|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಾಳಿ - ಬಾಳಗೊಡಿ ಎಂಬಂತೆ ಪ್ರಕೃತಿಯನ್ನು ಉಳಿಸೋಣ: ವೈದೇಹಿ ಎಸ್ ನಟ್ಟೋಜ

ಬಾಳಿ - ಬಾಳಗೊಡಿ ಎಂಬಂತೆ ಪ್ರಕೃತಿಯನ್ನು ಉಳಿಸೋಣ: ವೈದೇಹಿ ಎಸ್ ನಟ್ಟೋಜ

ಪುತ್ತೂರು: ಶಿಕ್ಷಣದ ಮುಖ್ಯ ಉದ್ದೇಶ ನೆಮ್ಮದಿಯಿಂದ ಬಾಳುವುದು. ಪ್ರಕೃತಿಯನ್ನು ಅತಿಯಾಗಿ ಹಾಳುಮಾಡದೆ ನಮ್ಮ ಪೂರ್ವಜರ ಆಶಯದಂತೆ, ಮಾರ್ಗದರ್ಶನದಂತೆ ನಿಸ್ವಾರ್ಥ ಭಾವನೆಯಿಂದ ಬಾಳಬೇಕು. ನಮ್ಮ ಸ್ವಾರ್ಥಕ್ಕಾಗಿ ಪ್ರಾಣಿ-ಪಕ್ಷಿಗಳನ್ನು ಅಮಾನುಷವಾಗಿ ಸಾಯಿಸುವುದು ಸರಿಯಲ್ಲ. ಹೈನುಗಾರಿಕೆಯಲ್ಲಿ ನಮ್ಮ ಪಾರಂಪರಿಕ ಪದ್ಧತಿಯಂತೆ ಮಿಶ್ರ ತಳಿಗಳ ಬದಲಾಗಿ ದೇಸೀ ತಳಿಗಳನ್ನೇ, ದೇಸೀ ಆಹಾರವನ್ನೇ ಕೊಟ್ಟು ಬೆಳೆಸಿ ಶುದ್ಧ ಹಾಲು ಪಡೆದು ನಮ್ಮ ಹಾಗೂ ಸಮಾಜದ ಆರೋಗ್ಯವನ್ನು ಕಾಪಾಡಬೇಕು. ಬಾಳಿ-ಬಾಳಗೊಡಿ ಎಂಬಂತೆ ಪ್ರಕೃತಿಯನ್ನು ಉಳಿಸುವ ಕೆಲಸ ಮಾಡೋಣ ಎಂದು ದೆಹಲಿಯ ಪ್ರತಿಷ್ಠಿತ ಐ.ಐ.ಟಿ. ಸಂಸ್ಥೆಯಲ್ಲಿ ಪಿ.ಎಚ್.ಡಿ.ಗೆ ಪ್ರವೇಶ ಪಡೆದ ಪುತ್ತೂರಿನ ವೈದೇಹಿ ಎಸ್ ನಟ್ಟೋಜ ಹೇಳಿದರು.


ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿಗಳಿಗೆ ಎಚ್.ಆರ್.ಡಿ. ವತಿಯಿಂದ ನಡೆಸಲ್ಪಟ್ಟ ನೈತಿಕ ಶಿಕ್ಷಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು.


ಕಾರ್ಯಕ್ರಮದಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಇದರ ಖಜಾಂಜಿ ರಾಜಶ್ರೀ ಎಸ್ ನಟ್ಟೋಜ, ಕನ್ನಡ ಉಪನ್ಯಾಸಕ ಸತೀಶ್ ಇರ್ದೆ, ಉಪನ್ಯಾಸಕಿಯರಾದ ಪುಷ್ಪಲತಾ, ಸಂಧ್ಯಾ ಕುಮಾರಿ, ಸೌಮ್ಯಾ ಬಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم