ಮಂಗಳೂರು: ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್‍ನ ಅಧಿಕೃತ ಡೀಲರ್ ಆಗಿರುವ ಈಶ್ ಮೋಟಾರ್ಸ್ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‌ಗಳ ಅಧಿಕೃತ ಮಾರಾಟ ಸಂಸ್ಥೆಯಾಗಿದ್ದು ಇದರ ನೂತನ ಶೋರೂಂ ಕೊಟ್ಟಾರ ಜಿಂಜರ್ ಹೋಟೆಲ್ ಹತ್ತಿರ ಸೋಮವಾರ, ಜುಲೈ 04, 2022ರಂದು ಸಂಜೆ 5:30 ಉದ್ಘಾಟನೆಗೊಳ್ಳಲಿದೆ.
ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ವೆಸ್ಪಾ ಮತ್ತು ಏಪ್ರಿಲಿಯಾ ಕಂಪನಿಯು ಗ್ರಾಹಕರಿಂದ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಮಂಗಳೂರುನಲ್ಲಿ ಈಶ್ ಮೋಟಾರ್ಸ್ ಹೊಸ ಶೋರೂಂ ಆರಂಭಿಸಲಿದೆ.
ಈಶ್ ಮೋಟಾರ್ಸ್‍ನ ನೂತನ ಶೋರೂಂ ಅನ್ನು ಕಂಪನಿಯ ಅಧಿಕಾರಿಗಳಾದ ಶ್ರೀ ವಿಜಯ್ ಭಟ್, ಹೆಡ್-2ಡಬ್ಲ್ಯೂ ಡೊಮೆಸ್ಟಿಕ್ ಬಿಸಿನೆಸ್ (ಐಸಿಇ)-ಮಾರಾಟ ಮತ್ತು ಸೇವೆ ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಬಿಜು ಸುಕುಮಾರನ್, ಝೋನಲ್ ಮ್ಯಾನೇಜರ್ ಸೇಲ್ಸ್ & ನೆಟ್‍ವರ್ಕ್ ವಿಸ್ತರಣೆ (L¹E) -ದಕ್ಷಿಣ, ಶ್ರೀ ಶಂಕರ್ ರಾಮನ್, ವಲಯ ವ್ಯವಸ್ಥಾಪಕ ಸೇವೆ-ದಕ್ಷಿಣ, 2W S&M ಭಾಗವಹಿಸಲಿದ್ದಾರೆ.
ಏಪ್ರಿಲಿಯಾ ಮತ್ತು ವೆಸ್ಪಾ ವಿನೂತನ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ, ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೂಟರ್‌ಗಳಲ್ಲಿ ಒಂದಾಗಿದೆ.
ರೈಡಿಂಗ್ ಮೇಡ್ ಫನ್ ವಿದ್ ಸ್ಪೋರ್ಟಿ ಜೇನೆಸ್ ಎಂಬ ಧ್ಯೇಯ ವಾಕ್ಯದೊಂದಿಗೆ Aprilia scooter SXR 160 ಮತ್ತು SR 160 ಮಾಡೆಲ್‌ನಲ್ಲಿ ಲಭ್ಯವಾಗಲಿದೆ. 160.03 ಸಿಸಿ ಸಾಮರ್ಥ್ಯದೊಂದಿಗೆ 35Km ಮೈಲೇಜ್ ನೀಡುತ್ತದೆ. ಕ್ರಮವಾಗಿ 7 ಮತ್ತು 6 ಲೀಟರ್ ಪೆಟ್ರೋಲ್ ತುಂಬುವ ಟ್ಯಾಂಕ್ ಅನ್ನು ಹೊಂದಿದ್ದು, ಸ್ಕೂಟರ್‌ನ ಭಾರ ಒಟ್ಟು 129 ಕೆ.ಜಿ ಮತ್ತು 122 ಕೆಜಿ ಆಗಿದೆ. ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್, ದೊಡ್ಡ ಗಾತ್ರದ ಚಕ್ರಗಳನ್ನು ಹೊಂದಿದ್ದು, ಕೊಕ್ಕಿನ ರೀತಿಯ ವಿನ್ಯಾಸ ಹೊಂದಿದ್ದು, ಸ್ಪೂರ್ತಿದಾಯಕ ಮಾಹಿತಿಯನ್ನು ಡಿಸ್‌ಪ್ಲೇಯನ್ನು ಹೊಂದಿದೆ.
ವೆಸ್ಪ ಸ್ಕೂಟರ್
125ಸಿಸಿ ಮತ್ತು 150ಸಿಸಿ ಯ ಇಂಜಿನ್ ಹೊಂದಿರುವ 2 ರೀತಿಯ ಸ್ಕೂಟರ್‌ಗಳು ಲಭ್ಯವಿದ್ದು, BS 6 ಟೆಕ್ನಾಲಜಿ ಹೊಂದಿದ್ದು, ಇಕೊನಿಕ್ ಮೋನೋಕೊಕ್ವೆ ಡಿಸೈನ್ ಮಾದರಿಯಲ್ಲಿ ಇರಲಿದ್ದು LED HEADLIGHT ಗಳನ್ನು ಅಳವಡಿಸಲಾಗಿದೆ. ಮುಂದಿನ ಚಕ್ರಗಳಿಗೆ, 150 ಸಿಸಿಗೆ ABS ಆಧಾರಿತ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, 125ಸಿಸಿಗೆ CBS ಮಾದರಿ ಬ್ರೇಕ್ ಅಳವಡಿಸಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ