಸಂಗ್ರಹಗಳು- ವನಸುಮ ಮತ್ತು ಕಾವ್ಯ ಮೃಷ್ಟಾನ್ನ- ಕೊಂಡೆವೂರು ಶ್ರೀಮಠದ ನಿತ್ಯಾನಂದ ಮಂದಿರದಲ್ಲಿ ಲೋಕಾರ್ಪಣೆಗೊಂಡುವು. ಶ್ರೀಮತಿ ಪ್ರಸನ್ನ ಸಿ ಎಸ್ ಭಟ್ ಕಾಕುಂಜೆ ಅವರ ಪ್ರಾರ್ಥನೆಯ ಬಳಿಕ ಕೃತಿಗಳ ಕವಯಿತ್ರಿ ಲಕ್ಷ್ಮೀ ವಿ ಭಟ್ ಆಶಯ ನುಡಿಗಳನ್ನು ಆಡಿದರು.


ಕೊಂಡೆವೂರು ಮಠದ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪ ಪ್ರಜ್ವಲನ ಮಾಡಿ ಗೀತಾಭಿಯಾನದ ಉದ್ಘಾಟನೆ ಮಾಡಿದರು.


ಬಳಿಕ ವಿದ್ಯಾಧರ ಕನ್ನಡ ಪ್ರತಿಷ್ಠಾನ ಮುಂಬೈ-ಧಾರವಾಡ ಆಯೋಜಿತ ರಾಷ್ಟ್ರಮಟ್ಟದ ಕವನ ಸಂಕಲನ 2022 ಸ್ಪರ್ಧೆಯಲ್ಲಿ ಬಹುಮಾನಿತ ಕೃತಿ "ವನಸುಮ" ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಶ್ರೀ ಯೋಗೀಶರಾವ್ ಚಿಗುರುಪಾದೆಯವರು ಕೃತಿಯ  ಅವಲೋಕನ ಮಾಡಿದರು. ಶಿಕ್ಷಣ ತಜ್ಞರಾದ ಶ್ರೀ ವಿ ಬಿ ಕುಳಮರ್ವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇನ್ನೊಂದು ಕೃತಿ "ಕಾವ್ಯ ಮೃಷ್ಟಾನ"ವನ್ನು ಲೋಕಾರ್ಪಣ ಮಾಡಿ ಅವಲೋಕನ ಮಾಡಿದರು.


ಮುಖ್ಯ ಅತಿಥಿಗಳಾಗಿ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಗಣ್ಯರಾದ ಡಾ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಯವರು ಲಕ್ಷ್ಮೀ ವಿ ಭಟ್ ಅವರಿಗೆ ಶುಭ ಹಾರೈಸಿದರು. ಕಲಾಕುಂಚ ಕೇರಳ ಶಾಖೆಯ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಕಾರಂತ ಶುಭಾಶಂಸನೆ ಮಾಡಿದರು.


ಗಮಕಿ ಶ್ರೀ ಗಣಪತಿ ಭಟ್ ಪೆರ್ಮುಖ, ಶ್ರೀ ದಿವಾಕರ ಬಲ್ಲಾಳ, ಶ್ರೀಮತಿ ಪ್ರಸನ್ನ ಸಿ ಎಸ್ ಭಟ್ ಕಾಕುಂಜೆ, ಶ್ರೀಮತಿ ದಿವ್ಯ ಚಂದನ್ ಕಾರಂತ ಮತ್ತು ಶ್ರೀಮತಿ ರಾಧಾಮಣಿ ಆರ್ ರಾವ್ ಲೋಕಾರ್ಪಣಗೊಂಡ ಕೃತಿಗಳ ಗಾಯನ ಮಾಡಿದರು.


ಶಿಕ್ಷಕ ಶ್ರೀ ದಿವಾಕರ ಬಲ್ಲಾಳರು ಸ್ವಾಗತಿಸಿ ಶ್ರೀ ಕಾರ್ತಿಕ ಪಡ್ರೆ ಧನ್ಯವಾದ ಸಮರ್ಪಣೆ ಮಾಡಿದರು. ಶಿಕ್ಷಕರಾದ ಶ್ರೀ ರಾಜಾರಾಮರಾವ್ ನಿರೂಪಣೆ ಮಾಡಿದರು.  ಗೀತಾ ಅಭಿಯಾನದ ಅಂಗವಾಗಿ ಶಿಕ್ಷಕ ಶ್ರೀ ಸುಬ್ರಹ್ಮಣ್ಯ ಭಟ್ ಭಗವದ್ಗೀತೆಯ ಆಯ್ದ ಶ್ಲೋಕಗಳನ್ನು ವಾಚಿಸಿದರು. 


ವರದಿ:  ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top