|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾದ ಮಾಂತ್ರಿಕ- ಬಡಗುತಿಟ್ಟಿನ ಮದ್ದಳೆಯ ಸುನೀಲ ಭಂಡಾರಿ ಕಡತೋಕ

ನಾದ ಮಾಂತ್ರಿಕ- ಬಡಗುತಿಟ್ಟಿನ ಮದ್ದಳೆಯ ಸುನೀಲ ಭಂಡಾರಿ ಕಡತೋಕ


ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲೆ ಯಕ್ಷಗಾನ. ಇಂತಹ ಪ್ರಸಿದ್ಧ ಕಲೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಬಡಗುತಿಟ್ಟಿನ ಮದ್ದಳೆಯ ಮಾಂತ್ರಿಕ ಸುನೀಲ ಭಂಡಾರಿ ಕಡತೋಕ.


22.07.1975 ರಂದು ಶಿವರಾಮ ಭಂಡಾರಿ ಹಾಗೂ ಸುಬ್ಬಿ ಇವರ ಮಗನಾಗಿ ಜನನ. 9ನೇ ತರಗತಿವರೆಗೆ ವಿದ್ಯಾಭ್ಯಾಸ. ಮಂದಾರ್ತಿ ಮೇಳದಲ್ಲಿ 35 ವರ್ಷಗಳಿಂದ ಯಕ್ಷಗಾನ ತಿರುಗಾಟ ಮಾಡುತ್ತಿರುವ ಇವರ ಅಣ್ಣ ರಮೇಶ್ ಭಂಡಾರಿ ಅವರು ಯಕ್ಷಗಾನ ಚೆಂಡೆ ಮದ್ದಳೆ ಕಲಿಯಲು ಪ್ರೇರಣೆ ಎಂದು ಹೇಳುತ್ತಾರೆ ಸುನೀಲ ಭಂಡಾರಿ.


ಹೇರಂಜಾಲು ಗೋಪಾಲ್ ಗಾಣಿಗ ಇವರ ಯಕ್ಷಗಾನ ಗುರುಗಳು.

ದುರ್ಗಪ್ಪ ಗುಡಿಗಾರ್, ಶಂಕರ್ ಭಾಗವತ್ ಹಾಗೂ ಪ್ರಭಾಕರ್ ಭಂಡಾರಿ ಇವರ ನೆಚ್ಚಿನ ಚೆಂಡೆ ಮದ್ದಳೆವಾದಕರು. ಯಕ್ಷಗಾನ ರಂಗದಲ್ಲಿ ಇರುವ ಎಲ್ಲಾ ಭಾಗವತರು ಹಾಗೂ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಪ್ರಾರಂಭಿಕ ದಿನಗಳಲ್ಲಿ ಯಕ್ಷಗಾನ ವೇಷ ಮಾಡುತ್ತಿದ್ದೆ ಎಂದು ಇವರು ಹೇಳುತ್ತಾರೆ.


ಯಕ್ಷಗಾನ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-      ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.‌ ಬದಲಾವಣೆ ಜಗದ ನಿಯಮ‌, ಆದರೆ ಬದಲಾವಣೆಯ ಬಿರುಸಿನಲ್ಲಿ‌ ಚೌಕಟ್ಟು ಮೀರದಿರಲಿ ಎನ್ನುವ ಕಾಳಜಿ ಮತ್ತು ಕರಾವಳಿ ಭಾಗಕ್ಕೆ ಸೀಮಿತವಾಗಿರುವ ಕಲೆ‌ ದೇಶವ್ಯಾಪಿ ಬೆಳೆಯಲಿ ಎನ್ನುವ ಆಶಯ ಎಂದು ಸುನೀಲ  ಅವರು ಹೇಳುತ್ತಾರೆ.


ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ‌ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ತ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆದು.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಕಲಾವಿದನಾಗಿ ಕಲಾಕ್ಷೇತ್ರದಲ್ಲಿ ಉಳಿಯಬೇಕು, ಬೆಳೆಯಬೇಕು ಎಂಬುದು ನನ್ನ ಕನಸು ಹಾಗೂ ಹಂಬಲ ಹಾಗೂ ಕೆಲವು ಕಡೆ ಪ್ರಾರಂಭಿಸಿರುವ ಚೆಂಡೆ ಮದ್ದಲೆ ತರಗತಿಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂಬ ಯೋಜನೆ ಇದೆ.


ಚೆಂಡೆ ನುಡಿಸುವುದು, ಯಕ್ಷಗಾನ ಪದ್ಯ ಹಾಡುವುದು ಇವರ ಹವ್ಯಾಸಗಳು.

ದುಬೈ, ಬೆಹ್ರೈನ್, ಮುಂಬೈ ಮುಂತಾದ ಕಡೆಗಳಲ್ಲಿ ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ.

ಮಂದಾರ್ತಿ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿರುವ ಇವರು ಯಕ್ಷಗಾನ ರಂಗದಲ್ಲಿ ಪ್ರಸ್ತುತ ೩೧ ವರ್ಷದ ತಿರುಗಾಟವನ್ನು ಮಾಡುತ್ತಿದ್ದಾರೆ.


ಸುನೀಲ ಭಂಡಾರಿ ಅವರು ಲೀಲಾವತಿ ಇವರನ್ನು ವಿವಾಹವಾಗಿ ಮಕ್ಕಳಾದ ಸನ್ನಿಧಿ ಹಾಗೂ ಸಾತ್ವಿಕ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

8971275651


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم