ಮಂಗಳೂರಿನಲ್ಲಿ ಈಶ್ ಮೋಟಾರ್ಸ್ ಸಂಸ್ಥೆಯ ಗ್ರ್ಯಾಂಡ್‌ ಲಾಂಚ್‌

Upayuktha
1 minute read
0



ಮಂಗಳೂರು: ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್‍ನ ಅಧಿಕೃತ ಡೀಲರ್ ಆಗಿರುವ ಈಶ್ ಮೋಟಾರ್ಸ್ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‍ಗಳ ಅಧಿಕೃತ ಮಾರಾಟ ಸಂಸ್ಥೆಯಾಗಿದ್ದು ಇದರ ನೂತನ ಶೋರೂಂ ಕೊಟ್ಟಾರ ಜಿಂಜರ್ ಹೋಟೆಲ್ ಹತ್ತಿರ ಸೋಮವಾರ, ಜುಲೈ 04, 2022ರಂದು ಉದ್ಘಾಟನೆಗೊಂಡಿತು. ಕಂಪನಿಯ ಹೆಡ್-2ಡಬ್ಲ್ಯೂ ಡೊಮೆಸ್ಟಿಕ್ ಬಿಸಿನೆಸ್ (L¹E) ಶ್ರೀ ವಿಜಯ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಝೋನಲ್ ಮ್ಯಾನೇಜರ್ ಶ್ರೀ ಬಿಜು ಸುಕುಮಾರನ್, ಡೀಲರ್ ಡೆವೆಲಪ್‍ಮೆಂಟ್ ಸೀನಿಯರ್ ಮ್ಯಾನೇಜರ್ ಶ್ರೀ ಸದಾನಂದ ಆಚಾರ್ಯ, ರಿಜನಲ್ ಸೇಲ್ಸ್ ಮ್ಯಾನೇಜರ್ ಶ್ರೀ ಭಾನುಪ್ರಕಾಶ್ ರಾಜು, ಬೆಂಗಳೂರು ವಿಭಾಗ ಸೇಲ್ಸ್ ಡೆಪ್ಯೂಟಿ ಮ್ಯಾನೇಜರ್ ಸಾಯಿಪ್ರಕಾಶ್ ಎಸ್.ಕೆ., ಮಾರ್ಕೆಟಿಂಗ್ ಎಂಡ್ ಕಾರ್ಪೋರೇಟ್ ಕಮ್ಯೂನಿಕೇಶನ್ ಜನರಲ್ ಮ್ಯಾನೇಜರ್ ಅಪೂರ್ವ ಸೈಗಲ್, ಮಂಗಳೂರು ಲೆಕ್ಕಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಶ್ರೀ ಎಸ್.ಎಸ್. ನಾಯಕ್, ಚಿತ್ರನಟ ಅರ್ಜುನ್ ಕಾಪಿಕಾಡ್, ನಾಯಕಿ ನಟಿ ಗಹನಾ ಭಟ್, ಪ್ರಗತಿ ಪರ ಕೃಷಿಕ ಡಾ. ರಾಮ ಭಟ್ ಬಂಗಾರಡ್ಕ, ಡಾ. ಸುಭಾಷ್ ಮತ್ತು ಮಳಿಗೆಯ ಪಾಲುದಾರರಾದ ಕೃಷ್ಣ ಕಿಶೋರ್ ಎನ್.ಟಿ. ಮತ್ತು ಅಖಿಲೇಶ್ ಉಪಸ್ಥಿತರಿದ್ದರು.  


ಏಪ್ರಿಲಿಯಾ ಮತ್ತು ವೆಸ್ಪಾ ವಿನೂತನ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ, ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಕೂಟರ್‍ಗಳಲ್ಲಿ ಒಂದಾಗಿದೆ. ರೈಡಿಂಗ್ ಮೇಡ್ ಫನ್ ವಿದ್ ಸ್ಪೋರ್ಟಿ ಜೇನೆಸ್ ಎಂಬ ಧ್ಯೇಯ ವಾಕ್ಯದೊಂದಿಗೆ Aprilia  scooter  SXR 160 ಮತ್ತು SR 160 ಮಾಡೆಲ್‌ನಲ್ಲಿ ಲಭ್ಯವಾಗಲಿದೆ. 160.03ಸಿಸಿ ಸಾಮರ್ಥ್ಯದೊಂದಿಗೆ 35 ಕಿಮೀ ಮೈಲೇಜ್ ನೀಡುತ್ತದೆ. ಕ್ರಮವಾಗಿ 7 ಮತ್ತು 6 ಲೀಟರ್  ಪೆಟ್ರೋಲ್ ತುಂಬುವ ಟ್ಯಾಂಕ್‍ಅನ್ನು ಹೊಂದಿದ್ದು, ಸ್ಕೂಟರ್‍ನ ಭಾರ ಒಟ್ಟು 129ಕೆ. ಜಿ ಮತ್ತು 122 ಕೆಜಿಯಾಗಿದೆ. ಸ್ಕೂಟರ್ ಟೆಲಿಸ್ಕೋಪಿಕ್ ಫೆÇೀರ್ಕ್, ದೊಡ್ಡಗಾತ್ರದ ಚಕ್ರಗಳನ್ನು ಹೊಂದಿದ್ದು, ಕೊಕ್ಕಿನ ರೀತಿಯ ವಿನ್ಯಾಸ ಹೊಂದಿದ್ದು, ಸ್ಪೂರ್ತಿದಾಯಕ ಮಾಹಿತಿಯನ್ನು ಡಿಸ್ಪ್ಲೇಯನ್ನು ಹೊಂದಿದೆ.


ವೆಸ್ಪ ಸ್ಕೂಟರ್

125ಸಿಸಿ ಮತ್ತು 150ಸಿಸಿ ಯ ಇಂಜಿನ್ ಹೊಂದಿರುವ 2ರೀತಿಯ ಸ್ಕೂಟರ್‍ಗಳು ಲಭ್ಯವಿದ್ದು, ಬಿಎಸ್‌ 6 ಟೆಕ್ನಾಲಜಿ ಹೊಂದಿದ್ದು, ಇಕೊನಿಕ್ ಮೋನೋಕೊಕ್ವೆ ಡಿಸೈನ್ ಮಾದರಿಯಲ್ಲಿ ಇರಲಿದ್ದು LED HEADLIGHTS ಗಳನ್ನು ಅಳವಡಿಸಲಾಗಿದೆ. ಮುಂದಿನ ಚಕ್ರಗಳಿಗೆ, 150ಸಿಸಿಗೆ ABS ಆಧಾರಿತ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, 125ಸಿಸಿಗೆ CBS ಮಾದರಿ ಬ್ರೇಕ್ ಅಳವಡಿಸಲಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top