ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತನ ಫಲಿತಾಂಶ ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಯೋಜಕರಾದ ಶ್ರೀ ಸುಭಾಷ್ ಜಾದವ್, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಶ್ರೀ ಹರೀಶ್ ಹೆಚ್.ವೈ ಹಾಗೂ ಶಾಲಾ ಸಂಚಾಲಕರಾದ ಶ್ರೀ.ಅನಂತ ಪದ್ಮನಾಭ ಭಟ್ ಉಪಸ್ಥಿತರಿದ್ದರು.
ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಸಾಧನೆಗೈದ ಮಾಸ್ಟರ್ ಅಭಿರಾಮ್,ತೇಜಸ್ವಿ ನಾರಾಯಣ ಹಾಗೂ ಮಾಸ್ಟರ್ ಪ್ರೀತಮ್ ಮೆನೆಜಸ್ ಇವರುಗಳನ್ನು ಸನ್ಮಾನಿಸಲಾಯಿತು.ನಂತರ ಮಾತನಾಡಿದ ಮಾಸ್ಟರ್ ಅಭಿರಾಮ್ ತನ್ನ ಪರಿಶ್ರಮದ ಹಿಂದಿನ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿ, ತನ್ನ ಓದಿನ ರೀತಿ ಅಯಾಯ ದಿನದ ಪಾಠ ಆಯಾಯ ದಿನ ಓದಿದರೆ ಅದೇ ಸಾಧನೆಗೆ ದಾರಿ ತೋರುತ್ತೆ ಎಂದನು. ನಂತರ ಮಾತಾನಾಡಿದ ತೇಜಸ್ವಿ ನಾರಾಯಣ ಓದಿನ ಜೊತೆಗೆ ಇತರ ಚಟುವಟಿಕೆಗಳೂ ಓದಿಗೆ ಏಕಾಗ್ರತೆಗೆ ಸಹಕರಿಸುತ್ತೆ ಎಂದು ನುಡಿದನು.
ಶಾಲೆಯ ಸಲಹೆ ಸಹಕಾರದಿಂದ ಉತ್ತಮ ಅಂಕ ಪಡೆಯಲು ಸಾಧ್ಯ. ಶಾಲೆ ನೀಡಿದ ಸಹಾಯ ವಿವರಿಸಲು ಪದಗಳಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಓದುವ ಹವ್ಯಾಸ ಇಟ್ಟುಕೊಂಡು ಓದುತ್ತಾರೆ. ಅದನ್ನು ಬೆಂಬಲಿಸಬೇಕು ಎಂದನು. ತದನಂತರ ಹೆತ್ತವರ ಪರವಾಗಿ ಮಾತನಾಡಿದ ಶ್ರೀ ಉದಯಶಂಕರ್ ಗುರುಗಳ ಮಾರ್ಗದರ್ಶನ, ಮನೆಯ ವಾತಾವರಣ, ಹೆತ್ತವರ ಸಹಕಾರ ಮೂರು ವಿಚಾರ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತೆ. ವಿಶಿಷ್ಟ ಶಿಕ್ಷಣ ಪದ್ದತಿ ಹೊಂದಿರುವ ಶಾಲೆ ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆ. ಎಲ್ಲಾ ರೀತಿಯಲ್ಲೂ ಸಮರ್ಥವಾದ ಶಾಲೆ ಇದು. ಶಾಲೆಯ ವಾತಾವರಣ ಮಕ್ಕಳ ವರ್ತನೆಯಲ್ಲಿ ಗುಣಾತ್ಮಕ ಬದಲಾವಣೆ ಮೂಡಿಸುತ್ತೆ ಎಂದು ನುಡಿದರು.
ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಹರೀಶ್ ಎಂ.ವೈ ಮಾತನಾಡುತ್ತಾ ಧರ್ಮಸ್ಥಳದಲ್ಲಿ ಇರುವ ಕಾರಣ ಹೆಸರೇ ಈ ಶಾಲೆಗೆ ಸ್ಪೂರ್ತಿ. ಶಾಲೆಯ ದೇಗುಲಕ್ಕೆ ಬರುವ ಎಲ್ಲರೂ ಸಮಾನರು. ಶಾಲೆ ಪರಿಪೂರ್ಣ ಆಗುವುದು ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಂದ. ಎಲ್ಲರಿಗೂ ಇಲ್ಲಿ ಸಮಾನ ಅವಕಾಶ ಇದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಶಿಕ್ಷಣ ಎಂದರೆ ಜೀವನ ಕ್ರಮ.ಶಿಕ್ಷಣದಲ್ಲಿ ಮೌಲ್ಯ ಇರಬೇಕು. ಅದು ಶಾಲೆಯಲ್ಲಿ ಇದೆ ಎಂದು ನುಡಿದರು.
ನಂತರ ಮಾತನಾಡಿದ ಶ್ರೀ ಸುಭಾಷ್ ಜಾದವ್ ಮನುಷ್ಯ ಗುರಿತಲುಪಲು ಪ್ರಯತ್ನ ಪಡಬೇಕು. ಗುರು ಬೆನ್ನ ಹಿಂದೆ ಸದಾ ಇರುತ್ತಾರೆ. ಹೀಗೆ ಜೊತೆಗಿರುವ ಹೆತ್ತವರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ನುಡಿದರು.
ಶ್ರೀ ಅನಂತ ಪದ್ಮನಾಭ ಭಟ್ ಅವರು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಹರಸಿದರು. ನಂತರ ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಶಾಲೆಯ ಆಗುಹೋಗುಗಳ ಕುರಿತು ಹೆತ್ತವರಿಗೆ ತಿಳಿಯಪಡಿಸಿದರು. ಶ್ರೀಮತಿ ಅಂಜು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಪರಿಮಳ ಎಂ.ವಿ ಸ್ವಾಗತಿಸಿ ಶ್ರೀಮತಿ ಶಿಭಾ ವಂದಿಸಿದರು.
ಕಾರ್ಯಕ್ರಮ ವಿಧ್ಯಾರ್ಥಿಗಳ ಕಿರು ನಾಟಕದೊಂದಿಗೆ ಆರಂಭವಾಗಿ ಅದರೊಂದಿಗೆ ಅಂತ್ಯವಾಗಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ