ನೆರೆ ರಾಜ್ಯಗಳಿಂದ ಗೋವಾಗೆ ಬರುವ ಮೀನುಗಳ ಸರಕು ಗುಣಮಟ್ಟ ಪರೀಕ್ಷೆ ದೋಷಪೂರಿತ

Upayuktha
0

ಪಣಜಿ: ನೆರೆಯ ರಾಜ್ಯಗಳಿಂದ ಗೋವಾಕ್ಕೆ ಬರುವ ಮೀನುಗಳನ್ನು ಚೆಕ್ ಪಾಯಿಂಟ್‍ನಲ್ಲಿ ಹಾಗೂ ಎಫ್‍ಡಿಎಯ ಪ್ರಯೋಗಾಲಯದಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗುತ್ತದೆ ಎಂದು ಎಫ್‍ಡಿಎ ಹೇಳುತ್ತಿದ್ದರೂ, ಗ್ರಾಹಕರು ಈ ಪರೀಕ್ಷೆಯ ಬಗ್ಗೆ ಇನ್ನೂ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಟ್ರಕ್‍ಗಳು ಮತ್ತು ರೈಲುಗಳಿಂದ ಬರುವ ಎಲ್ಲಾ ಮೀನುಗಳನ್ನು ಪರಿಶೀಲಿಸುವುದು ಅವಶ್ಯಕ. ಅಲ್ಲದೆ, ಈ ಪರೀಕ್ಷೆಯನ್ನು ಇನ್ನಷ್ಟು ಪಾರದರ್ಶಕವಾಗಿ ಮಾಡಬೇಕು ಎಂದು ಗ್ರಾಹಕರು ಕೇಳುತ್ತಿದ್ದಾರೆ.


ಪ್ರಸ್ತುತ ಮಡಗಾಂವ ಸಗಟು ಮೀನು ಮಾರುಕಟ್ಟೆಗೆ ಟ್ರಕ್‍ಗಳು ಮತ್ತು ರೈಲು ಮೂಲಕ ಮೀನುಗಳನ್ನು ತರಲಾಗುತ್ತದೆ. ಎಫ್‌ಡಿಎ ಸಿಬ್ಬಂದಿ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ತಡರಾತ್ರಿಯಲ್ಲಿ ಮೀನುಗಳನ್ನು ಪರಿಶೀಲಿಸುತ್ತಾರೆ. ಆದಾಗ್ಯೂ, ಈ ತಪಾಸಣೆಯನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಅವರು ಯಾರಿಗೂ ತಿಳಿಸುವುದಿಲ್ಲ ಎಂದು ಗ್ರಾಹಕರು ಹೇಳಿಕೆ ನೀಡಿದ್ದಾರೆ. ಗೋವಾಕ್ಕೆ ಪ್ರಮುಖವಾಗಿ ಕರ್ನಾಟಕ ಮತ್ತು ಕೇರಳ ಭಾಗದಿಂದ ಪ್ರತಿದಿನ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಪೂರೈಕೆಯಾಗುತ್ತದೆ.


ಮಡಗಾಂವ ಸಗಟು ಮೀನು ಮಾರುಕಟ್ಟೆಯಲ್ಲಿ ಇದು ಮತ್ತೊಮ್ಮೆ ದೃಢಪಟ್ಟಿದೆ. ಮಾರ್ಗಾವೊದ ಹೋಟೆಲ್ ನಿರ್ವಾಹಕರೊಬ್ಬರು ಪ್ರಯೋಗಾಲಯದಲ್ಲಿ ಈ ಪರೀಕ್ಷೆಯನ್ನು ಹೇಗೆ ಮಾಡಲಾಗಿದೆ ಎಂದು ನೋಡಲು ಪ್ರಯತ್ನಿಸಿದಾಗ, ಅಲ್ಲಿನ ತಂತ್ರಜ್ಞರು ಅವರನ್ನು ಹೊರಹಾಕಿದಾಗ ವಿವಾದ ಹುಟ್ಟಿಕೊಂಡಿತು ಎನ್ಮಲಾಗಿದೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.


ಮಡಗಾಂವಗೆ ರೈಲು ಮಾರ್ಗವಾಗಿ ಬರುವ ಮೀನಿನ ಪರೀಕ್ಷೆಯೂ ಸರಿಯಾಗಿ ನಡೆಯುತ್ತಿಲ್ಲ ಎಂದು ಕೆಲ ವ್ಯಾಪಾರಿಗಳು ಆರೋಪಿಸಿದರು. ರೈಲಿನಲ್ಲಿ ತಂದ ಮೀನನ್ನು ಪರೀಕ್ಷೆಗಾಗಿ ಮಡಗಾಂವ್‍ನಲ್ಲಿರುವ ಪ್ರಯೋಗಾಲಯಕ್ಕೆ ತರಲಾಗುತ್ತದೆ ಎಂದು ಎಫ್‍ಡಿಎ ನಿರ್ದೇಶಕಿ ಜ್ಯೋತಿ ಸರ್ದೇಸಾಯಿ ತಿಳಿಸಿದರು. ಆದರೆ ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಮೀನನ್ನು ಹೊರಗೆ ಮಾರಾಟ ಮಾಡಲಾಗುತ್ತದೆ. ಅವುಗಳನ್ನು ಪರೀಕ್ಷಿಸಲಾಗಿದೆಯೇ ಅಥವಾ ಇಲ್ಲವೇ? ಇದನ್ನು ಮೇಲ್ವಿಚಾರಣೆ ಮಾಡಲು ಎಫ್‌ಡಿಎ ಯಾವುದೇ ಕಾರ್ಯವಿಧಾನವನ್ನು ಹೊಂದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಮಡಗಾಂವ ಮಾರುಕಟ್ಟೆಗೆ ಬರುವ ಪ್ರತಿಯೊಂದು ವಾಹನದಲ್ಲಿರುವ ಮೀನುಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಸಗಟು ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ಮೌಲಾನಾ ಇಬ್ರಾಹಿಂ ತಿಳಿಸಿದರು.


ಮಾದರಿ ಪರೀಕ್ಷೆ ದೋಷಪೂರಿತ!

ಮಾದರಿ ಪರೀಕ್ಷಾ ವಿಧಾನವಾಗಿರುವುದರಿಂದ ಪರಿಪೂರ್ಣವಲ್ಲ ಎಂಬ ಅಭಿಪ್ರಾಯವನ್ನು ಮಡಗಾಂವ್ ಮಾಜಿ ಮೇಯರ್ ಸಾವಿಯೊ ಕೌಟಿನ್ಹೊ ವಿವರಿಸಿದರು. ವಾಹನದಲ್ಲಿನ ಫಾರ್ವರ್ಡ್ ಬಾಕ್ಸ್ ಗಳಲ್ಲಿರುವ ಮೀನುಗಳನ್ನು ಮಾತ್ರ ತಪಾಸಣೆ ಮಾಡಲಾಗುತ್ತದೆ. ಮಾಗಾರ್ಂವ್ ಮಾರುಕಟ್ಟೆಯಲ್ಲಿ ನಿಜವಾದ ಮೀನಿನ ಒಳಗಿನ ಬಾಕ್ಸ್‌ಗಳನ್ನು ತೆರೆದು ಒಳಗಿನ ಮೀನುಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದರು.



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top