|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಗಸ್ಟ್ 1ರಿಂದ ಅಗುಂಬೆ ಘಾಟಿ ಮತ್ತೆ ಬಸ್ ಸಂಚಾರಕ್ಕೆ ಮುಕ್ತ: ಲಾರಿ ಸಹಿತ ಘನ ವಾಹನಗಳಿಗೆ ನಿಷೇಧ

ಅಗಸ್ಟ್ 1ರಿಂದ ಅಗುಂಬೆ ಘಾಟಿ ಮತ್ತೆ ಬಸ್ ಸಂಚಾರಕ್ಕೆ ಮುಕ್ತ: ಲಾರಿ ಸಹಿತ ಘನ ವಾಹನಗಳಿಗೆ ನಿಷೇಧಕಾರ್ಕಳ: ಅಗಸ್ಟ್ 1 ರಿಂದ ಅಗುಂಬೆ ಘಾಟಿ ರಸ್ತೆಯು ಬಸ್ ಹಾಗೂ ಲಘು ವಾಹನಗಳಿಗೆ ಸಂಚಾರಕ್ಕೆ ಮುಕ್ತವಾಗಲಿದೆ.


ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಅಗುಂಬೆ  ಘಾಟಿಯ11ನೇ ತಿರುವಿನಲ್ಲಿ ಕುಸಿತ ಉಂಟಾಗಿತ್ತು. ಜೊತೆಗೆ ರಸ್ತೆಯ ತಡೆಗೋಡೆಯು ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಜುಲೈ 10 ರಂದು ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.


ಜುಲೈ 13ರಂದು ಲಘು ವಾಹನಗಳ ಪ್ರಯಾಣಕ್ಕೆ ಅನುವು ಮಾಡಲಾಗಿತ್ತು. ಅಗಸ್ಟ್ 1 ರಿಂದ ಸಾರ್ವಜನಿಕರ ಕೋರಿಕೆಯಂತೆ ಬಸ್ ಹಾಗೂ ಲಘು ವಾಹನಗಳಿಗೆ ಮುಕ್ತವಾಗಿ ಸಂಚರಿಸಬಹುದಾಗಿದೆ. ಅದರೆ ಲಾರಿ ಟಿಪ್ಪರ್ ಸೇರಿದಂತೆ ಘನ ವಾಹನಗಳಿಗೆ ಅಗಸ್ಟ್ 30 ರ ವರೆಗೆ ನಿಷೇಧ ಹೇರಲಾಗಿದೆ.ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post