ಅಧ್ಯಯನದ ಜೊತೆಗೆ ವೈಯುಕ್ತಿಕ ಆರೋಗ್ಯದ ಕಡೆಯೂ ಗಮನಹರಿಸಿ: ಪ್ರೊ. ಉದಯ ಭಟ್

Upayuktha
0

ಮೂಡುಬಿದರೆ: ನಮ್ಮ ದಿನನಿತ್ಯದ ಜೀವನದಲ್ಲಿ ಮೊದಲಿನಿಂದಲೂ ನ್ಯಾನೋ ತಂತ್ರಜ್ಞಾನವನ್ನು ಬಳಸುತ್ತಿದ್ದರೂ, ಕಳೆದ ಐದು ದಶಕದಲ್ಲಿ ನಮ್ಮ ಜ್ಞಾನ ಈ ಕ್ಷೇತ್ರದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಎನ್.ಐ.ಟಿ.ಕೆ ಸುರತ್ಕಲ್‍ನ ಮೆಟಲರ್ಜಿಕಲ್ ಹಾಗೂ ಮೆಟೀರಿಯಲ್ಸ್ ಇಂಜಿನಿಯರಿಂಗ್‍ನ ಪ್ರಾಧ್ಯಾಪಕ  ಡಾ. ಉದಯ ಭಟ್ ಕೆ. ಹೇಳಿದರು.


ಅವರು ಬುಧವಾರ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಸೆಂಟರ್ ಫಾರ್ ರಿಸರ್ಚ ಇನ್ ನ್ಯಾನೋಟೆಕ್ನಾಲಜಿ  ವತಿಯಿಂದ ಆಯೋಜಿಸಲಾಗಿದ್ದ ನ್ಯಾನೋ ತಂತ್ರಜ್ಞಾನದ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.


ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನಗೆ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ಹೆಚ್ಚು ಅನ್ವೇóಷಿಸುವಂತಾಗಬೇಕು ಎಂದರು. ನಮ್ಮ ಕ್ಷಮತೆ ಜಾಸ್ತಿಯಾದಾಗ ಮಾತ್ರ ಔದ್ಯೋಗಿಕ ನೆಲೆಯಲ್ಲಿ ಅವಕಾಶಗಳು ವಿಫುಲವಾಗುತ್ತಾ ಸಾಗುತ್ತವೆ. ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ವೈಯಕ್ತಿಕ ಆರೋಗ್ಯದ ಕಡೆಗೂ ಗಮನಹರಿಸಬೇಕು. ಎನ್.ಐ.ಟಿ.ಕೆ ಸುರತ್ಕಲ್‍ನಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಇಂಟರ್ನ್‍ಶಿಪ್‍ನಲ್ಲಿ ತೊಡಗಲು ಅವಕಾಶಗಳಿದ್ದು, ಇದನ್ನು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭೌತಶಾಸ್ತ್ರ ವಿಭಾಗ ಎನ್.ಐ.ಟಿ.ಕೆ ಸುರತ್ಕಲ್ ಸಹಾಯಕ ಪ್ರಾಧ್ಯಾಪಕ ಡಾ. ಕಾರ್ತಿಕ್ ತರಫ್ದಾರ್ ಮಾತನಾಡಿ, ನಾವು ಮುಕ್ತಮನಸ್ಸಿನಿಂದ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸಿದಾಗ, ಇರುವ ಸಮಸ್ಯೆಯ ಬಗ್ಗೆ ನಮಗೆ ಅರಿವಾಗುತ್ತದೆ. ಆಗ ಆ ಸಮಸ್ಯೆಗೆ ಪರಿಹಾರ ಕಂಡಹಿಡಿಯಬೇಕು ಎಂದರು.


ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಯಾವುದಾದರೂ ಕೆಲಸ ಕೈಗೆತ್ತಿಕೊಂಡಾಗ, ಅದರ ಬಗ್ಗೆ ಆಲೋಚಿಸಿ ಕೂರುವ ಬದಲು, ತ್ವರಿತವಾಗಿ ಕೆಲಸ ಮಾಡಲು ಪ್ರಾರಂಭಿಸಬೇಕು. ಆಗ ಯಶಸ್ಸು ಗಳಿಸುವುದು ಸುಲಭ ಎಂದರು.


ಎನ್.ಐ.ಟಿ.ಕೆ ಸುರತ್ಕಲ್ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅರುಣ್ ಇಸ್ಲೂರ್ ನ್ಯಾನೋ ತಂತ್ರಜ್ಞಾನದ ಕುರಿತು ವಿಚಾರ ಸಂಕಿರಣ ನಡೆಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ನ್ಯಾನೋ ತಂತ್ರಜ್ಞಾನದ ಸಂಶೋಧನಾ ಕೇಂದ್ರ ಸಂಯೋಜಕ ಡಾ. ಯುವರಾಜ್ ಹಾಗೂ ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಧ್ಯಾಪಕಿ ಡಾ. ಜೇನಿಟಾ ಉಪಸ್ಥಿತರಿದ್ದರು.


ಸ್ನಾತಕೋತ್ತರ ಆಗ್ರ್ಯಾನಿಕ್ ಕೆಮಿಸ್ಟ್ರಿ ವಿಭಾಗದ ಸಂಯೋಜಕ ಡಾ. ಪ್ರವೀಣ್ ಎಸ್. ಮುಗುಳಿ ಸ್ವಾಗತಿಸಿದರು. ವಿದ್ಯಾರ್ಥಿ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top