|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಕಲಶೋತ್ಸವ; ಇಂದು ಸಹಸ್ರ ಕುಂಭಾಭಿಷೇಕ

ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಬ್ರಹ್ಮಕಲಶೋತ್ಸವ; ಇಂದು ಸಹಸ್ರ ಕುಂಭಾಭಿಷೇಕ


ಉಡುಪಿ: ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಿಯ ದೇವಳದ ಬ್ರಹ್ಮಕಲಶೋತ್ಸವ ಪರ್ವವು ಬಹಳ ವಿಜೃಂಭಣೆಯಿಂದ ನ: ಭೂತೋ ನ: ಭವಿಷ್ಯತಿ ಎನ್ನುವಂತೆ ಆಚರಿಸಲ್ಪಡುತ್ತಿದೆ. ಭಕ್ತ ಸಮೂಹದ ದಂಡೇ ಸೇವೆ ಹಾಗೂ ದರ್ಶನಕ್ಕೆ ಬರುತ್ತಿದೆ. ಜೂನ್ 8 ರಂದು ಸಹಸ್ರ ಕಲಶಾಭಿಷೇಕ ನಡೆಯಲಿದ್ದು ಪ್ರತಿ ದಿನ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವತ್ತಾಗಿ ನಡೆಯುತ್ತಿದೆ. ಒಟ್ಟಾರೆ ಶ್ರೀ ದೇವಳ ಭೂಲೋಕದ ಸ್ವರ್ಗದಂತೆ ಅಲಂಕರಿಸಲ್ಪಟ್ಟಿದೆ.


ಈ ಸಂದರ್ಭದಲ್ಲಿ ಉಡುಪಿ ತಾಲ್ಲೂಕಿನ ಬ್ರಾಹ್ಮಣ ಸಭಾ ಕಡಿಯಾಳಿ ವಲಯವು ಶ್ರೀದೇವಳದಲ್ಲಿ ಇದೇ ತಿಂಗಳ ದಿನಾಂಕ 3 ರಿಂದ ನಿರಂತರವಾಗಿ ಒಂಬತ್ತರ ವರೆಗೆ ಪ್ರತೀದಿನ ಮುಂಜಾನೆ 8 ಗಂಟೆಯಿಂದ 8.45ರ ವರೆಗೆ  ವಿಷ್ಣು ಸಹಸ್ರನಾಮ, ಕೃಷ್ಣಾಷ್ಟೋತ್ತರ, ವೆಂಕಟೇಶ ಸ್ತೋತ್ರ ಹಾಗೂ ಶ್ರೀ ಸೂಕ್ತಾದಿ ಪಾರಾಯಣ ಕಾರ್ಯಕ್ರಮವನ್ನು ಉಡುಪಿಯ ಸುತ್ತಮುತ್ತಲಿನ ಎಲ್ಲ ಬ್ರಾಹ್ಮಣ ವಲಯಗಳ ವಿಪ್ರಮಹಿಳೆಯರು ಹಾಗೂ ಮಹನೀಯರ ಉಪಸ್ತಿತಿಯಲ್ಲಿ ಅತೀ ಹೆಚ್ಚಿನ ಸಂಖೆಯ ಭಾಗವಹಿಸುವಿಕೆಯೊಂದಿಗೆ ಬಹಳ  ಭಕ್ತಿಭಾವದಿಂದ ನಡೆಸುತ್ತ ಮಾತೆ ಮಹಿಷ ಮರ್ದಿನಿಯನ್ನು ಸಮಸ್ತ ಲೋಕಕ್ಕೆ ಹಿತವಾಗಲಿ ಎ೦ದು ಪ್ರಾರ್ಥಿಸುತ್ತಿದ್ದಾರೆ.

-ರಾಜೇಶ್ ಭಟ್ ಪಣಿಯಾಡಿ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post