ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Upayuktha
0

ಪುತ್ತೂರು: 2022ನೇ ಸಾಲಿನ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಮೊದಲ ಸುತ್ತಿನ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿರುತ್ತಾರೆ.


ವಿದ್ಯಾರ್ಥಿಗಳಾದ ವಿಶಾಖ್ ಕಾಮತ್  99.33 ಪರ್ಸೆಂಟೈಲ್ (ಪುತ್ತೂರಿನ ಬೊಳುವಾರಿನ ಎಂ. ವಿದ್ಯಾಧರ್ ಕಾಮತ್ ಮತ್ತು ಎಂ. ಮುಕ್ತ ಕಾಮತ್ ದಂಪತಿ ಪುತ್ರ), ಕೀರ್ತನ್ ಅಡಿಗ 98.47  ಪರ್ಸೆಂಟೈಲ್ (ಕಾಸರಗೋಡಿನ ಬಾಲಕೃಷ್ಣ ಅಡಿಗ ಮತ್ತು ಸುಲೋಚನಾ ದಂಪತಿ ಪುತ್ರ), ಶ್ರೀನಿಧಿ ಐ 98.42 ಪರ್ಸೆಂಟೈಲ್ (ಕಾಸರಗೋಡಿನ ಪೆರ್ಲದ ಹರೀಶ್ ಐ ಮತ್ತು ಜಯಪ್ರದ ಕೆ ದಂಪತಿ ಪುತ್ರ), ಮನ್ವಿತ ಎನ್ ಪಿ 94.61 ಪರ್ಸೆಂಟೈಲ್ (ಕಾಸರಗೋಡಿನ ನೀರ್ಚಾಲಿನ ಪುರುಷೋತ್ತಮ ಶರ್ಮ ಮತ್ತು ಸುಮಾ ದಂಪತಿ ಪುತ್ರಿ), ಭೀಮ ಕಶ್ಯಪ ಶರ್ಮ 91.81 ಪರ್ಸೆಂಟೈಲ್ (ಬಂಟ್ವಾಳದ ಕೋಡಪದವಿನ ಗಣಪತಿ ಭಟ್ ಡಿ ಮತ್ತು ಶಾರದಾಂಬ ಎ ದಂಪತಿ ಪುತ್ರ), ಮಲ್ಲಿಕಾರ್ಜುನ ಎಂ 90.57 ಪಪರ್ಸೆಂಟೈಲ್ (ತುಮಕೂರಿನ ತುರುವೇಕೆರೆಯ ಮೋಹನ್ ಕುಮಾರ್ ಎಂ.ಸಿ ಮತ್ತು ಉಮಾ ಜಿ ಎಲ್ ದಂಪತಿ ಪುತ್ರ), ಪವನ್ ವೈ.ಡಿ.ಜೆ 90.2 ಪರ್ಸೆಂಟೈಲ್ (ಪುತ್ತೂರು ಪಡ್ನೂರಿನ ದೇವಪ್ಪ ಗೌಡ ವೈ ಮತ್ತು ಕುಸುಮ ಬಿ ದಂಪತಿ ಪುತ್ರ), ಗಗನ್ ಎಂ.ಎಸ್ 89.38 ಪರ್ಸೆಂಟೈಲ್ (ಪುತ್ತೂರು ನೆಲಪ್ಪಾಲಿನ ಶಿವರಾಮ ಎಂ.ಎಸ್ ಮತ್ತು ಮಮತಾ ಎಂ.ಕೆ ದಂಪತಿ ಪುತ್ರ), ಚೈತನ್ಯ ಎಸ್ 86.75 ಪರ್ಸೆಂಟೈಲ್ (ಬಂಟ್ವಾಳದ ನೇರಳಕಟ್ಟೆಯ ಈಶ್ವರ ನಾಯ್ಕ ಎಸ್ ಮತ್ತು ಗೀತಾ ಜಿ ದಂಪತಿ ಪುತ್ರಿ) ಅಂಕ ಗಳಿಸಿದ್ದಾರೆ.




ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ.ಇ.ಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top