ಕಿರು ಕಾದಂಬರಿ: ದೊಂಬಿ- ಭಾಗ 9

Upayuktha
0



ಷಣ್ಮುಗ ಈಗ ಹತ್ತನೇ ತರಗತಿ ಪಾಸಾಗಿದ್ದಾನೆ. ಆಟೋಟಗಳಲ್ಲಿ ಒಳ್ಳೆಯ ಪ್ರಗತಿಯನ್ನು ಸಾಧಿಸಿದ್ದಾನೆ. ಹಲವಾರು ಪ್ರಶಸ್ತಿಗಳು ಬಂದಿವೆ. ಅವನು ತನ್ನ ತಾಯಿಯನ್ನು ಒಪ್ಪಿಸಿ ಬೆಂಗಳೂರಲ್ಲಿ ಕಾಲೇಜು ಕಲಿಯುವ ಆಶೆಯನ್ನು ಹೇಳುತ್ತಿದ್ದ. ಮಾಲತಿಯು ಹಲವು ಬಾರಿ ಕಣ್ಣನಿಗೆ ಈ ಸೂಚ್ಯ ವಿಷಯವನ್ನು ತಿಳಿಸಿದ್ದಳು. ಆದರೆ ಯಾವುದೇ ಧೃಢ ನಿರ್ಧಾರ ತೆಗೆದಿದ್ದಿಲ್ಲ. ಈ ಸಾರಿ ತಾನು ಬೆಂಗಳುರಿನ ಕಾಲೇಜಿನಲ್ಲಿ ಓದುವುದೆಂದು ಹಠ ಹಿಡಿದಾಗ ಕಣ್ಣನು ಸೀರಿಯಸ್ ಆಗಿ ನಿರ್ಧರಿಸಲೇ ಬೇಕಾಯಿತು. ಮೊದಲಿಗೆ ಅವನು ಬೆಂಗಳೂರಿಗೆ ಬಂದು ತನ್ನ ದೂರ ನೆಂಟನೊಬ್ಬನನ್ನು ಕಂಡು ಹಿಡಿದು ಅಲ್ಲಿ ಕೆಲಸ ಕೇಳಿದರೆ ಮೇಸ್ತ್ರಿಕೆಲಸ ರೆಡಿಯಾಗಿತ್ತು. 

ಅದು ಹೆಣ್ಣೂರು ಮೈನ್  ರೋಡ್, ಅಲ್ಲಿಂದ ಮುಂದೆ ಹೊರಮಾವು ಅಗರ ಈ ವಠಾರಗಳಲ್ಲಿ ಹತ್ತು ಹನ್ನೆರಡು ಅಂತಸ್ತುಗಳ ಹಲವರು ಕಟ್ಟಡಗಳು ಮೇಲೇಳುತ್ತಿದ್ದವು.


ಹಾಗೆಯೆ ಅವನು ವಾಸಕ್ಕೆಂದು ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಹೆಣ್ಣೂರಿನಲ್ಲಿ ಪಡೆದಿದ್ದಾಯಿತು, ಮುಂದಿನ ವಾರವೇ ಬೆಂಗಳೂರಿಗೆ ಬರಬೇಕೆಂದು ವ್ಯವಸ್ಥೆಯನ್ನು ಮಾಡಿದ್ದಾಯಿತು. ಒಂದು ಸಂಸಾರಕ್ಕೆ ಬೇಕಾದ ವಸ್ತುಗಳನ್ನು ಒಂದು ಮಿನಿ ಟೆಂಪೊದಲ್ಲಿ ತುಂಬಿಸಿ ತಂದದ್ದಾಯಿತು. ಕಣ್ಣ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದಾನೆ. ಮಾಲತಿ ಮನೆಕೆಲಸಗಳಿಗೆ ಹೋಗುತ್ತಿದ್ದಾಳೆ. ಷಣ್ಮುಗ ಬೆಳಿಗ್ಗೆ ಬೇಗ ಎದ್ದು ಪೇಪರ್ ಹಂಚುವ ಕಾರ್ಯ ಮತ್ತು ಮೂರು ಕಾರುಗಳನ್ನು ತೊಳೆದು ಸ್ವಚ್ಚಮಾಡುವ ಕೆಲಸ ಮಾಡುತ್ತಾನೆ. ಕಣ್ಣ ತಿಂಗಳಿಗೆ ಕಡಿಮೆ ಎಂದರೂ ಹದಿನೈದು ಸಾವಿರ ಸಂಪಾದನೆ ಮಾಡಿದರೆ ಮಾಲತಿ ಆರು ಸಾವಿರ ಮತ್ತು ಷಣ್ಮುಗ ನಿಗೆ ತಿಂಗಳಿಗೆ ಎರಡು ಸಾವಿರಕ್ಕೆ ಕಡಿಮೆಯಿಲ್ಲದಂತೆ ದುಡಿಮೆಯಿದೆ. ಷಣ್ಮುಗ ತನ್ನ ದೈನಂದಿನ ಖರ್ಚು ಮತ್ತು ಆಟ ಪಾಠಗಳಿಗೆ ಪುಸ್ತಕಗಳಿಗೆ ಬೇಕಾಗುವ ದುಡ್ಡನ್ನು ದುಡಿದೇ ಸಂಪಾದನೆ ಮಾಡುತ್ತಾನೆ. ಬೆಳಿಗ್ಗೆ ಆರುಗಂಟೆಯಿಂದ ಏಳುವರೆ ವರೆಗೆ ಪೇಪರ್ ಹಂಚಿದರೆ, ಹದಿನೈದು ನಿಷಕ್ಕೆ ಎಂದು ಕಾರಿನಂತೆ ಮೂರು ಕಾರುಗಳನ್ನು ಒಂದು ಅಪಾರ್ಟ್ಮೆಂಟ್ ನಲ್ಲಿ ತೊಳೆಯಬೇಕು. ಅಲ್ಲಿಂದ ಎಂಟು ಎಂಟುವರೆಗೆ ಮನೆಗೆ ಬಂದು ತಿಂಡಿಮಾಡಿ ಮತ್ತೆ ಕಾಲೇಜಿಗೆ ಹೋದರೆ ಮತ್ತೆ ಬರುವುದು ಆರು ಏಳು ಗಂಟೆಗೆ. ಅಷ್ಟು ಹೊತ್ತಿಗೆ ಮಾಲತಿಯ ಮಾಲೀಕರ ಮನೆಯ ಕೆಲಸಗಳು ಆಗಿರುತ್ತವೆ.


ಹೆಚ್ಚಿನ ದಿನಗಳು ಸಂಜೆ ಬರುವಾಗ ಮಾಲೀಕರ ಮನೆಯಿಂದ ಏನಾದರು ಮಿಕ್ಕಿದ ತಿಂಡಿ ತಿನಿಸುಗಳನ್ನು ತರುವುದ್ದಿದೆ. ಎಲ್ಲರಿಗಿಂತ ತಡವಾಗಿ ಬರುವುದೆಂದರೆ ಕಣ್ಣ, ಅವನು ಎಲ್ಲಕೆಲಸ ಮುಗಿಸಿ ಬರುವಾಗ ಏಳು ಗಂಟೆಯಾಗುತ್ತದೆ. ಆದರೆ ಈಗ ಅವನು ಹೆಚ್ಚು ಕುಡಿಯುವುದಿಲ್ಲ. ವಾರಕ್ಕೆ ಒಂದು ಬಾರಿಯೋ ಇಲ್ಲ ಎರಡು ಬಾರಿಯೋ, ಅವನು ಕುಡಿದು ಬಂದಾಗಲೆಲ್ಲ ಷಣ್ಮುಗ ಮತ್ತು ಮಾಲತಿ ಅವನನ್ನು ಪ್ರತಿರೋಧಿಸುತ್ತಿದ್ದುದರಿಂದ ಅವನಿಗೂ ಅದು ಇರಿಸುಮುರಿಸು ತರುತ್ತಿತ್ತು.


(ಶಂಕರ ಭಟ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top