ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೊಳಪಟ್ಟ ಎಲ್ಲಾ ಸಂಯೋಜಿತ/ ಘಟಕ/ ಸ್ವಾಯತ್ತ ಕಾಲೇಜುಗಳಲ್ಲಿ ಶೈಕ್ಷಣಿಕ ವರ್ಷ 2022-23ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳ ಪ್ರಥಮ ಸೆಮಿಸ್ಟರ್ ತರಗತಿಗಳಿಗೆ ಜೂನ್ 20, 2022ರಿಂದ ಪ್ರವೇಶಾತಿ ಆರಂಭಗೊಂಡಿರುತ್ತದೆ. ಪ್ರವೇಶಾತಿಗೆ ದಂಡ ಶುಲ್ಕ ರಹಿತವಾಗಿ ಆಗಸ್ಟ್ 06, 2022 ಹಾಗೂ ದಂಡ ಶುಲ್ಕ ಸಹಿತವಾಗಿ ಆಗಸ್ಟ್ 16, 2022 ಕೊನೆಯ ದಿನವಾಗಿರುತ್ತದೆ.
ಜುಲೈ 09, 2022 ರ ಸರ್ಕಾರದ ಆದೇಶದಂತೆ ಆಗಸ್ಟ್ 17, 2022 ರಿಂದ ಎಲ್ಲಾ ಸ್ನಾತಕ ಕಾರ್ಯಕ್ರಮಗಳ ಪ್ರಥಮ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ, ಎಂದು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ