ಬೆಂಗಳೂರು: ಕರ್ನಾಟಕ ಕಲಾದರ್ಶಿನಿ ತಂಡದ ವಿದ್ಯಾರ್ಥಿಗಳು ಶನಿವಾರ ನಗರದ ಮಣಿಪಾಲ್ ಸೆಂಟರ್‌ನ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಟ್ಟರು.
ಮುಳಿಯ ಜ್ಯುವೆಲ್ಲರ್ಸ್ ನ ಗ್ರಾಹಕರ ಸಮಾಗಮದಲ್ಲಿ ಯಕ್ಷಗಾನ ಗುರು ಶ್ರೀನಿವಾಸ ಸಾಸ್ತಾನ ಅವರ ನಿರ್ದೇಶನದಲ್ಲಿ ಈ ಕಾರ್ಯಕ್ರಮ ನಡೆಯಿತು.
ಯಕ್ಷ ಗುರು ಮತ್ತು ಕೆನರಾಬ್ಯಾಂಕಿನ ಹಿರಿಯ ಪ್ರಬಂಧಕಿ ಗೌರಿ ಸಾಸ್ತಾನ, ಹಿರಿಯ ನ್ಯಾಯವಾದಿ ಗಣಪತಿ ಭಟ್ ವಜ್ರಳ್ಳಿ, ಮುಳಿಯ ಜ್ಯುವೆಲ್ಲರ್ಸ್ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ, ಬ್ರಾಂಚ್ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್, ಸಂಯೋಜಕ ವೇಣು ಶರ್ಮಾ ಮತ್ತಿತರರು ಭಾಗವಹಿಸಿದ್ದರು.
ಯಕ್ಷ ರೂಪಕದಲ್ಲಿ ಚೈತ್ರಾ ಕೋಟ, ದೀಕ್ಷಾ ಭಟ್, ಧೃತಿ ಅಮ್ಮೆಂಬಳ, ಅನೀಶ್ ರಾಘವೇಂದ್ರ ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ