
ಉಡುಪಿ: ಉಡುಪಿಯ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ನಡೆಸುತ್ತಿರುವ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಪ್ರತಿ ವರ್ಷದಂತೆ ಜುಲೈ 7ರಂದು ಸಂಸ್ಥಾಪಕರ ದಿನವನ್ನು ಆಚರಿಸುತ್ತಿದೆ.
ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯವಿರಲಿದೆ. ಗೌರವ ಅತಿಥಿಗಳಾಗಿ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರೀಸರ್ಚ್ (ಐಎನ್‌ಸಿಎಎಸ್‌ಆರ್) ನ ಥಿಯೋರೆಟಿಕಲ್ ಸೈನ್ಸ್ ವಿಭಾಗದ ಡೀನ್ ಪ್ರೊ. ವಿದ್ಯಾಧಿರಾಜ ಎನ್.ಎಸ್, ಜೆಎನ್‌ಸಿಎಎಸ್‌ಆರ್‌ನ ಶಿಕ್ಷಣ ತಂತ್ರಜ್ಞಾನ ವಿಭಾಗದ ಸಹಾಯಕ ಸಮನ್ವಯಕಾರ ವಿನಾಯಕ ಕೆ ಪತ್ತಾರ್, ಹಾಗೂ ರೀಸರ್ಚ್ ಸ್ಕಾಲರ್ ಶ್ರೀಮತಿ ಧೀಮಹಿ ಭಾಗವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ