ಪುಂಜಾಲಕಟ್ಟೆ: ಸ.ಪ್ರ.ದ. ಕಾಲೇಜು ಎನ್ನೆಸ್ಸೆಸ್‌ ವತಿಯಿಂದ ನೇಜಿ ನಾಟಿ ಪ್ರಾತ್ಯಕ್ಷಿಕೆ

Upayuktha
0

ಪುಂಜಾಲಕಟ್ಟೆ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ, ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ನೇಜಿ ನಾಟಿ ಪ್ರಾತ್ಯಕ್ಷತೆ ಮತ್ತು ಗ್ರಾಮೀಣ ಕ್ರೀಡೆಯನ್ನು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ ಮಡವು ಇದರ ವಠಾರದ ಗದ್ದೆಯಲ್ಲಿ ಆಯೋಜಿಸಲಾಗಿತ್ತು.


ನೇಜಿ ನೆಡುವಾಗ ಹಾಡುವ ಪಾಡ್ದನಗಳ ಮೂಲಕ ಸ್ವಯಂಸೇವಕರು ಹಿರಿಯ ರೈತಾಪಿ ಜನರೊಂದಿಗೆ ಬೆರೆತು ನೇಜಿ ನೆಟ್ಟರು ಮತ್ತು ಗ್ರಾಮೀಣ ಕ್ರೀಡೆಯನ್ನು ಆಡಿದರು. ಈ ಕಾರ್ಯಕ್ರಮಕ್ಕೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ಟಿ.ಕೆ. ಶರತ್ ಕುಮಾರ್ ಇವರು ಮಾರ್ಗದರ್ಶನವನ್ನು ಮತ್ತು ಗದ್ದೆಯನ್ನು ನೇಜಿ ನೆಡಲು ಶ್ರೀ ಸಂತೋಷ್ ಇವರು ಸಹಕಾರವನ್ನು ನೀಡಿದರು.


ಈ ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಸಂತೋಷ್ ಪ್ರಭು ಎಂ ಮತ್ತು 50 ಮಂದಿ ಸ್ವಯಂಸೇವಕರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top