ಅಯೋಧ್ಯೆ- ಕಾಶಿಯ ಬಳಿಕ ಗುಜರಾತಿನ ಮಹಾಕಾಳಿ ದೇಗುಲ ಸ್ವಾಧೀನ‌, ಪುನರುತ್ಥಾನ

Upayuktha
0

ಮೋದಿ ದಿಗ್ವಿಜಯದ ಮತ್ತೊಂದು ಮಹೋನ್ನತ ಹೆಜ್ಜೆ



ಸನಾತನ ಧರ್ಮದ ಮತ್ತೊಂದು ಮಹತ್ವದ ಮೈಲಿಗಲ್ಲು ಸದ್ದಿಲ್ಲದೇ ದಾಖಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ದಿಗ್ವಿಜಯ ಯಾತ್ರೆಗೆ ಗುಜರಾತಿನ ಮಹಾಕಾಳಿ ದೇಗುಲ ಪುನರುತ್ಥಾನ ಸೇರ್ಪಡೆಯಾಗುತ್ತಿದೆ.


11ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ, ಮಹರ್ಷಿ ವಿಶ್ವಾಮಿತ್ರರು ಪ್ರತಿಷ್ಠಾಪಿಸಿದ್ದೆನ್ನಲಾದ ಗುಜರಾತಿನ ಪಂಚಮಹಲ್ ಜಿಲ್ಲೆಯ ಮಹಾಕಾಳಿ ದೇಗುಲ 500 ವರ್ಷಗಳ ಹಿಂದೆ ಸುಲ್ತಾನ್‌ ಮಹಮದ್ ಬೇಗಡಾ ಧ್ವಂಸ ಗೊಳಿಸಿ ದರ್ಗಾ ನಿರ್ಮಿಸಿದ್ದನು.


ಇದೀಗ ನರೇಂದ್ರ ಮೋದಿಯವರು ಮತ್ತು ಗುಜರಾತ್‌ ಸರ್ಕಾರ ಮತ್ತೆ ದರ್ಗಾದ ಮುಖ್ಯಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ಬದಲಿ ಜಾಗ ಕೊಟ್ಟು ಈ ದರ್ಗಾವನ್ನು ಸ್ವಾಧೀನ ಪಡಿಸಿಕೊಂಡು 125 ಕೋಟಿ ರೂ ವೆಚ್ಚದಲ್ಲಿ ಪುನರುತ್ಥಾನಗೊಳಿಸಿದ್ದಾರೆ.


ಈ ನವೀಕೃತ ಮಂದಿರವನ್ನು ಪ್ರಧಾನಿ ಮೋದಿಜೀಯವರು ತಮ್ಮ ಮಾತೃಶ್ರೀಯವರ ನೂರನೇ ಜನುಮದಿನದಂದು, ಮಂದಿರದ ಶಿಖರದ ಮೇಲೆ ಭಗವಾಧ್ವಜವನ್ನು ಅರಳಿಸಿ ಲೋಕಾರ್ಪಣೆಗೊಳಿಸುತ್ತಿದ್ದಾರೆ. ಸಮಸ್ತ ಸನಾತನ ಧರ್ಮೀಯರಿಗೆ ಇದೊಂದು ಮಹೋನ್ನತ ಘಳಿಗೆಯೇ ಸರಿ.


ಈ ಅಮೋಘ ಸಾಧನೆಗಾಗಿ ಜಗನ್ಮಾತೆ ಮಹಾಕಾಳಿ ನರೇಂದ್ರ ಮೋದಿಯವರಿಗೆ ಮತ್ತಷ್ಟು ಕ್ಷಾತ್ರ ತೇಜಸ್ಸನ್ನು ಅನುಗ್ರಹಿಸಿ ಅವರಿಗೆ ಮತ್ತು ದೇಶಕ್ಕೆ ಎದುರಾಗಿರುವ ಸಮಸ್ತ (ಆಂತರಿಕ ಮತ್ತು ಬಾಹ್ಯ) ಶತ್ರುಗಳನ್ನು ನಿಗ್ರಹಿಸಿ ಮತ್ತಷ್ಟು ಶ್ರೇಯಸ್ಸನ್ನು ಒಳಿತನ್ನು ಸುರಕ್ಷೆ ಸಮೃದ್ಧಿ, ಸುಭಿಕ್ಷೆ ಶಾಂತಿ ನೆಮ್ಮದಿಯನ್ನು ಸಾಧಿಸುವ ಅದ್ಭುತ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.


-ವಾಸುದೇವ ಭಟ್ ಪೆರಂಪಳ್ಳಿ.

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top