||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಿ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ: ಎಸ್ ಡಿಎಂ ವಿದ್ಯಾಥಿಗಳಿಗೆ ಬಹುಮಾನ

ವಿವಿ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ: ಎಸ್ ಡಿಎಂ ವಿದ್ಯಾಥಿಗಳಿಗೆ ಬಹುಮಾನ


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‌ನಲ್ಲಿ ಜುಲೈ 27 ರಂದು ವಿಶ್ವವಿದ್ಯಾನಿಲಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿಧ್ಯಾರ್ಥಿನಿ ದಶಮಿ ಪ್ರಥಮ ಸ್ಥಾನ ಪಡೆದುಕೊಂಡರು. ಚರ್ಚಾ ಸ್ಫರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿಧ್ಯಾರ್ಥಿಗಳಾದ ಉಲ್ಲಾಸ್ ಮತ್ತು ಶಿವಕುಮಾರ್ ಪ್ರಥಮ ಸ್ಥಾನ ಪಡೆದುಕೊಂಡರು.


ಈಗ 75 ವರ್ಷದ ಸ್ವಾತಂತ್ರದ ಹೊಸ್ತಿಲಲ್ಲಿದ್ದೇವೆ. ಆಜಾದೀ ಕೀ ಅಮೃತ್ ಮಹೋತ್ಸವ್ ಎಂಬ ಶೀರ್ಷಿಕೆಯಡಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಧ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಹಲವಾರು ಸ್ಫರ್ಧೆಗಳನ್ನ ಆಯೋಜಿಸಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಎಸ್.ಡಿ.ಎಂ ಸ್ನಾತಕೋತ್ತರ ಕಾಲೇಜಿನ ಜಂಟಿ ಆಶ್ರಯದಲ್ಲಿ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಏರ್ಪಟ್ಟವು.


‘ಇಂದಿನ ತಾಂತ್ರಿಕ ಯುಗದಲ್ಲಿ ಭಾರತೀಯತೆಯನ್ನು ಉಳಿಸಿಕೊಳ್ಳಲು ಸಾಧ್ಯವೇ?’ ಎಂಬ ವಿಷಯದ ಅಡಿಯಲ್ಲಿ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸ್ಫರ್ಧೆಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು.


ಚರ್ಚಾ ಸ್ಪರ್ಧೆಯ ವಿಜೇತರ ಪಟ್ಟಿ


ಪುತ್ತೂರಿನ ದರ್ಬೆಯ ಸಂತ ಫಿಲೋಮಿನಾ ಕಾಲೇಜಿನ ಶ್ರೀದೇವಿ ಕೆ ಮತ್ತು ಭಾಗ್ಯಶ್ರೀ ಪಿ (ದ್ವಿತೀಯ), ಸುಳ್ಯದ ಕುರುಂಜಿಭಾಗ್‌ನ ನೆಹರು ಮೆಮೋರಿಯಲ್ ಕಾಲೇಜಿನ ವಿಧ್ಯಾರ್ಥಿಗಳಾದ ಅಭಿಷೇಕ್ ಎ ಮತ್ತು ಕುಲದೀಪ್ ಎ (ತೃತೀಯ), ಮಡಂತ್ಯಾರಿನ ಸೇಕ್ರೇಡ್ ಹಾರ್ಟ್ ಕಾಲೇಜಿನ ವಿಧ್ಯಾರ್ಥಿಗಳಾದ ಶಾಹಿದ್ ಅಫ್ರೀದಿ ಮತ್ತು ಮೋಕ್ಷಿತ್ ( ಚತುರ್ಥ) ಮತ್ತು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಬಿ.ಎಡ್ ಕಾಲೇಜಿನ ಕಾವ್ಯಶ್ರೀ ಕೆ ಮತ್ತು ಮಧುರ ಹೆಚ್.ವಿ ( ಪಂಚಮ) ಸ್ಥಾನವನ್ನ ಪಡೆದುಕೊಂಡಿರುತ್ತಾರೆ.


ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಈ ಬೆಳವಣಿಗೆಯಲ್ಲಿ ತಾಂತ್ರಿಕತೆಯೂ ಕೂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ತಾಂತ್ರಿಕತೆ ತುಂಬಾ ಪರಿಣಾಮಕಾರಿಯಾಗಿದ್ದು ತೊದಲು ನುಡಿಯುವ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಜಂಗಮವಾಣಿಯ ಬಳಕೆಯನ್ನು ಕಾಣಬಹುದು ಮತ್ತು ದೇಶದ ಕ್ಷಿಪ್ರ ಅಭಿವೃದ್ಧಿಯಲ್ಲಿ ತಾಂತ್ರಿಕತೆಯ ಅಗತ್ಯತೆ ತುಂಬಾನೆ ಇದೆ ಹಾಗಾಗಿ ಈಗಿನ ದಿನಗಳಲ್ಲಿ ಭಾರತೀಯತೆಯನ್ನ ಉಳಿಸಿಕೊಳ್ಳಲು ತಾಂತ್ರಿಕತೆ ಅತ್ಯಗತ್ಯ ಎಂಬ ವಾದಗಳು ಒಂದೆಡೆಯಾದರೆ, ಎಷ್ಟೇ ಆಧುನಿಕತೆ ಬಂದರೂ ಭೂಮಿಯಲ್ಲಿ ಬೆಳೆದ ಅಕ್ಕಿಯನ್ನು ತಿನ್ನಬೇಕೆ ಹೊರತು ಪ್ಲಾಸ್ಟಿಕ್ ಅಕ್ಕಿಯನ್ನ ತಿನ್ನಲು ಸಾಧ್ಯವಿಲ್ಲ, ಅಮೇರಿಕದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅನುಸರಿಸುತ್ತಿರುವಾಗ ನಾವು ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ತಾಂತ್ರಿಕತೆಯ ಹೆಸರಿನಲ್ಲಿ ಮರೆಯುತ್ತಿದ್ದೇವೆ ಮತ್ತು ಹೀಗೆ ಮುಂದುವರೆದರೆ ದೇಶದ ಅಭಿವೃದ್ಧಿಗೆ ಇದು ದೊಡ್ಡ ತೊಡಕಾಗಬಹುದು ಎಂಬ ಪರ ವಿರೋಧ ಚರ್ಚೆಗಳು ಏರ್ಪಟ್ಟಿದ್ದವು.


ಈ ಸ್ಪರ್ಧೆಯ ತೀರ್ಪುಗಾರರಾಗಿ ಮಹವೀರ್ ಜೈನ್ ಇಚ್ಲಂಪಾಡಿ, ಸುನೀಲ್ ಪಂಡಿತ ಮತ್ತು ಶುಭಾಷ್ ಚೋಳೂರು ಇವರು ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ನನ್ನ ಕನಸಿನ ಸ್ವತಂತ್ರ ಭಾರತ ಎಂಬ ವಿಷಯದ ಅಡಿಯಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಒಟ್ಟು 20 ವಿಧ್ಯಾರ್ಥಿಗಳು ಭಾಗವಹಿಸಿದ್ದರು.


ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ


ಕಡಬದ ಪೆರಾಬೆಯ ಇವನಿಯೋಸ್ ಕಾಲೇಜು ಕುಂತೂರಿನ ತೇಜಸ್ವಿನಿ (ದ್ವಿತೀಯಾ), ಸಿದ್ಧಕಟ್ಟೆಯ ಜಿ.ಎಫ್.ಜಿ.ಸಿ ಕಾಲೇಜಿನ ಚಿತ್ರ (ತೃತೀಯಾ) , ಸುಳ್ಯದ ಶಾರಾದ ಮಹಿಳಾ ಕಾಲೇಜಿನ ಅಂಜಲಿ ದೇರಾಜೆ (ಚತುರ್ಥ), ಮತ್ತು ಬೆಳ್ತಂಗಡಿಯ ಶ್ರೀ ಗುರುದೇವಾ ಕಾಲೇಜಿನ ಆಯಿಶತ್ ನೌಷಿಯಾ ( ಪಂಚಮ) ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯ ತೀರ್ಪುಗಾರರಾಗಿ ರಾಜಶೇಖರ ಹಳೆಮನೆ ಮತ್ತು ಮಹೇಶ್ ಇವರು ಆಗಮಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post