ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಏವಿಯೇಶನ್ ಅಧ್ಯಯನ ಸಂಸ್ಥೆಯ ಐವರು ವಿದ್ಯಾರ್ಥಿಗಳು ವಿವಿಧ ವೈಮಾನಿಕ ಸಂಸ್ಥೆಗಳಲ್ಲಿ ಉದ್ಯೋಗ ನೇಮಕಾತಿ ಪಡೆದಿದ್ದಾರೆ.
ಬಿಬಿಎ ಏವಿಯೇಶನ್ ಸ್ಟಡೀಸ್‌ನ ಜಲೀಲ್ ಅಹ್ಮದ್ ದೋಹಾ- ಕತಾರ್‌ನ ಎಸ್‌ಎಎಫ್ ಟ್ರೇಡಿಂಗ್ ಅಂಡ್ ಕನ್‌ಸ್ಟ್ರಕ್ಷನ್ ಸಂಸ್ಥೆಯಲ್ಲಿ ನೇಮಕಾತಿ ಆದೇಶ ಪಡೆದಿದ್ದಾರೆ.
ಬಿಬಿಎ ಏವಿಯೇಶನ್ ಸ್ಟಡೀಸ್ ವಿದ್ಯಾರ್ಥಿನಿ ಪೂನಮ್ ಅಡಪ ಅವರಿಗೆ ಇನ್‌ಫೋಸಿಸ್‌ನಲ್ಲಿ ಪ್ರೋಸೆಸ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ಪತ್ರ ದೊರೆತಿದೆ.
ಇದೇ ವಿಭಾಗದ ಇನ್ನೊಬ್ಬ ವಿದ್ಯಾರ್ಥಿನಿ ಜೇಷ್ಮಾ ಜೈಸನ್ ಅವರಿಗೆ ಯು.ಕೆಯ ಲಿವರ್‌ಪೂಲ್ ಏರ್‌ಪೋರ್ಟ್‌ನಲ್ಲಿ ಸ್ವಿಸ್‌ಪೋರ್ಟ್ ಗ್ರೂಪ್ ಸಂಸ್ಥೆಯಲ್ಲಿ ಉದ್ಯೋಗ ದೊರೆತಿದೆ.
ಇದೇ ವಿಭಾಗದಲ್ಲಿ ಅದ್ಯಯನ ನಡೆಸಿದ ಕುಮಾರಿ ಸಿಂಶಾ ಅವರಿಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫ್ಲೈಟ್ ಕಿಚನ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಎಫ್‌ಕೆಎಂಎಸ್) ನಲ್ಲಿ ಉದ್ಯೋಗ ದೊರೆತಿದೆ.
ತ್ರಿಯಾಗ್ ಜನೇಶ್ವರ್ ಬೇಕಲ್ ಅವರಿಗೆ ಕತಾರ್ ಏರ್‌ವೇಸ್‌ನಲ್ಲಿ ವಾರ್ಷಿಕ 26 ಲಕ್ಷ ರೂ ವೇತನ ಪ್ಯಾಕೇಜ್ ಇರುವ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಹುದ್ದೆಗೆ ನೇಮಕಾತಿ ಆದೇಶ ಲಭಿಸಿದೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಶ್ರೀನಿವಾಸ ಯುನಿವರ್ಸಿಟಿ ಏವಿಯೇಶನ್ ಅಧ್ಯಯನ ವಿಭಾಗವು ಉಜ್ವಲ ಭವಿಷ್ಯವನ್ನು ಹಾರೈಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ