ಮಳೆ ಬರಲೆಂದು ಪ್ರಾರ್ಥಿಸಿ ಮೈಯೆಲ್ಲಾ ಮಣ್ಣು ಮೆತ್ತಿಕೊಂಡ ಮಕ್ಕಳು

Upayuktha Writers
0

ಬಿಹಾರ: ಮಳೆ ಬರಲೆಂದು ಪ್ರಾರ್ಥಿಸಿ ನಾಲ್ವರು ಮಕ್ಕಳು ತಮ್ಮ ಮೈಯನ್ನು ಸಂಪೂರ್ಣ ಕೆಸರಿನಿಂದ ಮೆತ್ತಿಕೊಂಡಿರುವ ಫೋಟೊ  ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿದೆ.


ಬಿಹಾರದಲ್ಲಿ  ಮಳೆಯಾಗದೆ ಜನ ನೀರಿಗಾಗಿ, ಕಪ್ಪೆಗಳ ಮದುವೆ ಮಾಡಿಸುವುದು, ಮಣ್ಣು ಅಥವಾ ರಾಡಿ ನೀರಿನಲ್ಲಿ ಮುಳುಗುವುದು ಹೀಗೆ ಏನೇನೋ ಮಾಡುತ್ತಿದ್ದಾರೆ.




ಇಂಥದೇ ಒಂದು ಘಟನೆ ಈಗ ಬಿಹಾರದ ಜಾಮುಯಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಳೆ ಬರಲಿ ಎಂದು ಪ್ರಾರ್ಥಿಸಿ ನಾಲ್ವರು ಮಕ್ಕಳು ತಮ್ಮ ಮೈಯನ್ನು ಸಂಪೂರ್ಣ ಕೆಸರಿನಿಂದ ಮೆತ್ತಿಕೊಂಡಿದ್ದಾರೆ. ದಾರಿಹೋಕರೊಬ್ಬರು, ಊರ ಹೊರಗೆ ಆಡುತ್ತ ಮೈಯೆಲ್ಲ ಕೆಸರು ಮಾಡಿಕೊಂಡು ನಿಂತಿದ್ದ ಈ ಮಕ್ಕಳ ಫೋಟೊ ಸೆರೆಹಿಡಿದು ಇಂಟರ್ನೆಟ್​ಗೆ ಅಪ್ಲೋಡ್ ಮಾಡಿದ್ದಾರೆ.  






Post a Comment

0 Comments
Post a Comment (0)
To Top