ವಾವ್...
ಕೃಷಿಕರಿಗೂ ಒಂದು ಮುಖವಾಣಿ ಇದೆ, ಕೃಷಿಯಲ್ಲೂ ಆಕರ್ಷಣೆ ಇದೆ, ಕೃಷಿಗೂ ಗೌರವ ಇದೆ ಎಂಬುದನ್ನು ನಿರೂಪಿಸುತ್ತಾ, ಸತತ 52 ವಾರಗಳಲ್ಲೂ ಕೃಷಿ ಕಾರ್ಯಕ್ರಮ ರೂಪಿಸಿ ಪ್ರಸ್ತುತ ಪಡಿಸುತ್ತಾ, ಈವತ್ತು ತನ್ನ ವಾರ್ಷಿಕೋತ್ಸವ ಆಚರಿಸಿದ ಪಯಸ್ವಿನಿ ಕ್ಲಬ್ ಹೌಸ್, ಮತ್ತು ಅದರ ಸೂತ್ರದಾರರಾದ ಮುರಳೀ ಕೃಷ್ಣ ಅವರಿಗೆ ನಮೋ ನಮಃ.
ಪ್ರತೀ ಆದಿತ್ಯ ವಾರ ಸಂಜೆ, ಹತ್ತು ಹಲವರನ್ನು ಕೂಡಿ, ಕೃಷಿಯ ಹಲವು ಮಗ್ಗುಲುಗಳನ್ನು ಪರಿಚಯಿಸುತ್ತಾ, ವಿಮರ್ಷಿಸುತ್ತಾ ಸಾಗುವುದೇನು ಸಣ್ಣ ವಿಷಯವಲ್ಲ. ಅಂತಹ ಕಾರ್ಯಗಳನ್ನು ಸಾಧಿಸಿ, ಇಂದು ವಾರ್ಷಿಕೋತ್ಸವ ಆಚರಣೆ, ಅದೂ ಸಭಾ ಸ್ವರೂಪದೊಂದಿಗೆ, ಅಚ್ಚುಕಟ್ಟಾಗಿ ನಡೆದದ್ದು ನಿಜಕ್ಕೂ ಶ್ಲಾಘನೀಯ. ಕೃಷಿಕರು ತಮ್ಮ ತಮ್ಮ ಮನೆ, ಊರುಗಳಲ್ಲೇ ಕುಳಿತು ಪರಸ್ಪರ ವಿಚಾರ ಹಂಚಿಕೊಳ್ಳಲು ಈ ವೇದಿಕೆ ಬಹಳ ಅನುಕೂಲಕರ. ಈವತ್ತು ಇಲ್ಲಿ ಬಂದ ಕೆಲವು ವಿಚಾರಗಳನ್ನು ಈ ಕೆಳಗಿನಂತೆ ಹಂಚಿಕೊಳ್ಳುತ್ತೇನೆ.
೧. ಕೃಷಿಕರು ಸಂಜೆಯ ಪ್ರೈಮ್ ಟೈಮನ್ನು, ಹಾಳುಹರಟೆ ಬಿಟ್ಟು, ಕೃಷಿ ಪೂರಕ ವಿಚಾರಗಳಲ್ಲಿ ವಿನಿಯೋಗಿಸುವುದು ಉತ್ತಮ.
೨. ಪೇಟೆಯ ಸಂಪಾದನೆಯ ಅರ್ಧಾಂಶ ಟ್ಯಾಕ್ಸ್, ಇಯಮ್ ಐ,ಮುಂತಾಗಿ ಕಳೆದು ತನ್ನ ನಿರ್ವಹಣೆಗೆ ಉಳಿಯುವ ಮೊತ್ತಕ್ಕಿಂತ ಹೆಚ್ಚು ಕೃಷಿಯಲ್ಲಿ ಉಳಿದೀತು... ತಮ್ಮ ಸ್ವಂತ ಜಮೀನೂ ಉಳಿದೀತು.
೩. ಮಾರುಕಟ್ಟೆಯಲ್ಲಿ ಸಾಧಾರಣ ಹನ್ನೆರಡು ವರ್ಷಗಳಿಗೊಮ್ಮೆ ಏರುಪೇರಿನ ಆವರ್ತ ಇದೆ. ಅಂದರೆ ಏರಿಕೆಯ ಸಂಧರ್ಬದ ಲಾಭವನ್ನು ಇಳಿಕೆಯ ಸಮಯಕ್ಕೆ ಕುಶನಿಂಗ್ ಮಾಡಿಕೊಳ್ಳುವುದರಲ್ಲಿ ನಮ್ಮ ಜಾಣ್ಮೆ ಇದೆ.
೪. ಅಡಿಕೆ ಕೃಷಿ ವಿಸ್ತರಣೆ ತೀವ್ರವಾಗಿದೆ. ಕೇವಲ ವಿಸ್ತರಣೆಗಿಂತ, ನಮ್ಮಲ್ಲಿರುವ ತೋಟದ ಉತ್ಪತ್ತಿಯನ್ನು/ಆದಾಯವನ್ನು ಹೆಚ್ಚಿಸುವತ್ತ ಗಮನವಿರಲಿ.
೫. ಕೊಕ್ಕೋ ಉತ್ಪತ್ತಿ ದೇಶದಲ್ಲಿ ಬೇಡಿಕೆಗಿಂತ ೬೦% ಕಡಿಮೆ ಇದೆ.
೬. ಗೊಬ್ಬರ ನಿರ್ವಹಣೆ ತುಂಬಾ ಗಮನಿಸಬೇಕಾದ ಕ್ಷೇತ್ರ. ಶಿಪಾರಿತ ಪ್ರಮಾಣದ ೬೦% ಬಳಕೆಯಲ್ಲಿ ಹೆಚ್ಚಿನ ಸೂಕ್ಷ್ಮ ಜೀವಿಗಳ ಚಟುವಟಿಕೆ ಗಮನಿಸಲಾಗಿದೆ.
ಪ್ರಾರ್ಥನೆಯೊಂದಿಗೆ ವಾರ್ಷಿಕೋತ್ಸ ಪ್ರಾಂರಂಭಿಸಿ, ಅಧ್ಯಕ್ಷರಾಗಿ ಮನೋಹರ ಮಸ್ಕಿಯವರು ಪ್ರಸ್ತಾವನೆ ಮಾತನಾಡಿ,ಕೃಷ್ಣ ಕುಮಾರ್ ಅವರು, ಮಾರುಕಟ್ಟೆ ಬಗ್ಗೆ ಮಾತನಾಡಿ, ಹಲವರು ಪಯಸ್ವಿನಿ ಕ್ಲಬ್ ಹೌಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ,ತಮ್ಮ ಅನುಭವ ಹಂಚಿಕೊಳ್ಳುತ್ತಾ, ರಮೇಶ ದೇಲಂಪಾಡಿಯವರ ವಂದನಾರ್ಪಣೆಯೊಂದಿಗೆ ಅಚ್ಚುಕಟ್ಟಾಗಿ ವಾರ್ಷಿಕೋತ್ಸವ ಸುಸಂಪನ್ನಗೊಂಡಿತು.
ಈ ಎಲ್ಲಾ ಕಾರ್ಯಕ್ರಮಗಳ ರೂವಾರಿಗಳಿಗೆ ಧನ್ಯವಾದಗಳ ಹೇಳುತ್ತಾ,ಮುಂದೆಯೂ ಇನ್ನಷ್ಟು ಕೃಷಿ ವಿಚಾರಗಳನ್ನು ಹಂಚಿಕೊಳ್ಳುವ ದೀಪಗೋಪುರವಾಗಿ ಬೆಳೆಯಲೆಂಬ ಶುಭ ಹಾರೈಕೆಗಳು.
-ಟಿಆರ್ಯಸ್.
(ಟಿ.ಆರ್. ಸುರೇಶ್‌ಚಂದ್ರ)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ