ಸಿಎ ಫೌಂಡೇಶನ್: ಆಳ್ವಾಸ್ ಕಾಲೇಜಿಗೆ ಶೇ.60.46 ಫಲಿತಾಂಶ

Upayuktha
0

ಮೂಡುಬಿದಿರೆ: ಜೂನ್ 2022ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದ್ದು, ಆಳ್ವಾಸ್ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ. ರಾಷ್ಟ್ರ ಮಟ್ಟದಲ್ಲಿ ಈ ಪರೀಕ್ಷೆಯಲ್ಲಿ ಶೇ.25.28 ಫಲಿತಾಂಶ ದಾಖಲಾದರೆ, ಕಾಲೇಜಿನ 26 ವಿದ್ಯಾರ್ಥಿಗಳು ತೇರ್ಗಡೆಯಾಗಿ, ಆಳ್ವಾಸ್ ಶೇ.60.46 ಫಲಿತಾಂಶ ಗಳಿಸಿದೆ.


ಚಿತ್ರ ಟಿ. ಎನ್, ಪಾಯಲ್ ಜೆ. ಬಂಗೇರಾ, ಕಿರಣ್ ಕುಮಾರ್ ಎನ್, ಶ್ರೇಯಸ್, ರೇಷ್ಮಾ ಬಿ.ಎಂ, ಕಲ್ಪನಾ, ಜೀವನ್, ಕೌಶಲ್ ಪಿ. ಎಸ್, ರಾಕೇಶ್ ಬಾಬು, ಕುಮಾರ್ ಸಿ, ವಿವೇಕ್ ಕೆ. ಬಿ, ರಿಫಾನಾಜ್, ವೇದಾಂತ್ ದೀಪಕ್ ಸಾಹಾ, ನಿಖಿತಾ ಆರ್ ರಾವ್, ಸ್ಫೂರ್ತಿ ಆರ್ ಭಟ್, ಕೆಲ್ವಿನ್ ಜೀವನ್, ದರ್ಶನ್, ಸಾಲ್ಯಾನ್ ಖುಷಿ, ಓಂ ಋತುರಾಜ್ ಕಾಗೆ, ಚೇತನ್ ಪಿ, ಸಂಜನಾ, ವಿಜಯ್, ವಿಜಯ್ ಕುಮಾರ್, ಸ್ಟೀವನ್ ಬಿ.ಎಸ್, ಪ್ರಥಮ್ ಶೆಟ್ಟಿ, ಜೇಷ್ಮಾ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.


ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ಸಂಯೋಜಕರಾದ ಅನಂತಶಯನ, ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಅಭಿನಂದಿಸಿದ್ದಾರೆ.


ವಿದ್ಯಾರ್ಥಿ ಜೀವನ್ ಅಂಧ ವಿದ್ಯಾರ್ಥಿಯಾಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಸಂಪೂರ್ಣ ಉಚಿತ ಶಿಕ್ಷಣ ಮತ್ತು ಉಚಿತ ಸಿಎ ತರಬೇತಿಯನ್ನು ಪಡೆಯುತ್ತಿದ್ದಾನೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top