ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

Upayuktha
0

ಅಧ್ಯಕ್ಷೆಯಾಗಿ ಸಾಯಿಶ್ವೇತಾ ಪಿ, ಕಾರ್ಯದರ್ಶಿಯಾಗಿ ಅನಘಾ ಸಿ.ಆರ್ ಆಯ್ಕೆ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘಕ್ಕೆ ಇತ್ತೀಚೆಗೆ ಚುನಾವಣೆ ನಡೆಯಿತು. ಅಧ್ಯಕ್ಷೆಯಾಗಿ ಪಂಜದ ಕರಿಕ್ಕಳದ ಕೃಷಿಕ ರಾಮಕೃಷ್ಣ ಪಿ ಅವರ ಪುತ್ರಿ, ಅಂತಿಮ ಬಿ.ಎ. ವಿದ್ಯಾರ್ಥಿನಿ ಸಾಯಿಶ್ವೇತಾ ಪಿ. ಆಯ್ಕೆಯಾದರು. ಕಾರ್ಯದರ್ಶಿಯಾಗಿ ಅಡ್ಯನಡ್ಕದ ಮೂಡಂಬೈಲಿನ ಸಿ.ರಾಜೇಶ್ವರ ಶಾಸ್ತ್ರಿ ಹಾಗೂ ನಂಜನಗೂಡಿನ ಹಿರಿಯ ನ್ಯಾಯಾಧೀಶರಾದ ಅನುಪಮಲಕ್ಷ್ಮಿ ಬಿ ದಂಪತಿ ಪುತ್ರಿ ಅನಘ ಸಿ.ಆರ್ ಆಯ್ಕೆಗೊಂಡರು.


ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಹಾಗೂ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ ಹಾಗೂ ಚುನಾವಣಾಧಿಕಾರಿ ಚಂದ್ರಕಾಂತ ಗೋರೆ ಅವರ ಮಾರ್ಗದರ್ಶನದಲ್ಲಿ ನಡೆದ ಈ ಚುನಾವಣೆಯಲ್ಲಿ ಉಪನ್ಯಾಸಕರಾದ ಡಾ.ವಿನಾಯಕ ಭಟ್ಟ ಗಾಳಿಮನೆ, ಅನನ್ಯಾ ವಿ, ಅಭಿಷೇಕ್ ಎನ್, ಜಯಂತಿ ಪಿ, ಕಾವ್ಯಾ ಭಟ್, ಗಿರೀಶ್ ಭಟ್, ಸಂಧ್ಯಾ ಎಂ ಹಾಗೂ ವಿದ್ವಾನ್ ತೇಜಶಂಕರ ಸೋಮಯಾಜಿ ಅವರು ಸಹಕರಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top