ಮಲ್ಲ ಕ್ಷೇತ್ರದಲ್ಲಿ ಭಜನಾ ಅಭಿಯಾನ- ಅಭಿಮಾನ ತಿಂಗಳ 7ನೇ ಸಂಕೀರ್ತನಾ ಯಾನ

Upayuktha
0

ಭಗವಂತನನ್ನು ಭಜಿಸುವುದರಿಂದ ಸಂಕಷ್ಟ ದೂರ: ಕೊಂಡೆವೂರು ಶ್ರೀ



ಕಾಸರಗೋಡು: ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಭಜನಾ ಅಭಿಮಾನ-ಅಭಿಯಾನ ಎಂಬ ಕ್ಷೇತ್ರ ಸಂಕೀರ್ತನಾ ಯಾನದ 7ನೇ ಸರಣಿ ಕಾರ್ಯಕ್ರಮ ಮಲ್ಲ ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಜರಗಿತು.


ಕಾರ್ಯಕ್ರಮದಂಗವಾಗಿ ಆಯೋಜಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತನನ್ನು ಭಜಿಸುವ ಕಾರ್ಯದಿಂದ ಪ್ರತಿಯೊಬ್ಬರಿಗೂ ಸಂಕಷ್ಟ ದೂರೀಕರಿಸಲು ಸಾಧ್ಯ. ದಾಸ ಶ್ರೇಷ್ಠ ವರೇಣ್ಯರ ಸಹಿತ ಹಲವಾರು ಭಜಕರು ಮನ ಸಂತೃಪ್ತಿಗಾಗಿ ಭಜಿಸುವ ಮೂಲಕ ಇಂದು ಇತಿಹಾಸ ಪ್ರಸಿದ್ಧಿಗೂ ಕಾರಣೀಭೂತರಾಗಿದ್ದಾರೆ. ಅಂತಹ ಸತ್ಸಂಗ, ಧಾರ್ಮಿಕ ಶ್ರದ್ಧೆಗಳು ಮನುಷ್ಯನ ಮನೋಕ್ಷೇಶ ದೂರವಿರಿಸಲು ದಾರಿಯಾಗಬಲ್ಲುದು ಎಂದರು.


ಧಾರ್ಮಿಕ ಮುಂದಾಳು, ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಪ್ರತಿ ವಾರ, ತಿಂಗಳು ಭಜನೆಯನ್ನು ಅಭಿಯಾನವನ್ನಾಗಿ ಸ್ವೀಕರಿಸಿದ ಆಸ್ತಿಕ ವರ್ಗದಿಂದ ಇದೀಗ ಈ ಕಾರ್ಯಕ್ರಮಕ್ಕೆ ಮಹತ್ವ ಲಭಿಸಿದಂತಾಗಿದೆ. ಭಜನೆಯನ್ನು ಜನ ಮಾನಸದಲ್ಲಿ ಚಿರಸ್ಥಾಯಿಗೊಳಿಸುವುದು ನಮ್ಮೆಲ್ಲರ ಉದ್ದೇಶವಾಗಿರಲಿ ಎಂದರು.

ಭಜನಾ ಅಭಿಯಾನದ ಗೌರವಾಧ್ಯಕ್ಷರಾದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ರಾಮಕೃಷ್ಣ ಕಾಟುಕುಕ್ಕೆ ಮಾತನಾಡಿದರು. ಮಲ್ಲ ಕ್ಷೇತ್ರದ ಆಡಳಿತ ಮೋಕ್ತೆಸರ ಆನೆಮಜಲು ವಿಷ್ಣು ಭಟ್, ಧ.ಗ್ರಾ. ಯೋಜನಾಧಿಕಾರಿ ಮುಖೇಶ್, ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಸತ್ಯನಾರಾಯಣ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.


ರೋಹಿತ್ ಮಧೂರು ಸ್ವಾಗತಿಸಿ ಯಶೋದ ವಾಸುದೇವ ಉಳಿಯತ್ತಡ್ಕ ವಂದಿಸಿದರು. ಕಾರ್ಯಕ್ರಮದಂಗವಾಗಿ  ವಿವಿಧ ಭಜನಾ ಸಂಘಗಳಿಂದ ಭಜನೆ, ಕುಣಿತ ಭಜನೆ ಹಾಗೂ ಸಾಮೂಹಿಕ ಭಜನೆ ಜರಗಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top