ಮಂಗಳೂರು: ನಗರದ ರೋಟರಿ ಕ್ಲಬ್ ಮಂಗಳೂರು ಸೀಸೈಡ್ ಕ್ಲಬ್ ನ ಪದಗ್ರಹಣ ಸಮಾರಂಭವು ಇತ್ತೀಚೆಗೆ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಡೆಯಿತು. ರೋಟರಿ ಜಿಲ್ಲೆ 3181 ರ 2024-25 ಸಾಲಿನ ನಿಯೋಜಿತ ರಾಜ್ಯಪಾಲ ವಿಕ್ರಂ ದತ್ತ ರವರು ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.
ಸಹಾಯಕ ಗವರ್ನರ್ ಶಶಿಧರ್, ಕ್ಲಬ್‌ನ ಪತ್ರಿಕೆ ʼಸಮುದ್ರ ವಾಹಿನಿʼಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕ್ಲಬ್‌ನ ಮಾಜಿ ಅಧ್ಯಕ್ಷ ಹಾಗೂ ವಲಯ ಸೇನಾನಿ ಸುರೇಶ್ ಎಂ ಎಸ್ ಅವರು ಶುಭ ಹಾರೈಸಿದರು. ಅಧ್ಯಕ್ಷರಾಗಿ ಡಾ. ಯತೀಶ್ ಕುಮಾರ್, ಉಪಾಧ್ಯಕ್ಷರಾಗಿ ನಿತಿನ್ ಕುಮಾರ್, ಕಾರ್ಯದರ್ಶಿಯಾಗಿ ಚೇತನ್ ಸುವರ್ಣ, ಖಜಾಂಜಿಯಾಗಿ ಶೇಖರ್, ನಿರ್ದೇಶಕರುಗಳಾಗಿ ಕಿರಣ್ ಕುಮಾರ್, ಸುರೇಶ ಎಂ ಎಸ್, ಸುಧಾಮ ಯು, ನಿತಿನ್ ರಾಮ ಸುವರ್ಣ, ರಾಜೇಶ್ ಕೆ ಟಿ ಹಾಗೂ ಸಾರ್ಜೆಂಟ್ ಆಗಿ ಅಚನ್ ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದರು.
ಪುಷ್ಪಾಕರ್, ಪ್ರಸಾದ್ ಹಾಗೂ ವಿಠ್ಠಲ್ ಆಚಾರ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಮಾಜಿ ಅಧ್ಯಕ್ಷರಾದ ಸುರೇಶ್ ಎಂ ಎಸ್ ರವರಿಗೆ ಪಾಲ್ ಹ್ಯಾರಿಸ್ ಫೆಲೋ ಪದವಿ ನೀಡಿ ಗೌರವಿಸಲಾಯಿತು. ಮಾಜಿ ಜಿಲ್ಲಾ ರಾಜ್ಯಪಾಲ ರಂಗನಾಥ್ ಭಟ್, ಮಾಜಿ ಸಹಾಯಕ ಗವರ್ನರ್ ರಾಜೇಂದ್ರ ಕಲ್ಬಾವಿ, ಯತೀಶ್ ಬೈಕಂಪಾಡಿ ಹಾಗೂ ಸಹಾಯಕ ರಾಜ್ಯಪಾಲರುಗಳಾದ ರಾಜಗೋಪಾಲ್ ರೈ, ಬಾಲಕೃಷ್ಣ, ಸೂರಜ್ ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಕ್ಲಬ್‌ನ ಅಧ್ಯಕ್ಷ ಅಶೋಕ್ ಎಂ ಕೆ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಹೀರಾಚಂದ್ ವರದಿ ವಾಚಿಸಿದರು. ನೂತನ ಸದಸ್ಯರ ಪರಿಚಯವನ್ನು ಶ್ರೀಕರ್ ರವರು ನಡೆಸಿಕೊಟ್ಟರು. ತಿಯಾ ರಾಜೇಶ್ ಪ್ರಾರ್ಥನೆಗೈದರು. ಅನಿತಾ ಪಿಂಟೋ, ನಿತಿನ್ ಕುಮಾರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಫ್ಲೋರಿಕ್ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಚೇತನ್ ಸುವರ್ಣ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ