ಮೂಡುಬಿದಿರೆ: ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯಲ್ಲಿ ಕರ್ಕಿಟಕ (ಆಟಿಮಾಸ) ಚಿಕಿತ್ಸಾ ಶಿಬಿರಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೊಹನ್ ಆಳ್ವ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಹನಾ ಶೆಟ್ಟಿ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್, ಮಂಗಳ ಶೆಣೈ ಅವರು ಉಪಸ್ಥಿತರಿದ್ದರು. ಆಳ್ವಾಸ್ ನಿರಾಮಯ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಸುರೇಖ ಪೈ ವಂದಿಸಿದರು.
ಕರ್ಕಿಟಕ (ಆಟಿಮಾಸ) ಚಿಕಿತ್ಸಾ ಶಿಬಿರ:
ಕಾಲೋಚಿತ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ವಿಶೇಷ ಪಾರಂಪರಿಕ ಆಯುರ್ವೇದ ಚಿಕಿತ್ಸೆಯನ್ನು ಕರ್ಕಿಟಕ ಚಿಕಿತ್ಸೆ ಎನ್ನುತ್ತಾರೆ. ಹವಾಮಾನದ ವೈಪರೀತ್ಯದಿಂದಾಗಿ ಮಳೆಗಾಲದಲ್ಲಿ ತೇವ ಭರಿತ ಹವಾಮಾನ ಹಾಗೂ ಚಳಿಯಿಂದ ಆಗುವ ದುಷ್ಪರಿಣಾಮಗಳಿಂದ ದೇಹವನ್ನು ರಕ್ಷಿಸುವುದು ಅಗತ್ಯ.
ಮಳೆಗಾಲದ ಈ ಸಂದರ್ಭದಲ್ಲಿ ಆಳ್ವಾಸ್ ನಿರಾಮಯ ಮಲ್ಟಿ ಸ್ಪೆμÁಲಿಟಿ ಆಯುಶ್ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಕರ್ಕಿಟಕ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
3, 7, 14 ದಿನಗಳ ಕರ್ಕಿಟಕ (ಆಟಿಮಾಸ) ಚಿಕಿತ್ಸಾ ಸೌಲಭ್ಯಗಳನ್ನು ಈ ಶಿಬಿರದಲ್ಲಿ ಒಳರೋಗಿ ಹಾಗೂ ಹೊರರೋಗಿ ವಿಭಾಗಗಳಲ್ಲಿ ಒದಗಿಸಲಾಗುತ್ತದೆ. ಜುಲೈ 20ರಿಂದ ಆಗಸ್ಟ್ 16 ರವರೆಗೆ ಈ ಶಿಬಿರ ನಡೆಯಲಿದ್ದು, ವೈದ್ಯರ ಸಂದರ್ಶನ ಸಂಪೂರ್ಣ ಉಚಿತವಾಗಿರುತ್ತದೆ. ಹಾಗೂ ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಸಹ ದೊರೆಯುತ್ತದೆ.
ಪ್ರತಿನಿತ್ಯ ಬೆಳಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9611686150, 9742473545 ಸಂಪರ್ಕಿಸಬಹುದು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ