ವಿಶ್ವದ ಅತ್ಯಂತ ಹಳೆಯ, ದೊಡ್ಡ ಗಂಡು ಪಾಂಡಾ ಇನ್ನಿಲ್ಲ

Upayuktha Writers
0

ಹಾಂಗ್​ ಕಾಂಗ್: ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಗಂಡು ಪಾಂಡಾ ಇನ್ನಿಲ್ಲ. ಗುರುವಾರ ಬೆಳಗ್ಗೆ ಹಾಂಕಾಂಗ್‌ನ ಓಷನ್ ಪಾರ್ಕ್‌ನಲ್ಲಿ ಆನ್ ಆನ್ ಎಂಬ ಹೆಸರಿನ ಈ ಪಾಂಡಾಗೆ ದಯಾಮರಣ ನೀಡಲಾಯಿತು.


ಈ ಪಾಂಡದ ವಯಸ್ಸು 35 ವರ್ಷಗಳು. ಪಾಂಡಾ ಘನ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿತು.  ಓಷನ್ ಪಾರ್ಕ್ ಈ ಪಾಂಡಾದ ಯೋಗಕ್ಷೇಮ ನೋಡಿಕೊಳ್ಳುತ್ತಿತ್ತು. ಪಾಂಡಾದ ತೊಂದರೆಯನ್ನು ನಿವಾರಿಸಲು ಸಿಬ್ಬಂದಿ ಅದಕ್ಕೆ ವೈದ್ಯಕೀಯ ಆರೈಕೆಯನ್ನು ಸಹ ನೀಡಿದ್ದರು.




ಇದರ ಪರಿಸ್ಥಿತಿಯು 21 ಜುಲೈ 2022 ರಂದು ಹದಗೆಟ್ಟಿದ್ದು, ಓಷನ್ ಪಾರ್ಕ್ ಮತ್ತು ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆಯ ಪಶು ವೈದ್ಯರು ಚೀನಾ ಸಂರಕ್ಷಣೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ  ಸಮಾಲೋಚಿಸಿದ ನಂತರ ದೈತ್ಯ ಪಾಂಡಾವನ್ನು ದಯಾಮರಣಗೊಳಿಸುವ  ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಗುರುವಾರ ಬೆಳಗ್ಗೆ 8.40ಕ್ಕೆ ಪಾಂಡವಿದ್ದ ಆವರಣದಲ್ಲೇ ದಯಾಮರಣ ಪ್ರಕ್ರಿಯೆ ನೆರವೇರಿತು ಎಂದು ಹೇಳಿ


ಆನ್ ಆನ್​ ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಜನಿಸಿದೆ. 1999 ರಲ್ಲಿ ಬೀಜಿಂಗ್ ಆನ್ ಆನ್​ ಮತ್ತು ಹೆಣ್ಣು ದೈತ್ಯ ಪಾಂಡಾ ಜಿಯಾ ಜಿಯಾ ಅವರನ್ನು ಹಾಂಕಾಂಗ್‌ಗೆ ಉಡುಗೊರೆಯಾಗಿ ಕಳುಹಿಸಿತು. ಜಿಯಾ - ಜಿಯಾ 2016 ರಲ್ಲಿ 38 ನೇ ವಯಸ್ಸಿನಲ್ಲಿ ಸಾವನ್ನಪ್ಪಿತು. ಪ್ರಸ್ತುತ ಉದ್ಯಾನದಲ್ಲಿ ಇನ್ನೂ ಎರಡು ದೈತ್ಯ ಪಾಂಡಾಗಳಿವೆ. ಇದನ್ನು 2007 ರಲ್ಲಿ ಕೇಂದ್ರ ಸರ್ಕಾರವು ಹಾಂಕಾಂಗ್‌ಗೆ ನೀಡಿತು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top