ತೆಲಂಗಾಣ: ತೆಲಂಗಾಣದ ಯುವತಿ 7 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 75 ಸಲ ರಾಷ್ಟ್ರಗೀತೆ ಹಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ತೆಲಂಗಾಣದ ಕರೀಂನಗರ ಪಟ್ಟಣದ ಕೀರ್ತಿ ಕುಮಾರ್ ಮತ್ತು ದೇವಪಾಲ ದಂಪತಿಯ ಪುತ್ರಿ ಅರ್ಚನಾ ಈ ಸಾಧನೆ ಮಾಡಿದ್ದಾರೆ.
ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆ ನಿಮಿತ್ತ 'ಆಜಾದಿ ಕಾ ಅಮೃತ ಮಹೋತ್ಸವ' ಆಚರಿಸಲಾಗ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯ ಹಿರಿಮೆ ಜಗತ್ತಿಗೆ ಸಾರುವ ಪ್ರಯತ್ನ ಮಾಡಿರುವ ಅರ್ಚನಾ ಏಳು ಗಂಟೆಗಳಲ್ಲಿ ಬರೋಬ್ಬರಿ 75 ಸಲ ರಾಷ್ಟ್ರಗೀತೆ ಹಾಡುವ ಮೂಲಕ ವಿಶ್ವದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ದಾಖಲು ಮಾಡಿದ್ದಾರೆ.
ಇದೀಗ ಈ ರೆಕಾರ್ಡ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರ್ಪಡೆಯಾಗಿದ್ದು ಇದರ ಬೆನ್ನಲ್ಲೇ ಕರೀಂನಗರ ಪೊಲೀಸ್ ಕಮಿಷನರ್ ವಿ. ಸತ್ಯನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ಯಾಮಲಾಲ್ ಪ್ರಸಾದ್ ಮತ್ತು ಮಾಜಿ ಮೇಯರ್ ಸರ್ದಾರ್ ರವೀಂದರ್ ಸಿಂಗ್ ಸನ್ಮಾನಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ