ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್ನ ವಿದ್ಯಾರ್ಥಿಗಳು ಜುಲೈ 19ರಂದು 'ಸಾಂಪ್ರದಾಯಿಕ ದಿನ 2022' ಅನ್ನು ವೈವಿಧ್ಯತೆಯಲ್ಲಿ ಏಕತೆಯನ್ನು ಉತ್ತೇಜಿಸಲು ಮತ್ತು ನಮ್ಮ ಸಂಪ್ರದಾಯಗಳನ್ನು ಜೀವಂತವಾಗಿಡುವ ಉದ್ದೇಶದಿಂದ ಪಾಂಡೇಶ್ವರ ಕ್ಯಾಂಪಸ್ ನಲ್ಲಿ ಆಚರಿಸಿದರು.
ಕಾರ್ಯಕ್ರಮವನ್ನು ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ ಸ್ಟಡೀಸ್‌ನ ಡೀನ್ ಪ್ರೊ. ಪವಿತ್ರ ಕುಮಾರಿ ಉದ್ಘಾಟಿಸಿದರು.
ಆಚರಣೆಗಳ ನಂತರ 'ಸಾಂಪ್ರದಾಯಿಕ ರಾಜ ಮತ್ತು ಸಾಂಪ್ರದಾಯಿಕ ರಾಣಿ' ಕಿರೀಟಕ್ಕಾಗಿ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಮತ್ತು ತಮ್ಮ ಪ್ರತಿಭೆ ಪ್ರದರ್ಶಿಸಿದರು. 3ನೇ ವರ್ಷದ BBA (ಏವಿಯೇಷನ್ ಮ್ಯಾನೇಜ್ಮೆಂಟ್) ವಿದ್ಯಾರ್ಥಿ ಅಕ್ಷಾನ್ ಆಮೀನ್ ಸಾಂಪ್ರದಾಯಿಕ ರಾಜ, 2ನೇ ವರ್ಷದ BBA (ಏವಿಯೇಷನ್ ಮ್ಯಾನೇಜ್ಮೆಂಟ್) ವಿದ್ಯಾರ್ಥಿನಿ ಸೀಮಾ ವಿ. ಸಾಂಪ್ರದಾಯಿಕ ರಾಣಿ ಬಿರುದನ್ನು ಗೆದ್ದರು. ಏವಿಯೇಷನ್ ಸ್ಟಡೀಸ್ ಡೀನ್ ಪ್ರೊ.ಪವಿತ್ರ ಕುಮಾರಿ ಅವರು ಕಿರೀಟ ತೊಡಿಸಿದರು.
ಕೋರ್ಸ್ ಸಂಯೋಜಕಿ ಪ್ರೊ. ಕಾವ್ಯಶ್ರೀ, ಸಾಂಸ್ಕೃತಿಕ ಘಟಕದ ಸಂಯೋಜಕಿ ಪ್ರೊ. ಅಂಜನಾ ಟಿ.ವಿ, ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀ ಗುರುಕಿರಣ್, ಗೌರವ್ ದೇವಾಡಿಗ, ದಿಯಾ ಸಾಲಿಯಾನ್, ಸೀಮಾ, ಸಾಕ್ಷಿ ಇದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ