ಉತ್ತಮ ಸೇವೆಯಿಂದ ಗ್ರಾಹಕರನ್ನು ಸಂತೋಷಗೊಳಿಸಿ: ವೀರು ಶೆಟ್ಟಿ

Upayuktha
0


ಉಜಿರೆ: ನೀವು ಆಯ್ದ ಬ್ಯೂಟಿಪಾರ್ಲರ್ ಕ್ಷೇತ್ರದಲ್ಲಿ ಮಾಸ್ಟರ್ ಆಗುವ ಪ್ರಯತ್ನ ಮಾಡಿ, ನಿಮ್ಮ ಕುರಿತು ಚುಚ್ಚಿ ಮಾತನಾಡಿದವರೆ ಮೆಚ್ಚಿ ಮಾತನಾಡುವಂತೆ ಬೆಳೆಯಿರಿ ಎಂದು ಶ್ರೀ ಧರ್ಮಸ್ಥಳ ಧರ್ಮೋಥ್ಥಾನ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ವೀರು ಶೆಟ್ಟಿ ರವರು ಅಭಿಪ್ರಾಯಪಟ್ಟರು.


ಅವರು ರುಡ್‍ಸೆಟ್ ಸಂಸ್ಥೆ ಉಜಿರೆಯಲ್ಲಿ ನಡೆದ 30 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್‍ಮೆಂಟ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.  ಸಮಾರಂಭದಲ್ಲಿ ಮಾತನಾಡುತ್ತ ಜೀವನ ಪಾಠದ ಬೋದನೆಯೆ ರುಡ್‍ಸೆಟ್ ಸಂಸ್ಥೆÀಯ ವಿಶೇಷತೆ, ಇಲ್ಲಿಂದ ಹೋಗಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಉತ್ತಮ ಸಾಧಕರಾಗಿ ಎಂದು ಕಿವಿಮಾತು ಹೇಳಿದರು.


ರುಡ್‍ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಗಿರಿಧರ ಕಲ್ಲಾಪುರರವರು ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿ ಕಲಿತ ವಿದ್ಯೆಯಿಂದ ಸ್ವಾವಲಂಬಿಗಳಾಗಿ ಕುಟುಂಬಕ್ಕೆ ಹೆತ್ತವರಿಗೆ ಹೆಮ್ಮೆ ತರುವ ರೀತಿಯಲ್ಲಿ ಮುಂದೆ ಹೆಜ್ಜೆಯಿಡಿ ಎಂದು ಹಿತವಚನ ನೀಡಿದರು.


ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಎಂ. ಸುರೇಶ್‍ವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಥಿತಿ ಉಪನ್ಯಾಸಕರಾದ ಶ್ರೀಮತಿ ಮಾದವಿ ರೈ ರವರು ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರೆ ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯರವರು ವಂದಿಸಿದರು. 30 ದಿನಗಳ ಕಾಲ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ 35 ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top