'ನಿನ್ನನೇ ನಂಬಿದೆ ಮೂಡುವೇಣುಪುರದೊಡೆಯ' ಸಂಕೀರ್ತನೆಗಳ ಲೋಕಾರ್ಪಣೆ

Upayuktha
0
ಶ್ರೀ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸಂಕೀರ್ತನೆಗಳ ಸಂಕಲನವನ್ನು ಲೋಕಾರ್ಪಣೆ ಮಾಡಿ ಹರಸಿದರು.

ಮೂಡುಬಿದಿರೆ: ಕೊಂಕಣಿ, ಕನ್ನಡ ಭಾಷೆಗಳಲ್ಲಿ 'ಮೂಡುವೇಣುಪುರದೊಡೆಯ' ಅಂಕಿತದೊಂದಿಗೆ ಸುಮಾರು ಮುನ್ನೂರಕ್ಕೂ ಅಧಿಕ ಭಜನೆಗಳನ್ನು ರಚಿಸಿ ರಾಗ ಸಂಯೋಜನೆಯೊಂದಿಗೆ ಹಾಡಿದ್ದ ಹಾರ್ಮೋನಿಯಂ ವಾದಕ ಸಂಕೀರ್ತನಕಾರ ದಿ. ಎಂ. ಉಮೇಶ್ ಕಾಮತ್ ಮೂಡುಬಿದಿರೆ ಅವರ ರಚನೆಗಳಲ್ಲಿ ಆಯ್ದ 14 ಕೀರ್ತನೆಗಳ ಧ್ವನಿ ಸಂಕಲನ 'ನಿನ್ನನೇ ನಂಬಿದೆ ಮೂಡುವೇಣುಪುರದೊಡೆಯ'- ಇದರ ಲೋಕಾರ್ಪಣೆ ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.


ಶ್ರೀ ದೇವಳದಲ್ಲಿ ಚಾತುಮರ್ಾಸ ವೃತಾಚರಣೆಯಲ್ಲಿರುವ ಶ್ರೀ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸಂಕೀರ್ತನೆಗಳ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಹರಸಿದರು. ಸಂಕೀರ್ತನೆಗಳ ಗಾಯಕ ರವೀಂದ್ರ ಪ್ರಭು ಮೂಲ್ಕಿ ಅವರಿಗೆ ಶ್ರೀಗಳವರು ಗೌರವ ಪ್ರಸಾದ ನೀಡಿದರು.


ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಸಾಹುಕಾರ್ ಎಂ. ಕಿರಣ್ ಪೈ, ಕೆ. ಗಣೇಶ್ ಕಾಮತ್, ಸೇವಾದಾರರಾದ ಶ್ರೀಮತಿ ಶಾಂತಾ ಉಮೇಶ್ ಕಾಮತ್, ಪುತ್ರ ಎಂ. ಹರೀಶ ಕಾಮತ್, ಬಿ.ಯೋಗೀಶ್ ಶೆಣೈ, ಕೆ. ರಮಾನಂದ ಪೈ ಐ.ರವೀಂದ್ರ ಶೆಣೈ ದಾಮಸಕಟ್ಟೆ ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದರು. ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸ್ಥಾಪಕ ಸದಸ್ಯ, ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಬಳಿಕ ದೇವಳದ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದ ಉಮೇಶ್ ಕಾಮತ್ ಅವರ ಅಮೃತ ವರ್ಷಸಂಸ್ಮರಣೆಯ ಸಂದರ್ಭದಲ್ಲೇ ಭಜನಾ ಮಂಡಳಿಂಯೂ ವಜ್ರಮಹೋತ್ಸವದಲ್ಲಿದೆ. ಈ ಅವಿಸ್ಮರಣೀಯ ಸುಸಂದರ್ಭದಲ್ಲಿ ಗಾಯಕ ರವೀಂದ್ರ ಪ್ರಭು ಮೂಲ್ಕಿ ಅವರ ಕಂಠಸಿರಿಯಲ್ಲಿ ಉಮೇಶ್ ಕಾಮತರ ಭಜನೆಗಳು ಲೋಕಾರ್ಪಣೆಗೊಳ್ಳುತ್ತಿವೆ ಎಂದು ಅವರ ಪುತ್ರ, ಸಂಕಲನದ ನಿವರ್ಾಹಕ ನಿದರ್ೇಶಕ ಎಂ. ಗಣೇಶ್ ಕಾಮತ್ ನುಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top