ಮಂಗಳೂರು: ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 18 ನೆಯ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ನಡೆಯಿತು.
ಪಂಚ ಭಾಷಾ ಭಾಗವತ ಬಿರುದಾಂಕಿತ ಶ್ರೀ ಸತೀಶ್ ಶೆಟ್ಟಿ ಬೋಂದೆಲ್ ಇವರಿಗೆ ಸನ್ಮಾನ ಮಾಡುತ್ತ ಶ್ರೀಮತಿ ಭಾರತಿ ಕಾಮತ್, ಇವರು ಸತೀಶ್ ಶೆಟ್ಟಿಯವರಿಗೆ ಶುಭವನ್ನು ಕೋರಿದರು. ಯಕ್ಷಗಾನ ಕಲೆ ಇನ್ನಷ್ಟು ಬೆಳೆಯಲಿ. ಕಲಾವಿದರಿಗೂ, ಕಲಾ ಪ್ರೋತ್ಸಾಹಕರಿಗೂ ಮಹಾಮಾಯೆಯ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.
ಅತಿಥಿಯಾಗಿ ಕ್ರೀಡಾಭಾರತಿಯ ಎ. ಕೃಷ್ಣ ಶೆಟ್ಟಿ ತಾರೇಮಾರ್ ಮಾತನಾಡಿ" ಒಂದು ದಿನದ ಕಾರ್ಯಕ್ರಮ ಮಾಡುವುದೇ ಬಹಳ ಕಷ್ಟ, ಒಂದು ವರ್ಷ ನಿರಂತರ ಕಾರ್ಯಕ್ರಮ ಮಾಡುವ ವಿಚಾರ ಬಹಳ ಸಂತೋಷದಾಯಕ ಎಂದರು.ಈ ಸಂಘ ನೂರು ವರ್ಷಗಳನ್ನು ಪೂರೈಸಿದೆ ಎನ್ನುವುದೂ ಆನಂದದಾಯಕ.
100 ವರುಷ ತುಂಬಿದ ಸಂದರ್ಭ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಭಾಗ್ಯ, ಯಕ್ಷಗಾನ ಕಲೆ ನಮ್ಮ ಸಂಸ್ಕ್ರತಿಯನ್ನು ಬಿಂಬಿಸುವಂತಹದು.ಈ ಕಲೆ ಇನ್ನಷ್ಟು ಬೆಳಗಲಿ" ಎಂದು ಹಾರೈಸಿದರು.
ಚೆಂಡೆಮದ್ದಳೆ ವಾದಕರಾಗಿ ಮಂಗಳೂರಿನ ಹವ್ಯಾಸಿ ಬಳಗದ ಬಹುಬೇಡಿಲೆಯ ಕಲಾವಿದರಾಗಿದ್ದ ಕೀರ್ತಿಶೇಷ ಜಯಂತ್ ಕುಮಾರ್ ಕುಡುಪಾಡಿ ಇವರ ಸಂಸ್ಮರಣೆಯನ್ನು ರವಿ ಅಲೆವೂರಾಯರು ನಿರ್ವಹಿಸಿದರು.
ಕಾರ್ಯಕ್ರಮ ನಿರೂಪಕ, ಸಂಘದ ಪ್ರಧಾನ ಕಾರ್ಯದರ್ಶಿ, ಸಂಜಯ ಕುಮಾರ ರಾವ್, ಬೋಂದೆಲ್ ಸತೀಶ ಶೆಟ್ಟರ ಅಭಿನಂದನೆಯನ್ನು ಗೈದರು. ಶ್ರೀಮತಿ ಸುಮಂಗಲ ರತ್ನಾಕರ್, ಪೂರ್ಣಿಮಾ ಯತೀಶ್ ರೈ, ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಉಪಾಧ್ಯಕ್ಷೆ ಶ್ರೀಮತಿ ಪ್ರಫುಲ್ಲ ನಾಯಕ್, ಕೋಶಾಧಿಕಾರಿ ಶ್ರೀ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಶ್ರೀಮತಿ ಶೋಭಾ ಐತಾಳ್ ಸಂಮಾನ ಪತ್ರವನ್ನು ವಾಚಿಸಿದರು. ಬಳಿಕ ಸಂಘದ ಕಲಾವಿದರು ಹಾಗೂ ಅತಿಥಿ ಕಲಾವಿದರಿಂದ "ಸೇತು ಬಂಧನ" ಎಂಬ ತಾಳಮದ್ದಳೆ ಜರಗಿತು.
ಅತಿಥಿಗಳಾಗಿ ಬೋಂದೆಲ್ ಸತೀಶ್ ಶೆಟ್ಟಿ, ಮದ್ದಳೆ ವಾದನದಲ್ಲಿ ಜಯರಾಮ್, ಹರೀಶ್ ಆಚಾರ್ಯ, ಚೆಂಡೆ ಮದ್ದಳೆ ವಾದನದಲ್ಲಿ ಬಾಲ ಕಲಾವಿದ ಸಮರ್ಥ್ ಉಡುಪ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


 
 
 
 
 
 
 
 
 
 
 
 

 
