
ಮಂಗಳೂರು: ಸರಕಾರದ ಬಹುಉದ್ದೇಶಿತ ಯೋಜನೆಗಳಲ್ಲೊಂದಾದ ಕಲಾವಿದರ ದತ್ತಾoಶ ಸಂಗ್ರಹಕ್ಕೆ ಈವರೆಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಯಕ್ಷಗಾನ ಕಲಾವಿದರ ಅರ್ಜಿಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಮುಂದಿನ ದಿನಗಳಲ್ಲಿ ಸರಕಾರದಿಂದ ಕಲಾವಿದರಿಗೆ ಸಿಗಬಹುದಾದ ಸವಲತ್ತುಗಳು/ಪ್ರಯೋಜನೆಗಳಿಗೆ ತೊಂದರೆ ಯಾಗಬಹುದು.
ಆದ್ದರಿಂದ ದಯವಿಟ್ಟು ತಕ್ಷಣವೇ sevasindhu.karnataka.gov.in ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗಿ ವಿನಂತಿ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅರ್ಜಿ ಸಲ್ಲಿಸುವಾಗ ಗಮಿಸಬೇಕಾದ ಅಂಶಗಳು:
1. ಸೇವಾಸಿಂಧು ಮೂಲಕವೇ ನಿಗದಿತ ಅರ್ಜಿಯನ್ನು ಆನ್ ಲೈನ್ ನಲ್ಲಿಯೇ ಭರ್ತಿ ಮಾಡಬೇಕು.
2. ಕನಿಷ್ಠ ವಯೋಮಿತಿ 8 ವರ್ಷಗಳು.
3. ಕನಿಷ್ಠ 5 ವರ್ಷಗಳ ಕಲಾಸೇವೆ ಕಡ್ಡಾಯ.
4. ಮೊಬೈಲ್ /ಟ್ಯಾಬ್ /ಲ್ಯಾಪ್ಟಾಪ್ ಅಥವಾ ನಾಗರಿಕ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಬೇಕು.
5. ಮಾಸಾಶನ ಪಡೆಯುತ್ತಿರುವವರೂ ಸೇರಿದಂತೆ ಹಿರಿಯ ಕಲಾವಿದರೂ ನೋಂದಾಯಿಸಬಹುದು.
6. ದಾಖಲೆಗಳು ಕಡಿಮೆ mb(ಮೆಗಾ ಬೈಟ್ )ಇರುವಂತೆ ನೋಡಿಕೊಳ್ಳಿ. ಒಟ್ಟಾರೆ 200 kb ಗಳಿಗೆ ಮೀರದಂತಿದ್ದರೆ ಅಪ್ಲೋಡ್ ಮಾಡಲು ಅನುಕೂಲವಾಗುತ್ತದೆ.
7. ಪ್ರಮಾಣ ಪತ್ರಗಳು /ದಾಖಲೆಗಳು /ಫೋಟೋ ಗಳನ್ನು ಅಪ್ಲೋಡ್ ಮಾಡುವಾಗಲೂ ಇದೇ ಕ್ರಮ ಅನುಸರಿಸಿ.
8. ತಾವು ಪ್ರದರ್ಶಿಸಿದ ಕಾರ್ಯಕ್ರಮದ ವಿಡಿಯೋ ಲಿಂಕ್ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. (ಫೇಸ್ಬುಕ್ /ಯೂಟ್ಯೂಬ್ /ಗೂಗಲ್ ಡ್ರೈವ್ /ಇನ್ಸ್ಟಾಗ್ರಾಮ್ ಲಿಂಕ್ ಇತ್ಯಾದಿ )
9. ನಿಮ್ಮ ಆಧಾರ್ ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯನ್ನೇ ನೀಡಿ.
10. ಅರ್ಜಿ ಭರ್ತಿ ಮಾಡುವಾಗ ಆಧಾರ್ ಪರಿಶೀಲನೆಗೆ ಅಧಿಕೃತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ