ಮಂಗಳೂರು: ಕೆನರಾ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ 'ಕೇನ್ ಫೆಸ್ಟ್ 2022' ಇದರ ಸಮಾರೋಪ ಸಮಾರಂಭವು ಇಲ್ಲಿನ ವೇದಿಕೆಯಲ್ಲಿ ನಡೆಯಿತು. ಯುವ ಉದ್ಯಮಿ ಹಾಗೂ ಹಳೆ ವಿದ್ಯಾರ್ಥಿ ಕೆ. ಸಂತೋಷ್ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಆಗಮಿಸಿದ್ದು, "ಇಂದು ನಾನು ಏನಾಗಿದ್ದೇನೆ, ಈ ನನ್ನ ವ್ಯಕ್ತಿತ್ವ ರೂಪಿಸಿರುವುದು ಕೆನರಾ ಸಂಸ್ಥೆ. 30 ವರ್ಷಗಳಿಂದ ಕೆನರಾ ಕಾಲೇಜು ಆರಂಭಿಸಿದ ಉತ್ಸವ ಮುಂದುವರಿಸಿಕೊಂಡು ಬಂದಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಸೃಜನಶೀಲತೆಗೆ ಇಂತಹ ಕಾರ್ಯಕ್ರಮ ವೇದಿಕೆಯಾಗುತ್ತದೆ. ಸಬಲ ಹಾಗೂ ಉತ್ತಮ ನಾಗರಿಕರನ್ನು ರೂಪಿಸಲು ಕಾರಣವಾಗುತ್ತದೆ" ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಸ್ಮರಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಯಭಾರತಿ ಕೆ.ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಪರ್ಧೆಯಲ್ಲಿ 'ಕಮರ್ಷಿಯ' ವಿಭಾಗದ ಸಮಗ್ರ ಪ್ರಶಸ್ತಿಯನ್ನು ತೃಷಾ ವಿದ್ಯಾ ಕಾಲೇಜು ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಟಪಾಡಿ ಹಾಗೂ 'ಸೈನ್ಟಿಕಾ' ಸಮಗ್ರ ಪ್ರಶಸ್ತಿಯನ್ನು ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆ ಮಂಗಳೂರು ಪಡೆದುಕೊಂಡಿತು. ಕಾಲೇಜಿನ ಸಂಚಾಲಕರಾದ ಸಿಎ ಎಂ. ಜಗನ್ನಾಥ ಕಾಮತ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನಿಲ ಇವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಕು. ಪ್ರಿಯಾಂಕ ಸ್ವಾಗತಿಸಿ, ಶ್ರೀಮತಿ ಪೂರ್ಣಿಮಾ ವಂದಿಸಿದರು. ವಿದ್ಯಾರ್ಥಿನಿಯರಾದ ಕು.ಶ್ವೇತಾ ಪ್ರಾರ್ಥಿಸಿದರು. ಕು.ಸೃಷ್ಟಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ