ನಿಟ್ಟೆಯಲ್ಲಿ ಇಂಟರ್ನೆಟ್‌ ಆಫ್ ಥಿಂಗ್ಸ್‌- 'ಐ ಓ ಕ್ಯೂಬ್' ಬಿಡುಗಡೆ

Upayuktha
0

ನಿಟ್ಟೆ: ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್‌ನಲ್ಲಿ ಸ್ಥಾಪಿತವಾಗಿರುವ ಬೆಂಗಳೂರಿನ ಡಿಲೈತ್ ಕನ್ಸಲ್ಟೆನ್ಸಿ  ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ "ಇಂಟರ್ನೆಟ್ ಆಫ್ ಥಿಂಗ್ಸ್' ಮೇಲಿನ ಒಂದು ಡಿಜಿಟಲ್ ಪ್ರಾಡಕ್ಟ್ ಆದಂತಹ 'ಐ ಓ ಕ್ಯೂಬ್'ನ್ನು ಜೂ.9 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು. ಪ್ರಾಡಕ್ಟ್ ನ ಬಿಡುಗಡೆಯನ್ನು ನಿಟ್ಟೆ ಅಟಲ್ ಇನ್ಕ್ಯುಬೇಷನ್ ಸೆಂಟರ್‌ನ ಸಿಇಓ ಡಾ. ಅನಂತ ಪದ್ಮನಾಭ್ ಆಚಾರ ಅವರು ನಿಟ್ಟೆ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಶೆಟ್ಟಿ, ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಪೈ ಅವರ ಸಮ್ಮುಖದಲ್ಲಿ ನೆರವೇರಿಸಿದರು.


ಡಾ.ಆಚಾರ್ ಅವರು 'ಮುಂಬರುವ ಪೀಳಿಗೆ ಟೆಕ್ನಾಲಜಿ ಮುಖಾಂತರ ನೂತನ ಆವಿಷ್ಕಾರಗಳನ್ನು ಮಾಡುವ ಮೂಲಕ ಬಗೆ ಬಗೆಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡ್ಬೇಕೆಂದು ನೆರೆದ ವಿದ್ಯಾರ್ಥಿಗಳಿಗೆ ಸೂಚಿಸಿದರು. ಈ ನಿಟ್ಟಿನಲ್ಲಿ ಅಟಲ್ ಇನ್ಕ್ಯುಬೇಷನ್ ಸೆಂಟರ್ನಲ್ಲಿರುವ ಎಲ್ಲ ಸವಲತ್ತುಗಳನ್ನು ವಿದ್ಯಾರ್ಥಿಗಳು, ಸ್ಟಾರ್ಟ್ ಅಪ್ ಕಂಪನಿಗಳು ಪಡೆದುಕೊಳ್ಳಬೇಕು' ಎಂದರು.


ಡಾ. ಜ್ಯೋತಿ ಶೆಟ್ಟಿ, ಡಾ. ಕಾರ್ತಿಕ್ ಪೈ ಮಾತನಾಡಿ, ವಿದ್ಯಾರ್ಥಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಕಲಿಯಲು ಇದೊಂದು ಒಳ್ಳೆಯ ವೇದಿಕೆಯಾಗಿದ್ದು, ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೋರಿದರು.


ಡಿಲೈತ್ ಕಂಪೆನಿಯ ವ್ಯವಸ್ಥಾಪಕರಾದ ಅರುಣ ರಾಜಪುರೋಹಿತ ಅವರು ಕಂಪೆನಿ ಮತ್ತು ಐ ಓ ಕ್ಯೂಬ್ ಪ್ರಾಡಕ್ಟ್ ನ ಮಾರ್ಗಸೂಚಿಯನ್ನು ತಿಳಿಸಿದರು. ವಿಜಯ್ ಅವರು ಪ್ರಾಡಕ್ಟ್ ನ ತಾಂತ್ರಿಕ ಮಾಹಿತಿಗಳನ್ನು ನೀಡಿದರು. ಕಂಪೆನಿಯ ವ್ಯವಸ್ಥಾಪಕರಾದ ಶ್ರೀಧರ ಮೂರ್ತಿ ಅವರು ವಂದಿಸಿದರು.  


ಡಿಲೈತ್ ಕಂಪನಿಯು ದೇಶದ ವಿವಿಧೆಡೆ ಇಂಟರ್ನೆಟ್ ಅಫ್ ಥಿಂಗ್ಸ್, ಸೈಬರ ಸೆಕ್ಯುರಿಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನಿತರ ಕೌಶಲ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ನಿಟ್ಟೆ ತಾಂತ್ರಿಕ ವಿದ್ಯಾಲಯ, ಮಣಿಪಾಲ ಪೋಸ್ಟ್ ಗ್ರಾಜುಯೇಷನ್ ವಿದ್ಯಾಲಯ, ಮಂಗಳೂರು ಯೂನಿವರ್ಸಿಟಿ, ಎಸ್.ಡಿ.ಎಂ ತಾಂತ್ರಿಕ ವಿದ್ಯಾಲಯ, ಮೈಟ್‌ ಇಂಜಿನಿಯರಿಂಗ್ ಕಾಲೇಜು ಮತ್ತಿತರ ಶೈಕ್ಷಣಿಕ ಮತ್ತು ಐಟಿ ಕಂಪನಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top