
ಷಣ್ಮುಗ ಉತ್ತಮ ಕೆಲಸಗಾರ, ತಾಂತ್ರಿಕ ತತ್ರಾಂಶಗಳ ವಿಷಯದಲ್ಲಿ ಆತನದು ಚಾಣಕ್ಷ್ಯ ಮತಿ. ಯಾವುದೇ ಸಮಸ್ಯೆಗಳಿರಲಿ ಅದು ತಾಂತ್ರಿಕವೇ ಅಥವಾ ವ್ಯವಹಾರಕ್ಕೇ ಸಂಬಂಧಿಸಿದ್ದೆ ಆಗಿರಲಿ ಅವನು ಅದನ್ನು ಸುಲಭವಾಗಿ ಪರಿಹರಿಸಬಲ್ಲ. ಅಂತೆಯೆ ಅವನು ಈಗ ಸಂಸ್ಥೆಯ ಪ್ರೊಜೆಕ್ಟ್ ವಿಭಾಗಾಲ್ಲಿ ಟೀಮ್ ಲೀಡರ್ ಆಗಿ ಭಡ್ತಿ ಪಡೆದಿದ್ದಾನೆ. ತಿಂಗಳಿಗೆ ಈಗ ಐವತ್ತೈದು ಸಾವಿರಗಳ ಸಂಬಳವಿದೆ. ಇದೇ ರೀತಿಯಲ್ಲಿ ಅವನು ಮುಂದುವರಿದರೆ ಮುಂದಿನ ವರ್ಷದಲ್ಲಿ ಅವನು ಪ್ರೊಜೆಕ್ಟ್ ಮೇನೇಜರ್ ಆಗಿ ಭಡ್ತಿ ಪಡೆಯುವುದರಲ್ಲಿ ಸಂಶಯವೇ ಇಲ್ಲ, ಈಗ ಅವನು ಹದಿನೇಳು ಮಂದಿ ತಂತ್ರಜ್ಞಾನಿಗಳ ತಂಡದ ಲೀಡರ್. ಅವರ ಕೆಲಸ ಆಸ್ಪತ್ರೆಯ ವಿವಿಧ ವಿಭಾಗಗಳ ಕಾರ್ಯಗಳನ್ನು ತಂತ್ರಜ್ಞಾನಕ್ಕೆ ಅಳವಡಿಸುವುದು. ಅದು ರೋಗಿಗಳ ಪ್ರಾಥಮಿಕ ಭೇಟಿಯಿಂದ ಹಿಡಿದು ಹೊರ ಮತ್ತು ಒಳ ರೋಗಿಗಳ ಸಂಪೂರ್ಣ ವಿವರಗಳನ್ನು ಕ್ಷಣಾರ್ಧಲ್ಲಿ ದಾಖಲೀಕರಿಸಬಲ್ಲ ತತ್ರಾಂಶಗಳ ಸಂಗ್ರಹ ಕ್ರಮ. ಅದು ಒಂದು ವರ್ಷದ ಕಾರ್ಯ ಯೋಜನೆ.
ಅದನ್ನು ಸಾಧಿಸಿ ತೋರಿದಲ್ಲಿ ಆ ಜ್ಞಾನವನ್ನು ಕಂಪ್ಯೂಟರ್ ಸಿಡಿ ಯನ್ನಾಗಿ ಮಾಡಿ ಪ್ರಪಂಚದಾದ್ಯಂತ ಯಾವುದೇ ಆಸ್ಪತ್ರೆಗಳಿಗೆ ಅದನ್ನು ಮಾರಾಟ ಮಾಡಬಹುದು. ಖರ್ಚು ಒಟ್ಟು ಹತ್ತಿಪ್ಪತ್ತು ಮಂದಿಯ ಸಂಬಳ ಮತ್ತು ಅವರ ಜ್ಞಾನ ಭಂಡಾರವನ್ನು ಆ ಸಿಡಿಯಲ್ಲಿ ಭಟ್ಟಿ ಇಳಿಸಿದರೆ ಮತ್ತೆ ಅದು ಚಿನ್ನದ ಮೊಟ್ಟೆಯನ್ನಿಡುವ ಕೋಳಿ. ಜೀವನ ಪರ್ಯಂತ ಅದರ ಮಾರಾಟ ಮಾಡಿದರೆ ಆ ಕಂಪನಿ ಗಳಿಸುವ ಮೊತ್ತವೆಷ್ಟೆಂಬುದನ್ನು ನೋಡಿ. ಇದು ಕಂಪ್ಯೂಟರ್ ತತ್ರಾಂಶದ ಕಂಪೆನಿಗಳ ಐಸಿರಿಯ ಗುಟ್ಟು. ಈ ತರಹದ ಜ್ಞಾನ ಭಂಡಾರವು ಭಾರತದಲ್ಲಿ ಇರುವುದರಿಂದಲೇ ಜಗತ್ತಿನ ತಾಂತ್ರಿಕಾಭಿವೃಧ್ಧಿ ಪಡೆದ ರಾಷ್ಟ್ರಗಳಲ್ಲಿ ಭಾರತವೂ ಒಂದು.
ಷಣ್ಮುಖ ಈಗ ಪ್ರೊಜೆಕ್ಟ್ ಮೇನೇಜರ್ ಆಗಿಯೂ ಕೆಲಸಮಾಡಬಹುದು ಅಲ್ಲವೆಂದರೆ ಅವನು ಟ್ರೈನರ್ ಆಗಿಯೂ ಕೆಲಸಮಾಡಬಹುದು. ಟ್ರೈನೆರ್ ಆಗಿ ಕೆಲಸಮಾಡುವುದಿದ್ದರೆ ಅವನಿಗೆ ಎರಡುತಿಂಗಳ ಪ್ರಾಕ್ಟಿಕಲ್ ಟ್ರೈನಿಂಗ್ ಹೈದರಾಬಾದ್ ನಲ್ಲಿ ಪಡೆಯ ಬೇಕು, ಅದು ಮುಗಿದ ಕೂಡಲೇ ಅವನಿಗೆ ಅಮೇರಿಕಾದ ಲೋಸ್ ಏಂಜೆಲ್ಸ್ ನ ತಮ್ಮದೆ ಕಂಪೆನಿಯಲ್ಲಿ ಮೂರುತಿಂಗಳಿಗೆಂದು ಹೋಗಬೇಕು. ಅದು ಬೇಡವೆಂದಾದಲ್ಲಿ ಅವನು ಮತ್ತುಒಂದು ಶಾಲಾ ತತ್ರಾಂಶಗಳನ್ನೊಳಗೊಂಡ ತತ್ರಾಂಶ ಶೇಖರಣಾ ವಿಷಯದಬಗ್ಗೆ ಸೋಫ್ಟ್ ವೇರ್ ತಯಾರು ಮಾಡಬೇಕಾಗಿತ್ತು. ಅದಕ್ಕೂ ಹತ್ತೊಂಭತ್ತು ಜನ ತತ್ರಾಂಶ ಎಂಜಿನಿಯರುಗಳು ಅವನ ಕೈಗೆಳಗಿರುತ್ತಾರೆ. ಅಲ್ಲಿ ಅವರ ಕೆಲಸ ಒಂದು ಮಗು ಒಂದು ಶಾಲೆಗೆ ಸೇರುವಾಗಿನ ಪ್ರಕ್ರಿಯೆಯಿಂದು ಶಾಲೆಯಿಂದ ವಿಧ್ಯಾಭ್ಯಾಸ ಮುಗಿಸಿ ಹೊರ ಬರುವಾಗಿನ ವಿವರಗಳ ಸಂಗ್ರಹಗಳ ತತ್ರಾಂಶಗಳ ಅಡಕದ ಸಿಡಿ ಯನ್ನು ತಯಾರು ಮಾಡುವಂತಹದು. ಷಣ್ಮುಗ ತಾನು ಅಮೇರಿಕಕ್ಕೆ ಹೋಗುವ ಪ್ರೊಮೋಷನ್ ಪಡೆದುಕೊಂಡ. ಹಾಗೆಂದು ಪಾಸ್ಪೋರ್ಟ್ ಮಾಡಿಸಿದ್ದೂ ಆಯಿತು. ಈಗ ಹೈದರಾಬಾದ್ ನಲ್ಲಿ ಟ್ರೈನಿಂಗ್ ನಲ್ಲಿದ್ದಾನೆ. ಇನ್ನು ಎರಡು ತಿಂಗಳು, ಮತ್ತೆ ಅಲ್ಲಿಂದ ಬಂದ ಒಂದು ವಾರದ ನಂತರ ಲೋಸ್ ಏಂಜೆಲ್ಸ್ ಗೆ ಹೋಗಬೇಕು. ಈ ವಿವರಗಳನ್ನು ಷಣ್ಮುಗ ತನ್ನ ತಾಯಿ ಮತ್ತು ತಂದೆಗೆ ತಿಳಿಸಿದರೂ ಅವರಿಗೆ ಅದೆನೂ ಅರ್ಥವಾಗಲಿಲ್ಲ. ಆದರೆ ಅವರಿಗೆ ತನ್ನ ಮಗ ಬಹು ದೊಡ್ಡ ಸಾಧನೆಯನ್ನು ಮಾಡಿದ್ದಾನೆ, ಹಾಗೆ ಅವನಿಗೆ ದುಬೈ ಹೋಗುವ ಕೆಲಸವಿದೆ ಎಂದು ಮಾತ್ರ ಗೊತ್ತಾಯಿತು.
ದುಬೈ? ಹೌದು, ದುಬೈ- ಅಶಿಕ್ಷಿತರ ಸ್ವರ್ಗ ಅದು. ತಮ್ಮ ಊರು ಬಿಟ್ಟು ಹೊರದೇಶಕ್ಕೆ ಹೋಗುವುದೆಂದರೆ ಅದು ದುಬೈಗೆ. ಜಗತ್ತಿನ ಐವತ್ತಾರು ಅರಬ ರಾಷ್ತ್ರಗಳ ಪೈಕಿ ಯಾವುದೇ ಮೂಲೆಗೆ ಹೋಗಲ್ಲಿ, ಅವರ ಅಶಿಕ್ಷಿತ ತಂದೆ ತಾಯಿ ಹೇಳುವುದು ತಮ್ಮ ಮಗ ದುಬೈಗೆ ಹೋಗಿದ್ದಾನೆ ಎಂದು, ಅವರಿಗೆ, ಕುವೈತ್, ಮಸ್ಕತ್, ಇತ್ಯಾದಿ ದೇಶಗಳ ಪರಿಚಯವಿಲ್ಲ. ಆದರೆ ದುಬೈ ಎಂದರೆ ಗೊತ್ತು, ಅಲ್ಲಿ ಹೋಗುವವರು ಹಣವನ್ನು ಬಾಚಿ ಬಾಚಿ ಕೊಂಡು ಬರುತ್ತಾರೆ ಎಂಬುದು ಅವರ ಅನಿಸಿಕೆ. ಇದಕ್ಕೆ ಮಾಲತಿ ಮತ್ತು ಅವಳ ಗಂಡ ಕಣ್ಣ ಹೊರತಲ್ಲ. ಅವರಿಗೆ ಕೆನಡಾ ಅಮೇರಿಕ, ಜಿಂಬಾಬ್ವೆ ಸಿಡ್ನಿ ಎಂದರೆ ಗೊತ್ತಿಲ್ಲ, ಅವರಿಗೆ ಗೊತ್ತಿರುವ ಒಂದೇ ವಿದೇಶದ ಊರು ಎಂದರೆ ಅದು ದುಬೈ.
(ಶಂಕರ ಭಟ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ