ಮಂಗಳೂರು: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ವೃತ್ತಿ ಭವಿಷ್ಯವನ್ನು ರೂಪಿಸುವ ಸಂವಾದ ಮಾರ್ಗದರ್ಶನ ಕಾರ್ಯಕ್ರಮ ಎಂಬ ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಶಿವರಾಮ ಕಾರಂತ ಭವನದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ಎಂಕಾಂ ಹಾಗೂ ಎಂಬಿಎ ಸಂಯೋಜಕ ಡಾ. ಜಗದೀಶ್ ಬಿ., ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ, ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ ಕೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಜ್ಙಾನಾರ್ಜನೆಗೆ ಶಿಕ್ಷಣಕ್ಕಿಂತ ಉತ್ತಮವಾದ ಹಾಗೂ ಸದೃಶವಾದ ಬೇರಾವುದೇ ಮೂಲಗಳಿಲ್ಲ, ಎಂದರು.
ಮೊದಲ ದಿನ, ‘ವೃತ್ತಿ ಮಾರ್ಗ - ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣದ ಮೂಲಕ ನಕ್ಷೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ರಾಘವೇಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸಂತೋಷ್ ಮಾಡರೇಟರ್ ಆಗಿದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.
‘ಕಲಾ ಶಿಕ್ಷಣದಲ್ಲಿ ಬಹು ಆಯಾಮದ ಅವಕಾಶಗಳು’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕ ಮಧುಶ್ರೀ ಜೆ ಶ್ರೀಯಾನ್ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಡಾ. ಮೋಹನ್ ಮಾಡರೇಟರ್ ಆಗಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಜೋಯ್ಸ್ ವಿರೇಂಧ್ರಿತ ಈ ಸಂವಾದ ನಡೆಸಿಕೊಟ್ಟರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಮತ ಸ್ವಾಗತಿಸಿ, ವರ್ಷ ರೈ ವಂದಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಅಶ್ವಿನಿ ಅನುಶ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ